ಒಂದು ವಾರದೊಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ.
ಸಿಂಧನೂರು : ಜೂನ್ 30 ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಅಸಡ್ಡೆ ಮತ್ತು ಬೇಜವಾಬ್ದಾರಿತನದ ನಡುವಳಿಕೆ ವಿರುದ್ಧ ವಿವಿಧ ಬೇಡಿಕೆಗಳನ್ನು ಒಂದು ವಾರದೊಳಗೆ ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮ ಪಂಚಾಯತ್ ಸದಸ್ಯರ ಒಕ್ಕೂಟ ಎಚ್ಚರಿಕೆ ನೀಡಿದರು.
ನಗರದ ಎಪಿಎಂಸಿ ಗಣೇಶ ಗುಡಿಯಿಂದ ಹೊರಟ ಪ್ರತಿಭಟನೆ ಮೆರವಣಿಗೆ ಅಧಿಕಾರಿಗಳ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಕೂಗುತ್ತಾ ಅವರ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ತಾಲೂಕಿನ ಒಟ್ಟು 30 ಗ್ರಾಮ ಪಂಚಾಯತಿ ಅಧ್ಯಕ್ಷರು , ಉಪಾಧ್ಯಕ್ಷರು, ಸದ್ಯಸರು ಸೇರಿ ಮಿನಿ ವಿಧಾನಸೌಧದ ಮುಂದೆ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳಳಲಾಗಿತ್ತು.

ಧರಣಿ ಸ್ಥಳದಲ್ಲಿ ಮಸ್ಕಿ ಶಾಸಕ ಬಸನಗೌಡ ತುರ್ವಿಹಾಳ ಮಾತನಾಡಿ ಗೆದ್ದಂತ ಸದಸ್ಯರುಗಳು ಒಗ್ಗಟ್ಟಾಗಿದ್ದರೆ ಅಧಿಕಾರಿಗಳು ನಮ್ಮ ಮಾತುಗಳನ್ನು ಕೇಳುತ್ತಾರೆ, ಕೆಲವು ಅಧಿಕಾರಿಗಳು ಜನಪ್ರತಿನಿಧಿಗಳ ಪೋನ ರಿಸೀವ್ ಮಾಡಲ್ಲ, ಅಂದ ಮೇಲೆ ಜನಸಾಮಾನ್ಯರ ಪೋನ ಯಾವಾಗ ರಿಸೀವ್ ಮಾಡುತ್ತಾರೆ. ಸರ್ಕಾರದ ಆದೇಶವಿದ್ದರು ಪಾಲಿಸುತ್ತಿಲ್ಲ. ಜನಪ್ರತಿನಿಧಿಗಳು ಬೀದಿಗಿಳಿದು ಹೋರಾಟ ಮಾಡುತ್ತಿರುವುದು ರಾಜ್ಯದಲ್ಲಿಯೇ ಇದೇ ಮೊದಲು ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ ಮಾತನಾಡಿ ಶಾಸಕರ ನೇತೃತ್ವದಲ್ಲಿ ಎಲ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರ ಸಭೆ ಸೇರಿ ಇದರ ಬಗ್ಗೆ ಚರ್ಚೆ ಮಾಡಿ ಸರಿ ಮಾಡುವಂತ ಕೆಲಸ ಮಾಡೋಣ ಎಂದರು.
ಕೆ. ಕರಿಯಪ್ಪ ಮಾತನಾಡಿ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಸದಸ್ಯರು ಹೇಗೆ ಇರಬೇಕು ಎನ್ನುವದನ್ನು ನೀವು ಕಲಿತರೆ ಅಧಿಕಾರಿಗಳು ತಾನಾಗಿಯೇ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ. ತಾವು ಕುಳಿತಂತ ಕುರ್ಚಿಯಲ್ಲೆ ಅಧಿಕಾರ ನಡೆಸುವಂತ ಕೆಲಸ ಮಾಡಬೇಕು. ನೀವುಗಳು ಮುಖಂಡರುಗಳ ಬಾಷಣ ಕೇಳಿ ಮನವಿ ಪತ್ರ ಕೊಟ್ಟು ನಿಮ್ಮ ಮನೆಗೆ ನೀವು ಹೋದರೆ ಸಾಲದು ಅದಿಕಾರಿಗಳ ಮೇಲೆ ಸೂಕ್ತ ಕ್ರಮ ಆಗುವವರೆಗೂ ಹೋರಾಟ ಮಾಡಬೇಕು ಎಂದು ಧರಣಿನಿರತರಿಗೆ ತಿಳಿಸಿದರು.
ಪಿಡಿಓಗಳು ನಮ್ಮ ಮಾತು ಕೇಳುತ್ತಿಲ್ಲ. ಹಾಗಾದರೆ ನಾವು ಯಾರಿಗೆ ಹೇಳಬೇಕು ಎಂದು ಗ್ರಾ.ಪಂ ಸದಸ್ಯರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ರವಿಗೌಡ ಮಲ್ಲದಗುಡ್ಡ ಸದಸ್ಯರಿಗಾದ ನೋವನ್ನು ವ್ಯಕ್ತಪಡಿಸಿದರು.
ಗ್ರಾಮಗಳ ಅಭಿವೃದ್ಧಿಗೆ ನಿರ್ಲಕ್ಷ್ಯ ಮಾಡಿ ಬೇಜವಾಬ್ದಾರಿ ತನ ತೋರುವ ಅಧಿಕಾರಿಗಳ ವಿರುದ್ಧ ಬೀದಿಗಿಳಿದು ಹೋರಾಟ ಮಾಡುವಂತ ಪರಿಸ್ಥಿತಿಯಾಗಿದೆ ಎಂದು ಗ್ರಾ.ಪಂ.ಸದಸ್ಯರ ಒಕ್ಕೂಟದ ತಾಲೂಕು ಅಧ್ಯಕ್ಷರಾದ ಮಹಾಂತೇಶ ಹಿರೇಗೌಡ ಮಾತನಾಡಿದರು.
ಪಿಡಿಓಗಳು ನಮ್ಮ ಮಾತು ಕೇಳಬೇಕು ಅಂದರೆ ಅವರು ಗ್ರಾ.ಪಂ ಗೆ ಬರದಿದ್ದಾಗ ಹಾಜರಿ ಪುಸ್ತಕದಲ್ಲಿ ಸದಸ್ಯರು ಗೈರಾಹಾಜರಿ ಹಾಕಬೇಕು ಅಂದಾಗ ಮಾತ್ರ ಅವರಲ್ಲಿ ಭಯ ಬಂದು ಪ್ರತಿದಿನ ತಪ್ಪದೆ ಪಂಚಾಯಿತಿಗೆ ಬರುತ್ತಾರೆ ಎಂದು ಗ್ರಾಮ ಪಂಚಾಯಿತಿ ಚುನಾಯಿತಿ ಸದಸ್ಯರಿಗೆ ಬಸವರಾಜ ಹಿರೇಗೌಡರು ಸಲಹೆ ನೀಡಿದರು.
ತಾಲೂಕು,ಜಿಲ್ಲಾ,ಗ್ರಾಮ ಪಂಚಾಯತ್ ಅಧ್ಯಕ್ಷರುಗಳ ಸಹಿಗಳಿಗಿಂತ ಶಾಸಕರ ಸಹಿ ಮುಖ್ಯವಾಗಿರುವದರಿಂದ ಅಧಿಕಾರಿಗಳು ನಿಮ್ಮಗಳ ಮಾತುಗಳು ಕೇಳುತಿಲ್ಲ.ಗ್ರಾಮ ಪಂಚಾಯತಿ ಅಧಿಕಾರಿಗಳ ವೇತನ ಪಡಿಯಲು ಅಧ್ಯಕ್ಷರ ಸಹಿ ಇದ್ದರೆ ಮಾತ್ರ ವೇತನ ನೀಡಬೇಕು ಎನ್ನುವ ಆದೇಶ ಜಾರಿಗೆ ಬಂದಾಗ ಮಾತ್ರ ಅಧಿಕಾರಿಗಳು ನಿಮ್ಮ ಮಾತುಗಳನ್ನು ಕೇಳುತ್ತಾರೆ. ನಿಮ್ಮ ಹೋರಾಟ ನ್ಯಾಯಯುತವಾಗಿದೆ. ಜಿಲ್ಲಾ ಪಂಚಾಯತ್ ಸಿ ಇ ಓ ರವರು ಎರಡು ತಾಸಿನೊಳಗೆ ಬಂದು ಮನವಿ ಸ್ವೀಕರಿಸದಿದ್ದರೆ ರಸ್ತೆ ತಡೆ ಮಾಡಲಾಗುವುದು ಇದ್ದಕೆ ಪೊಲೀಸ್ ಇಲಾಖೆ ನೇರವಾಗಿ ಹೊಣೆಯಾಗುತ್ತದೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದ್ಯಸರಾದ ಶಿವನಗೌಡ ಗೋರೆಬಾಳ ಹೇಳಿದರು.
ಧರಣಿ ನಿರತ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪಂಚಾಯತಿ ಸಿಇಓ ರವರ ಪರವಾಗಿ ಉಪ ಕಾರ್ಯದರ್ಶಿ ಶಶಿಕಾಂತ್ ಶಿವಪೂರ್ ಇವರಿಗೆ ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ ಮಾಜಿ ಶಾಸಕ ಹಂಪನಗೌಡ ಬಾದರ್ಲಿಯವರು ಎಲ್ಲಾ ಗ್ರಾಮ ಪಂಚಾಯತ್ ಸದ್ಯಸರ ಬೇಡಿಕೆಗಳನ್ನು ಒಂದು ವಾರದೊಳಗೆ ಈಡೇರಿಸದಿದ್ದರೆ ಸದಸ್ಯರ ಜೊತೆಗೂಡಿ ಪಕ್ಷಾತೀತವಾಗಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಪಂಪನಗೌಡ ಬಾದರ್ಲಿ, ಬಸವರಾಜ ನಾಡಗೌಡ, ಎಂ ದೊಡ್ಡ ಬಸವರಾಜ, ಆದಿಮನಿ ವೀರಲಕ್ಷ್ಮೀ,ಶಿವನಗೌಡ ಗೊರೆಬಾಳ, ಪರಮೇಶಪ್ಪ , ಜಾಫರ್ ಅಲಿ ಜಾಹಗೀರ್ ದಾರ,ಗ್ರಾ.ಪಂ ಅಧ್ಯಕ್ಷರುಗಳಾದ ದುರುಗಪ್ಪನಾಯಕ,ನಾಗಲಿಂಗಪ್ಪ, ಸೀತಾರಾಮಯ್ಯ, ಶ್ರೀನಿವಾಸ,ಯಶೋಧ,ಈರಣ್ಣ,ದುರುಗಪ್ಪ ದಡೆಸೂಗುರು ಸೇರಿದಂತೆ 30 ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು , ಉಪಾಧ್ಯಕ್ಷರು ಹಾಗೂ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು…
ವರದಿ, ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
