ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ…!!!

ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ಖಂಡಿಸಿ ರೈತ ಸಂಘದಿಂದ ಪ್ರತಿಭಟನೆ

ವಿಜಯನಗರ: ಕೂಡ್ಲಿಗಿ ಪಟ್ಟಣದಲ್ಲಿ ಮೇ-31 ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಮಿತಿ ಕೂಡ್ಲಿಗಿ ತಾಲೂಕು ಘಟಕದ ವತಿಯಿಂದ ಬೆಂಗಳೂರಿನ ಗಾಂಧಿ ಭವನದಲ್ಲಿ ರೈತಮುಖಂಡ ರಾಕೇಶ್ ಟಿಕಾಯತ್ ಮೇಲೆ ಹಲ್ಲೆ ನಡೆಸಿ ಮುಖಕ್ಕೆ ಮಸಿ ಬಳದಿರುವ ಘಟನೆ ಇಡೀ ಸಮುದಾಯ ಹಾಗೂ ಕರ್ನಾಟಕದ ಸಾಂಸ್ಕೃತಿಗೆ ಮಾಡಿದ ಅಪಮಾನ ವಿರೋಧಿಸಿ ಈ ಘಟನೆಯನ್ನು ಕರ್ನಾಟಕದ ರೈತರ ಸಮುದಾಯ ಹಾಗೂ ನಾಗರಿಕರು ಮತ್ತು ವಿವಿಧ ಸಂಘಟನೆಗಳ ತೀವ್ರವಾಗಿ ಖಂಡಿಸುತ್ತೇವೆ. ಈ ಘಟನೆಯು ಏಕಾ ಏಕಿ ನಡೆದಿರುವ ಕೃತ್ಯವಲ್ಲ ಇದೊಂದು ಪೂರ್ವಯೋಜಿತ ಸಂಚು ಇದರ ಹಿಂದೆ ಸಂಘ ಪರಿವಾರದ ಬಿಜೆಪಿಯ ಕೈವಾಡವಿದೆ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ. ಪೊಲೀಸರ ಭದ್ರತಾ ವೈಫಲ್ಯವು ಆಗಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿ ಘಟನೆ ಬಗ್ಗೆ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಗೃಹಮಂತ್ರಿಗಳು ಕರ್ನಾಟಕದ ಜನತೆಗೆ ಕ್ಷಮೆ ಕೋರಬೇಕು ಹಾಗೂ ಮುಂದೆಂದೂ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಕೃತ್ಯದ ಹಿಂದಿರುವ ವ್ಯಕ್ತಿ ಯಾರೆಂಬುದನ್ನು ಪಾರದರ್ಶಕ ತನಿಖೆಯ ಮೂಲಕ ಪತ್ತೆಹಚ್ಚಿ ಬಹಿರಂಗಪಡಿಸಬೇಕು ಎಂದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಒತ್ತಾಯ ಪತ್ರವನ್ನು ಕೂಡ್ಲಿಗಿ ತಹಶೀಲ್ದಾರ್ ಜಗದೀಶ್ ಟಿ ಅವರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ ಇವರಿಗೆ ಮನವಿ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷರಾದ ದೇವಕ್ಕ ಮುನಿ ಮಹೇಶ್, ಸಿ ವಿರುಪಾಕ್ಷಪ್ಪ ವಕೀಲರು, ಭೀಮಪ್ಪ ಹಾಲಸ್ವಾಮಿ, ಬಸವರಾಜ್, ಕೊಟ್ರೇಶ್, ಪರಸುರಾಮ್, ಈಶ್ವರಪ್ಪ, ಭಾಷಾ ಸಾಬ್, ನಾಗೇಶ್, ಎನ್ ಬಸವರಾಜ್, ಕೃಷ್ಣಪ್ಪ, ಸೇರಿದಂತೆ ರೈತರುಉಪಸ್ಥಿತರಿದ್ದರು…

ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend