;

ಸೊಸೈಟಿ ಅಧಿಕಾರಿಗಳ ಸಭೆ, ಶಾಸಕರಿಂದ ಅಧಿಕಾರಿಗಳಿಗೆ ಸೂಕ್ತ ಕ್ರಮದ ಎಚ್ಚರಿಕೆ…!!!

ಸೊಸೈಟಿ ಅಧಿಕಾರಿಗಳ ಸಭೆ, ಶಾಸಕರಿಂದ ಅಧಿಕಾರಿಗಳಿಗೆ ಸೂಕ್ತ ಕ್ರಮದ ಎಚ್ಚರಿಕೆ.

ಸಿಂಧನೂರು: ಜೂನ್ 20.ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಧ್ಯಾಹ್ನದ 3.00 ಘಂಟೆಗೆ ಶಾಸಕರ ಅಧ್ಯಕ್ಷತೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೆಶಕರು ತಾಲೂಕಿನ ವಿ.ಎಸ್.ಎಸ್ ಎನ್ ಸೊಸೈಟಿಗಳ ಕಾರ್ಯದರ್ಶಿ ಫೆಡರೇಷನ್, ಇನ್ಸೂ ರೇನ್ಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಸಭೆಯಲ್ಲಿ ಮಾತನಾಡಿದ ಶಾಸಕ ವೆಂಕಟರಾವ್ ನಾಡಗೌಡ ಅವರು ತಾಲೂಕಿಗೆ ಲಭ್ಯವಿರುವ ರಸಗೊಬ್ಬರ ಬೇರೆ ತಾಲೂಕಿಗೆ ಯಾಕೆ ಮಾರಾಟ ಮಾಡುತ್ತೀರಿ, ಸೊಸೈಟಿಯಲ್ಲಿ ಕಡಿಮೆ ಬೆಲೆಗೆ ಸಿಗುವ ರಸಗೊಬ್ಬರ ಮಾರ್ಕೆಂಟಿಂಗನಲ್ಲಿ ದುಬಾರಿ ಬೆಲೆಗೆ ಕೊಂಡುಕೊಳ್ಳುವಂತಹ ಪರಿಸ್ಥಿತಿ ರೈತರದಾಗಿದೆ ಇದನ್ನು ನೋಡಿ ನಾನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಮುಲಾಜಿಲ್ಲದೆ ಸಸ್ಪೆಂಡ್ ಮಾಡಲಾಗುವುದು.ರೈತರಿಗೆ ಗೊಬ್ಬರ ಕೊರತೆಯಾಗದಂತೆ ಸರ್ಕಾರದಿಂದ ಬಂದ ಡಿ.ಎ.ಪಿ, ಯೂರಿಯಾ, ಕಾಂಪ್ಲೆಕ್ಸ್ ಗೊಬ್ಬರ ಗಳನ್ನು ಸೊಸೈಟಿಗಳಿಗೆ ಮೊದಲು ಕೊಡಿ, ರೈತರಿಗೆ ರಸಗೊಬ್ಬರದ ಕೊರತೆಯಾಗದಂತೆ ನೋಡಿಕೊಳ್ಳಿ ಒಂದು ವೇಳೆ ಕೊರತೆ ಬಗ್ಗೆ ನನ್ನ ಗಮನಕ್ಕೆ ಬಂದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಫೆಡರೆಷನ್ ಕೃಷಿ ಇಲಾಖೆ ಅಧಿಕಾರಿಗಳಿಗೆ ಶಾಸಕರು ಖಡಕ್ಕಾಗಿ ಎಚ್ಚರಿಕೆ ನೀಡಿದರು.

5 ಕೋಟಿ ,65 ಲಕ್ಷ ರೂ 4,325 ಜನರಿಗೆ ಇನ್ಸೂರೆನ್ಸ್ ಬಂದಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. 2020 – 2021 ಸಾಲಿನಲ್ಲಿ ಕಳೆದ ವರ್ಷದಲ್ಲಿ ಸಾಲಗುಂದಾ ಸೊಸೈಟಿ 3 ಕೋಟಿ, ಉದ್ಧಾಳ – 2. 5 ಕೋಟಿ, ಆರ್.ಎಚ್ – ಕ್ಯಾಂಪ್ 1 ಕೋಟಿ ದಾಸ್ತಾನು ಆಗಿದೆಂದು ವಿ.ಎಸ್.ಎಸ್.ಎನ್ ಸೊಸೈಟಿ ಕಾರ್ಯದರ್ಶಿಗಳು ಮಾಹಿತಿ ನೀಡಿದರು.

ಇದೇ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ದೇವಿಕಾ, ಎಡಿ ಪ್ರಿಯಾಂಕ, ರಾಜಶೇಖರ, ಕಳಕಪ್ಪ ಸೇರಿದಂತೆ ಹಲವಾರು ಸೊಸೈಟಿ ಕಾರ್ಯದರ್ಶಿಗಳು ಸಭೆಯಲ್ಲಿ ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;