;

PRESS ದುರ್ಭಳಕೆ ಸೂಕ್ತ ಕ್ರಮಕ್ಕೆ ಒತ್ತಾಯ…!!!

PRESS ದುರ್ಭಳಕೆ ಸೂಕ್ತ ಕ್ರಮಕ್ಕೆ ಒತ್ತಾಯ.

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನೆಲ್ಲೆಡೆಗಳಲ್ಲಿ,PRESS ಎಂದು ಸ್ಟಿಕರ್ ಹಾಕಿಕೊಂಡಿರುವ ವಾಹನಗಳ ಸಂಖ್ಯೆ ಮಿತಿ ಮೀರಿದೆ.
ಪತ್ರಿಕೆ ಹಂಚುವ ಕರ್ಥವ್ಯದಲ್ಲಿ ಮಾತ್ರ ಟ್ರಾಕ್ಸ್ ಗಳಿಗೆ ಅವಕಾಶ ನೀಡಬೇಕಿದೆ,ಉಳಿದ ಸಮದಲ್ಲಿ ಲೇಬಲ್ ಬಳಸದಂತೆ ಅಗತ್ಯ ಕ್ರಮ ಜರುಗಿಸಬೇಕಿದೆ. ಪೇಪರ್ ಸರಬರಾಜು ವಾಹನಗಳಿಗೆ ಲೇಬಲ್ ಬಳಸಲು ಸಮಯ ನಿಗದಿ ಮಾಡಬೇಕಿದೆ, ಆ ಸಮಯದಲ್ಲಿ ಮಾತ್ರ ಲೇಬಲ್ ಬಳಸಲು ಅವಕಾಶ ನೀಡಬೇಕಿದೆ.ಅಂದರೆ ಪತ್ರಿಕಾರಂಗದಲ್ಲಿ ವರದಿಗಾರಿಕೆ ಮಾಡುವ, ಅಥವಾ ಪತ್ರಿಕೆ ಸರಬರಾಜು ಮಾಡುವ ವಾಹನಗಳಿಗೆ ಹಾಕಿಕೊಳ್ಳಬಹುದಾಗಿದೆ. ಆದ್ರೆ ಕೆಲವು ವಾಹನಗಳನ್ನು ಬಳಕೆ ಮಾಡುವವರು,ಯಾವುದೇ ಪತ್ರಿಕೆ ಅಥವಾ ಮೀಡಿಯಾದಲ್ಲಿ ಕರ್ಥವ್ಯ ಮಾಡದವರಾಗಿರುತ್ತಾರೆ.ಇದು PRESS ಲೇಬಲ್ ದುರ್ಭಳಕೆಗೆ ಸಾಕ್ಷಿಯಾಗಿದ್ದು, ಕೂಡಲೇ ಇದು ನಿಲ್ಲಬೇಕಿದೆ ಪತ್ರಿಕಾ ಕಚೇರಿಯಿಂದ ಅಧೀಕೃತವಾಗಿ ನೇಮಗೊಂಡಿರುವವರು. ನೇಮಕಾತಿ ಆದೇಶ ಅಥವಾ ಐಡಿ ಕಾರ್ಡ್ ಹೊಂದಿರುವ ವರದಿ ಗಾರರು, ಅಥವಾ ಪತ್ರಿಕಾ ಕಚೇರಿಯಲ್ಲಿ ನೇಮಕಗೊಂಡ ಸಿಬ್ಬಂದಿ, ಪತ್ರಿಕಾ ಹಾಗೂ ಮೀಡಿಯಾ ರಂಗದಲ್ಲಿ ಪ್ರಮುಖ ಹುದ್ದೆಯಲ್ಲಿರುವರು ಮಾತ್ರ ತಮ್ಮ ವಾಹನಗಳಿಗೆ ಹಾಕಿಕೊಳ್ಳಬೇಕಿದೆ. ಕೂಡ್ಲಿಗಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆಗಳಲ್ಲಿ ತಮ್ಮ ಸ್ವಾರ್ಥ ಸಾಧನೆಗೆ PRESS ಬಳಸಲಾಗುತ್ತದೆ ಎಂಬ ದೂರು ಕೇಳಿಬಂದಿದೆ,ಇದು ಹೀಗೆ ಮುಂದುವರೆದಲ್ಲಿ ಪತ್ರಿಕಾ ರಂಗಕ್ಕೆ ಇರುವ ಗೌರವ ಕೆಲವೇ ಕಿಡಿಗೇಡಿಗಳಿಂದ ಹಾಗೂ ಸ್ವಾರ್ಥಸಾಧಕರಿಂದ ಧಕ್ಕೆ ಬರುತ್ತದೆ. ಕಾರಣ ಸಂಬಂಧಿಸಿದ ಇಲಾಖಾ ಉನ್ನತಾಧಿಕಾರಿಗಳು ಸಂಬಂಧಿಸಿದಂತೆ ಶೀಘ್ರವೇ ಶಿಸ್ಥು ಕ್ರಮಗಳನ್ನು ಕೈಗೊಳ್ಳಬೇಕಿದೆ. ಲೇಬಲ್ ಬಳಸುವ ವರದಿಗಾರರು ಕಚೇರಿಯಿಂದ ಪರವಾನಗಿ ಅಥವಾ ಅಧೀಕೃತ ದಾಖಲು ಖಡ್ಡಾಗೊಳಿಸಬೇಕಿದೆ,ಪರಿಶೀಲನೆ ವೇಳೆ ವಾಹನ ಲೇಬಲ್ ಪರವಾನಗಿ ದಾಖಲು ಸಲ್ಲಿಸಬೇಕಿದೆ. ಪ್ರೆಸ್ ಮಾಲೀಕರು ಅಥವಾ ಸಂಪಾದಕರಾಗಿದ್ದಲ್ಲಿ ಅಗತ್ಯ ದಾಖಲು ತಪಾಸಣೆ ಸಂದರ್ಭದಲ್ಲಿ ಹಾಜರು ಪಡಿಸುಚಂತೆ ಕ್ರಮ ಕೈಗೊಳ್ಳಬೇಕಿದೆ.ಅಂದಾಗ ಮಾತ್ರ PRESS ಲೇಬಲ್ ಗೆ ಗೌರವ ಸಿಗಲಿದೆ ಎಂದು, ಹಿರಿಯನಾಗರೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ……..

 

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;