;

ಗೋರೆಬಾಳ ಗ್ರಾ ಪಂ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ನೂತನ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ…!!!

ಗೋರೆಬಾಳ ಗ್ರಾ ಪಂ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ನೂತನ ಅಧ್ಯಕ್ಷ ಉಪಾಧ್ಯಕ್ಷ ಆಯ್ಕೆ.

ಸಿಂಧನೂರು : ಜೂನ್ 22. ತಾಲೂಕಿನ ಗೋರೆಬಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾಗಮ್ಮ ಗಂಡ ಬಸವರಾಜ ಉಪಾಧ್ಯಕ್ಷರಾಗಿ ಈರಮ್ಮ ಗಂಡ ಶರಣಬಸವ ರವರು ಆಯ್ಕೆಯಾಗಿದ್ದಾರೆ.

ಗೋರೆಬಾಳ ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸಾಮನ್ಯ ಮಹಿಳೆ ಉಪಾಧ್ಯಕ್ಷ ಸ್ಥಾನಕ್ಕೆ ಅನುಸುಚಿತ ಪಂಗಡ ಮೀಸಲಾತಿ ನಿಗದಿಪಡಿಸಲಾಗಿತ್ತು.ಅದರಂತೆ ಆವಿಶ್ವಾಸದಿಂದ ತೆರವಾಗಿರುವ ಸ್ಥಾನಕ್ಕೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗೆ ಜೂನ್ 22ರಂದು ಚುನಾವಣೆ ನಿಗದಿಯಾಗಿತ್ತು.1995ರ ನಿಯಮ 4ರನ್ವಯ ಎಲ್ಲಾ ಸದಸ್ಯರಿಗೆ ನೋಟೀಸ್ ಗಳನ್ನು ನೀಡಿ ಬೆಳಿಗ್ಗೆ10ರಿಂದ 11ಗಂಟೆಯವರೆಗೆ ನಾಮಪತ್ರ ಸಲ್ಲಿಸಲು ಸಮಯ ನಿಗದಿಪಡಿಸಲಾಗಿತ್ತು.ಅದರಂತೆ ಅಧ್ಯಕ್ಷ ಸ್ಥಾನಕ್ಕೆ ಅಂಬಮ್ಮ ಗಂಡ ಆದಯ್ಯ , ನಾಗಮ್ಮ ಗಂಡ ಬಸವರಾಜ ಉಪಾಧ್ಯಕ್ಷ ಸ್ಥಾನಕ್ಕಾಗಿ ದೇವಪ್ಪ ತಂದೆ ರಂಗಪ್ಪ , ಈರಮ್ಮ ಗಂಡ ಶರಣಬಸವ ನಾಮಪತ್ರ ಸಲ್ಲಿಸಿದ್ದರು.

ಮದ್ಯಾಹ್ನ 1ಗಂಟೆಗೆ ಪ್ರಾರಂಭವಾದ ಸಭೆಯಲ್ಲಿ ಒಟ್ಟು 31ಜನ ಗ್ರಾಮ ಪಂಚಾಯತ್ ಸದ್ಯಸರು ಹಾಜರಿದ್ದು ನಾಮ ಪತ್ರ ಹಿಂದಕ್ಕೆ ಪಡಿಯಲು 10ನಿಮಿಷಗಳ ಅವಧಿ ( ಸಮಯ 1-10ರಿಂದ 1-20ರವರಗೆ ) ನೀಡಲಾಗಿತ್ತು. ಈ ಅವಧಿಯಲ್ಲಿ ಅಭ್ಯರ್ಥಿಗಳು ಹಿಂದಕ್ಕೆ ಪಡೆದಿರುವದಿಲ್ಲ. ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಒಂದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿರುವದರಿಂದ ಚುನಾವಣೆ ಆಯ್ಕೆ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿತ್ತು ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಅಭ್ಯರ್ಥಿ ನಾಗಮ್ಮ ಗಂಡ ಬಸವರಾಜ 20ಮತಗಳು.ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಅಂಬಮ್ಮ ಗಂಡ ಆದಯ್ಯ 11ಮತಗಳು.
ಉಪಾಧ್ಯಕ್ಷ ಸ್ಥಾನಕ್ಕೆ ಈರಮ್ಮ ಗಂಡ ಶರಣಬಸವ 21ಮತಗಳು.ದೇವಪ್ಪ ತಂದೆ ರಂಗಪ್ಪ 10ಮತಗಳು ಚಲಾವಣೆಗೊಂಡಿದ್ದು.ನಾಗಮ್ಮ ಗಂಡ ಬಸವರಾಜ, ಅಂಬಮ್ಮ ಗಂಡ ಅದಯ್ಯಾ ರವರಿಗಿಂತ 9 ಅಧಿಕ ಮತಗಳನ್ನು ಪಡೆದಿರುವದರಿಂದ ಗೋರೆಬಾಳ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಈರಮ್ಮ ಗಂಡ ಶರಣಬಸವ , ದೇವಪ್ಪ ತಂದೆ ರಂಗಪ್ಪ ರವರಿಗಿಂತ 11ಅಧಿಕ ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆಂದು ಅಧಿಕೃತವಾಗಿ ಚುನಾವಣೆ ಅಧಿಕಾರ ಪವನಕುಮಾರ ಘೋಷಿಸಿದರು.

ಈ ಸಂದರ್ಭದಲ್ಲಿ ನೂತನವಾಗಿ ಆಯ್ಕಯಾದ ಅಧ್ಯಕ್ಷ ಉಪಾಧ್ಯಕ್ಷರಿಗೆ ಚುನಾವಣೆ ಅಧಿಕಾರಿ ಅಭಿನಂದನೆಗಳು ಸಲ್ಲಿಸಿದರು.

ಈ ಸಂದರ್ಭದಲ್ಲಿ ಮುಖಂಡರುಗಳಾದ ಮಾಜಿ ಶಾಸಕ ಹಂಪನಗೌಡ, ಬಾದರ್ಲಿ,ಬಸವರಾಜ ಹಿರೇಗೌಡ, ಬಾಬುಗೌಡ ಬಾದರ್ಲಿ ,ಸಣ್ಣ ಬೀಮನಗೌಡ, ರಂಗನಗೌಡ , ಹನುಮಂತ ಹಿರೇಕುರುಬರ,
ಹೊನ್ನೂರಪ್ಪ ಬೊವಿ, ಅಶೋಕ್ ,ಯಂಕಣ್ಣ ಗೋರೆಬಾಳ ಕ್ಯಾಂಪ್, ಪ್ರಸಾದ್ ರಾವ್. ಎಸ್, ಚಿಲುಕುರಿ ಪಾರ್ಥಸಾರಥಿ, ಕೆ. ನಾಗೇಶ್ವರಾವ್,
ರಾಮಸ್ವಾಮಿ,ಫಕೀರಪ್ಪ, ಓಬಳೇಶ್, ರಾಘವೇಂದ್ರ, ವೀರರಾಜ್,ಜವಳಿ ಕರೇಶ್,ಸೇರಿದಂತೆ ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನಿಸುವ ಸಂದರ್ಭದಲ್ಲಿ ಇದ್ದರು.
ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಪಿಐಗಳಾದ ಉಮೇಶ್ ಕಾಂಬಳೆ, ಪಿಎಸ್ ಐ ಗಳಾದ ಯರಿಯಪ್ಪ,ಸೌಮ್ಯ ಹಿರೇಮಠ,ಬಸವರಾಜ, ಚಂದ್ರಪ್ಪ, 50 ಕ್ಕೂ ಹೆಚ್ಚು ಸಿಬ್ಬಂದಿಗಳು ಬಂದೋಬಸ್ತ್ ಮಾಡಲಾಗಿತ್ತು..

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend