ಕೂಡ್ಲಿಗಿ:ಭಾರೀ ಗಾಳಿ ಮಳೆಗೆ ಭಾರೀ ನಷ್ಟ ,ಬಾಲಕಿಗೆ ಗಾಯ.
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ,ರಾತ್ರಿ ಸುರಿದ ಭಿರು ಗಾಳಿ ಮಿಶ್ರಿತ ಮೆಳೆಯಿಂದಾಗಿ ಹೊರವಲಯದ ಮನೆಗಳೆರೆಡು ಹಾಗೂ ಪ್ರಾರ್ಥನಾ ಮಂದಿರ ಜಖಂ ಗೊಂಡಿವೆ. ಪರಿಣಾಮ ಬಾಲಕಿಯೋರ್ವಳು ಗಾಯಗೊಂಡಿದ್ದು,ಅಪಾರ ನಷ್ಟ ಸಂಭವಿಸಿರುವ ಘಟನೆ ಮೆ31ರ ರಾತ್ರಿ ಜರುಗಿದೆ. ದಿಢೀರ್ ಸುರಿದ ಬಿರಿಗಾಳಿ ಸಹಿತ ಭಾರೀ ಮಳೆಗೆ ಹನಸಿ ರಸ್ತೆಯಲ್ಲಿರವ, ಎರೆಡು ಮನೆಗಳು ಹಾಗೂ ಪ್ರಾರ್ಥನಾ ಮಂದಿರ ಸಂಪೂರ್ಣ ಜಖಂಗೊಂಡಿವೆ.ಮೆನೆ ಹಾಗೂ ಪ್ರಾರ್ಥನಾ ಮಂದಿರಕ್ಕೆ ಮೇಲೊದಿಕೆಯಾಗಿದ್ದ ತಗಡುಗಳು ಗಾಳಿಯ ರಬಸಕ್ಕೆ, ಪೇಪರ್ ತರ ಗಾಳಿಯಲ್ಲಿ ತೇಲಿಕೊಂಡು ಕಿಲೋ ಮೀಟರ್ ದೂರ ಹಾರಿಹೋಗಿವೆ. ಮನೆಯಲ್ಲಿದ್ದ ಬಾಲಕಿಯೋರ್ವಳಿಗೆ ಗಾಯವಾಗಿದ್ದು, ಮನೆಯಲ್ಲಿ ವಾಸವಿದ್ದ ಕುಟುಂಬಗಳು ಅಕ್ಷರಸಹಃ ಬೀದಿಗೆ ಬಿದ್ದಿವೆ.

ತಹಶಿಲ್ದಾರ ಹಾಗೂ ತಾಪಂ ಇಒ ಭೆಟ್ಟಿ -ಘಟನಾ ಸ್ಥಳಕ್ಕೆ ತಾಪಂ ಕಾರ್ಯನರ್ವಹಣಾಧಿಕಾರಿ ರಮೇಶ, ತಹಶಿಲ್ದಾರರಾದ ಟಿ.ಜಗದೀಶ ರವರು ತಮ್ಮ ಸಿಬ್ಬಂದಿಯವರೊಡನೆ ಸ್ಥಳಕ್ಕೆ ಭೇಟ್ಟಿ ನೀಡಿದ್ದಾರೆ. ಘಟನೆಯ ವಿವರ ಪಡೆದು ಸ್ಥಳ ಪರಿಶೀಲಿಸಿದ್ದಾರೆ, ನಿರಾಶ್ರಿತರಿಗೆ ಅಗತ್ಯ ನೆರವು ನೀಡುವುದಾಗಿ ಅವರು ಭರವಸೆ ನೀಡಿದ್ದಾರೆ…

ವರದಿ. ಡಿ. ಎಂ, ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
