;

ಕೇಂದ್ರ ಬಿಜೆಪಿ ಸರ್ಕಾರ ದ್ವೇಷದ ಕಾರಣದ ಚಳ್ಳಕೆರೆ ನಗರದಲ್ಲಿ ಬೃಹತ್ ಪ್ರತಿಭಟನೆ…!!!

ಕೇಂದ್ರ ಬಿಜೆಪಿ ಸರ್ಕಾರ ದ್ವೇಷದ ಕಾರಣದ ಚಳ್ಳಕೆರೆ ನಗರದಲ್ಲಿ ಬೃಹತ್ ಪ್ರತಿಭಟನೆ.

ಚಳ್ಳಕೆರೆ ಶಾಸಕ ಟಿ ರಘುಮೂರ್ತಿ ರವರ ನೇತೃತ್ವದಲ್ಲಿ ಪ್ರತಿಭಟನೆ

ED ಮೂಲಕ ರಾಜಕೀಯವಾಗಿ ಕಾಂಗ್ರೆಸ್ ನಾಯಕರಿಗೆ ಅನವಶ್ಯಕ ತೊಂದರೆ ಕೊಡುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದು ಹೋರಾಟ.

ಕೇಂದ್ರ ಬಿಜೆಪಿ ಸರ್ಕಾರ ದ್ವೇಷದ ರಾಜಕಾರಣದಲ್ಲಿ ತೊಡಗಿದೆ. ನಮ್ಮ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಮತಿ ಸೋನಿಯಾಗಾಂಧಿ ಮತ್ತು ನಿಕಟಪೂರ್ವ ಅಧ್ಯಕ್ಷರಾದ ರಾಹುಲ್ ಗಾಂಧಿ ಅವರನ್ನ ED ಮೂಲಕ ರಾಜಕೀಯವಾಗಿ ಶೋಷಿಸಲು ಮುಂದಾಗಿದೆ. ಇದನ್ನ ಖಂಡಿಸಿ ಇಂದು ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಟಿ ರಘುಮೂರ್ತಿ ರವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಸನ್ಮಾನ್ಯ ಶ್ರೀ ಟಿ ರಘುಮೂರ್ತಿ ರವರು, ಕೇಂದ್ರ ಸರ್ಕಾರ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ಇಲ್ಲ ಸಲ್ಲದ ದೂರುಗ ಮೂಲಕ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸುತ್ತಿರುವುದು ಸಲ್ಲದು.

ನಮ್ಮ ನಾಯಕರಾದ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಹಾಗೂ ಸುನಿಯಾ ಗಾಂಧಿಯವನ್ನು ರಾಜಕೀಯ ದುರುದ್ದೇಶದಿಂದ ಹಿಂಸುತ್ತಿರುವುದು ಸರಿಯಲ್ಲ.

ರಾಜಕೀಯ ಪ್ರೇರಿತವಾಗಿರುವ ಇದೇ ಪ್ರಕರಣದಲ್ಲಿ 2015ರಲ್ಲಿಯೇ ಸ್ವತಃ ED ಹಗರಣ ನಡೆದಿಲ್ಲ ಎಂದು ಕೈ ಬಿಟ್ಟು, ನಮ್ಮ ರಾಷ್ಟೀಯ ನಾಯಕರು ಈಗಾಗಲೇ ಆರೋಪದಿಂದ ಮುಕ್ತರಾಗಿದ್ದಾರೆ. ಆದರೂ ದ್ವೇಷವನ್ನೇ ಉಸಿರಾಡುತ್ತಿರುವ ಬಿಜೆಪಿ ನಾಯಕರು ಅನ್ಯ ಮಾರ್ಗವಿಲ್ಲದೇ ಪುನಃ ಅದೇ ಪ್ರಕರಣವನ್ನ ಮುನ್ನೆಲೆಗೆ ತಂದು ಗುಜರಾತ್ ಚುನಾವಣೆಗೆ ಮುಂಚೆ ರಾಜಕೀಯ ಪಿತೂರಿ ಆರಂಭಿಸಿದೆ.

ಇದನ್ನು ವಿರೋಧಿಸಿ ರಾಷ್ಟ್ರದೆಲ್ಲೆಡೆ ಜನಸಾಮಾನ್ಯರು ಸೇರಿದಂತೆ ಇಡೀ ಪಕ್ಷ ಒಗ್ಗಟ್ಟಾಗಿ ಇಂದು ಬಿಜೆಪಿ ಸರ್ಕಾರದ ಸರ್ವಾಧಿಕಾರಿ ಧೋರಣೆ ವಿರುದ್ಧ ಒಕ್ಕೊರಲಿನ ಪ್ರತಿಭಟನೆ ನಡೆಸಿದೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ವಿರುದ್ಧ ಕೆಲಸ ಮಾಡುವ ಬಿಜೆಪಿಗೆ ತಕ್ಕ ಪಾಠ ಕಲಿಸುವವರೆಗೆ ಸುಮ್ಮನೆ ಕೂರುವ ಪ್ರಶ್ನೆಯೇ ಇಲ್ಲ. ಎಂದರು…

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;