ಉಜ್ವಲ್ ಬವಿಷ್ಯಕ್ಕಾಗಿ ಲಿಂಗಸುಗೂರಿನ ಜಿಟಿಟಿಸಿ ತಾಂತ್ರಿಕ ಶಿಕ್ಷಣ ಮಾದರಿ ಸಂಪರ್ಕಿಸಿ – ಅಶೋಕ ಭಜಂತ್ರಿ…!!!

ಉಜ್ವಲ್ ಬವಿಷ್ಯಕ್ಕಾಗಿ ಲಿಂಗಸುಗೂರಿನ ಜಿಟಿಟಿಸಿ ತಾಂತ್ರಿಕ ಶಿಕ್ಷಣ ಮಾದರಿ ಸಂಪರ್ಕಿಸಿ – ಅಶೋಕ ಭಜಂತ್ರಿ.

ಸಿಂಧನೂರು : ಜೂನ್ 1 ಲಿಂಗಸುಗೂರಿನ ಜಿಟಿಟಿಸಿ’ (GTTC) ಕಾಲೇಜು ತಾಂತ್ರಿಕ ಕೌಶಲ್ಯಭರಿತ ತರಬೇತಿ ನೀಡಿ ತನ್ಮೂಲಕ ಕೈಗಾರಿಕೆಗಳಿಗೆ ಮಾನವ ಸಂಪನ್ಮೂಲ ಒದಗಿಸುವ ದಿಟ್ಟ ಹೆಜ್ಜೆ ಇಟ್ಟಿದೆ.ಅದುವೇ,ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು ಕರ್ನಾಟಕ ರಾಜ್ಯ ಸರ್ಕಾರವು ಲಿಂಗಸುಗೂರುನಲ್ಲಿ 2005ರಲ್ಲಿ ಪ್ರಾರಂಭಿಸಿದೆ.ಉಜ್ವಲ್ ಬವಿಷ್ಯಕ್ಕಾಗಿ ಲಿಂಗಸುಗೂರಿನ ಜಿಟಿಟಿಸಿ ತಾಂತ್ರಿಕ ಶಿಕ್ಷಣ ಮಾದರಿ ಸಂಪರ್ಕಿಸಿ ಎಂದು ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಉಪನ್ಯಾಸಕ ಅಶೋಕ ಭಜಂತ್ರಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಈ ಕೇಂದ್ರದಲ್ಲಿ ದೀರ್ಘಾವಧಿಯ ಟೂಲ್ ಆಂಡ್ ಡೈ ಮೇಕಿಂಗ್ (ಡಿಟಿಡಿಎಮ್) 3+1* ಹಾಗೂ ಅಲ್ಪಾವಧಿಯ ಕೌಶಲ್ಯಾಭಿವೃದ್ಧಿ ತರಬೇತಿಗಳ ಸರ್ಟಿಫಿಕೇಟ್ ಕೋರ್ಸಗಳನ್ನು ನೀಡಲಾಗುತ್ತಿದೆ. ತಾಂತ್ರಿಕ ವೃತ್ತಿ ತರಬೇತಿ ಪಡೆಯಲಿಚ್ಚಿಸುವವರಿಗೆ ಈ ಡಿಟಿಡಿಎಮ್ ಕೋರ್ಸ ಅತ್ಯುತ್ತಮವಾದುದು. ಎಸ್‌ಎಸ್‌ಎಲ್‌ಸಿ ಪಾಸಾಗಿರುವ ವಿದ್ಯಾರ್ಥಿಗಳಿಗೆ 3+1 ವರ್ಷದ ಡಿಟಿಡಿಎಮ್ ಡಿಪ್ಲೋಮಾ ಕೋರ್ಸ ಹಾಗೂ ಅಲ್ಪಾವಧಿಯ ಕೋರ್ಸಗಳಿಗೆ 2022-23ನೇ ಶೈಕ್ಷಣಿಕ ವರ್ಷದ ಪ್ರವೇಶಕ್ಕಾಗಿ ಅಧಿಸೂಚನೆ ಹೊರಡಿಸಲಾಗಿದ್ದು, “ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇರೆಗೆ” ಪ್ರವೇಶಾತಿ ನೀಡಲಾಗುವುದು. ಡಿಟಿಡಿಎಮ್ ಕೋರ್ಸ: ಟೂಲ್ ಆಂಡ್ ಡೈ ಮೇಕಿಂಗ್ 3 ವರ್ಷದ ವಿಷಯಾಧಾರಿತ ತರಬೇತಿ ಹಾಗೂ 1 ವರ್ಷದ ಕಡ್ಡಾಯ ಕೈಗಾರಿಕಾ ತರಬೇತಿ ಒಳಗೊಂಡಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ರೂ. 10,000/-ರಿಂದ 16,500/- ಸಾವಿರದವರೆಗೆ ತರಬೇತಿ ಭತ್ಯೆಯನ್ನು ಕೈಗಾರಿಕಾ ತರಬೇತಿ ನೀಡುವ ಉದ್ಯಮವೇ ನೀಡುತ್ತದೆ. ಈ ಕೋರ್ಸಗೆ ಪವೇಶಾತಿ ಪಡೆಯಲು ಎಸ್‌ಎಸ್‌ಎಲ್ ಸಿ ವಿದ್ಯಾರ್ಹತೆ ಹೊಂದಿರಬೇಕು. ಹಾಗೂ ಐಟಿಐ ಪಾಸಾದವರಿಗೆ ಕೋರ್ಸನ 3ನೇ ಸೆಮೆಸ್ಟರ್‌ಗೆ ಸಂಸ್ಥೆಯ ನಿಯಮಾನುಸಾರ ಲ್ಯಾಟರಲ್ ಎಂಟ್ರಿ ಮೂಲಕ ನೇರ ಪ್ರವೇಶ ಪಡೆಯಲು ಅವಕಾಶವಿದೆ. ಟೂಲ್ ಆಂಡ್ ಡೈ ಮೇಕಿಂಗ್ ವಿಭಾಗದಲ್ಲಿ 60 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶವಿದೆ ಎಂದರು.

ವಿದ್ಯಾರ್ಥಿ, ಪಾಲಕರು ಆನ್‌ಲೈನ್ ಅರ್ಜಿ ಸಲ್ಲಿಸಲು https://gttc.karnataka.gov.in/ ವೆಬ್‌ ಸೈಟ್ ಲಿಂಕ್‌ನ್ನು ಬಳಸಿ ಅಥವಾ ನೇರವಾಗಿ ಉಪಕೇಂದ್ರಕ್ಕೆ ಭೇಟಿನೀಡುವ ಮೂಲಕ ಪ್ರವೇಶಾತಿ ಪಡೆಯಬಹುದು. ಅರ್ಜಿ ಸಲ್ಲಿಸಲು ದಿನಾಂಕ:10.06.2022 ಕೊನೆ ದಿನವಾಗಿರುತ್ತದೆ. ತರಬೇತಿ ಮುಗಿಸಿದ ವಿದ್ಯಾರ್ಥಿಗಳನ್ನು ಬಹುತೇಕ ಆ ಉದ್ಯಮದವರೇ ಕೆಲಸಕ್ಕೆ ಸೇರಿಸಿಕೊಳ್ಳುತ್ತಾರೆ. ಅಲ್ಲದೇ, ಈ ಕೋರ್ಸ ಮುಗಿಸಿದ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಹಾಗೂ ಅಂತರ್‌ ರಾಷ್ಟ್ರೀಯ ಮಟ್ಟದಲ್ಲಿ ಗಣನೀಯವಾಗಿ ಬೇಡಿಕೆ ಹೆಚ್ಚುತ್ತಲಿದೆ.

ಜಿಟಿಟಿಸಿಯಲ್ಲಿ ಟೂಲ್ ಆಂಡ್ ಡೈ ಮೇಕಿಂಗ್ ಡಿಪ್ಲೊಮಾ ಓದಿದ ವಿದ್ಯಾರ್ಥಿಗಳು ಮುಂದೆ ಉನ್ನತ ವ್ಯಾಸಂಗವಾದ ಇಂಜಿನೀಯರಿಂಗ್‌ನ 3 ನೇ ಸೆಮೆಸ್ಟರ್‌ಗೆ ಲ್ಯಾಟರಲ್ ಎಂಟ್ರಿ ಪ್ರವೇಶ ಹೊಂದಲು ಅವಕಾಶ ಸಹ ಇದೆ ಎಂದು ಹೇಳಿದರು.

ಹೆಚ್ಚಿನ ಮಾಹಿತಿಗಾಗಿ ಜಿಟಿಟಿಸಿ ಉಪಕೇಂದ್ರ ಲಿಂಗಸುಗೂರು ಸಂಪರ್ಕಿಸಿ : ಪ್ರಾಂಶುಪಾಲರು ರಾಜಕುಮಾರ ಮೊಬೈಲ್ ಸಂಖ್ಯೆ 9916231899 ,8762564872, ಉಪನ್ಯಾಸಕ ಆಶೋಕ ಭಜಂತ್ರಿ 8310600693, ಆಡಳಿತಾಧಿಕಾರಿ 8548038965 ಈ ನಂಬರಗಳಿಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ…

 

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend