ನ್ಯಾಯಾಲಯ ಆದೇಶ ನೀರಾವರಿ ಇಲಾಖೆ ಪೀಠೋಪಕರಣ ಜಪ್ತಿ.
ಸಿಂಧನೂರು. ಜೂನ್.23.ರೈತರ ಭೂಮಿ ಸ್ವಾಧೀನ ಪಡಿಸಿಕೊಂಡು ರೈತರಿಗೆ ಹಣ ನೀಡದೆ ವಿಳಂಬ ಮಾಡಿದ ಕಾರಣ ನ್ಯಾಯಾಲಯ ಆದೇಶದ ಮೇರೆಗೆ ನೀರಾವರಿ ಇಲಾಖೆಯ ಪೀಠೋಪಕರಣಗಳನ್ನು ರೈತರು ಹಾಗೂ ನ್ಯಾಯವಾದಿಗಳ ಸಮ್ಮುಖದಲ್ಲಿ ನ್ಯಾಯಾಲಯ ಸಿಬ್ಬಂದಿಗಳು ಜಪ್ತಿಮಾಡಿಕೊಂಡು ಹೋದರು.
ತಾಲೂಕಿನ ಗೊರೆಬಾಳ ಗ್ರಾಮದ ಶ್ರೀನಿವಾಸ ಮತ್ತು ಶಕುಂತಲಾ ಎನ್ನುವ ರೈತರ ಭೂಮಿಯನ್ನು ಗೋರೇಬಾಳ ಪಿಕ್ ಆಪ್ ಡ್ಯಾಮ್ ಕಾಲುವೆಗೆ
1990 ರಲ್ಲಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು. ರೈತ ಶ್ರೀನಿವಾಸನಿಗೆ 3,11,000 ರೂ ಹಾಗೂ ಶಂಕುಂತಲಾ ಎನ್ನುವ ರೈತ ಮಹಿಳೆಗೆ 2,88,856 ರೂ ಹಣ ನೀಡದೆ 30 ವರ್ಷಗಳಿಂದ ನೀರಾವರಿ ಇಲಾಖೆ ಅಧಿಕಾರಿಗಳು ಸತಾಯಿಸಿದ ಕಾರಣ ರೈತರು ನ್ಯಾಯಾಲಯದ ಮೊರೆ ಹೋಗಿದ್ದರು. ರೈತರ ಪರವಾಗಿ ನ್ಯಾಯವಾದಿಗಳಾದ ಎಂ.ಶಶಿಕಾಂತ ಮತ್ತು ಗಿರೀಶ್ ಈಚನಾಳ ರೈತರ ಪರವಾಗಿ ನ್ಯಾಯಾಲಯದಲ್ಲಿ ವಾದ ಮಾಡಿದ ಮೇಲೆ ನ್ಯಾಯಾಲಯ ನೀರಾವರಿ ಇಲಾಖೆಯ ಪೀಠೋಪಕರಣಗಳನ್ನು ಜಪ್ತಿ ಮಾಡಿ ರೈತರಿಗೆ ಹಣ ನೀಡುವಂತೆ 10-06-2022 ರಂದು ಲಿಂಗಸುಗೂರು ಹಿರಿಯ ಸಿವಿಲ್ ನ್ಯಾಯಾಲಯ ಆದೇಶ ಮಾಡಿತ್ತು.
ನ್ಯಾಯಾಲಯ ಆದೇಶದ ಮೇರೆಗೆ ನ್ಯಾಯವಾದಿಗಳಾದ ಎಂ.ಶಶಿಕಾಂತ ಮತ್ತು ಗಿರೀಶ್ ಈಚನಾಳ ರೈತರಾದ ಶ್ರೀನಿವಾಸ ಮತ್ತು ಶಕುಂತಲಾ ಇವರ ಸಮ್ಮುಖದಲ್ಲಿ ನ್ಯಾಯಾಲಯದ ಆದೇಶ ಜಾರಿಕಾರರು ಹಾಗೂ ಅಮೀನ್ ಸಾಬ್ ಇವರು ನಗರದ ಕಾರ್ಯಪಾಲಕ ಇಂಜಿನಿಯರಿಂಗ್ ಯವರ ಕಚೇರಿ ತುಂಗಭದ್ರಾ ಎಡದಂಡೆ ಕಾಲುವೆ ವಿಭಾಗ ನಂ-3 ಸಿಂಧನೂರು ಕಚೇರಿಯ ಪೀಠೋಪಕರಣ ಜಪ್ತಿ ಮಾಡುವಾಗ ಇಲಾಖೆಯ ಅಧಿಕಾರಿಗಳು ನಾಪತ್ತೆಯಾಗಿದ್ದು ಅಧೀಕ್ಷಕ ಶಿವಕುಮಾರ ಮಾತ್ರ ಕಛೇರಿಯಲ್ಲಿದ್ದು ಪೀಠೋಪಕರಣ ಜಪ್ತಿ ಮಾಡುವುದನ್ನು ನೋಡಿ ಅಚ್ಚರಿ ಹಾಗೂ ಆಸಾಯಕತೆಯಿಂದ ನೋಡುತ್ತಿದ್ದರು.

ಕಚೇರಿಯ ಕಂಪ್ಯೂಟರ್ ಗಳು, ಕುರ್ಚಿಗಳು,ಫ್ಯಾನ್, ಯುಪಿಎಸ್ ಬ್ಯಾಟರಿ,ಸೇರಿದಂತೆ ಸಿಬ್ಬಂದಿಯನ್ನು ಹೊರತು ಪಡಿಸಿ ಪೀಠೋಪಕರಣ ಗಳನ್ನು ಜಪ್ತಿ ಮಾಡಿಕೊಂಡು ಲಿಂಗಸುಗೂರು ನ್ಯಾಯಾಲಯಕ್ಕೆ ತೆಗೆದುಕೊಂಡು ಹೋಗಲಾಯಿತು…

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
