ನಿರಂತರ ನೀರು.ಒಳಚರಂಡಿ ಕಾಮಗಾರಿ ಮುಗಿಸಿ .ಶಾಸಕ ನಾಡಗೌಡ…!!!

ನಿರಂತರ ನೀರು.ಒಳಚರಂಡಿ ಕಾಮಗಾರಿ ಮುಗಿಸಿ .ಶಾಸಕ ನಾಡಗೌಡ.

ಸಿಂಧನೂರು.ಮೇ.31.24×7 ಮತ್ತು ಯುಜಿಡಿ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು ಇನ್ನೂ ಮುಂದೆ ವಿಳಂಬ ಮಾಡದೇ ಆದಷ್ಟು ಬೇಗನೆ ಕಾಮಗಾರಿ ಗಳನ್ನು ಮುಗಿಸಬೇಕು ತಡ ಮಾಡಿ ಸಾರ್ವಜನಿಕ ರಿಗೆ ತೊಂದರೆಯಾದರೆ ನಾನು ಸಹಿಸಿಕೊಳ್ಳದೆ ನಿಮ್ಮ ವಿರುದ್ಧ ಸರಕಾರಕ್ಕೆ ದೂರು ನೀಡುವುದಾಗಿ ಮಾಜಿ ಸಚಿವ ಶಾಸಕ ವೆಂಕಟರಾವ್ ನಾಡಗೌಡ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.


ನಗರದ ಸಾರ್ವಜನಿಕ ಕುಡಿಯುವ ನೀರಿನ ಕೆರೆ ಹತ್ತಿರ 24*7 ಮತ್ತು ಯುಜಿಡಿ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಕೆಲಸ ವಿಳಂಬ ಮಾಡಿದಕ್ಕೆ ನಿಮಗೆ ನೋಟಿಸ್ ಜಾರಿ ಮಾಡಿ ದಂಡ ಸಹ ಹಾಕಲಾಗಿದೆ.ಇನ್ನೂ ಮುಂದೆ ನಿಮ್ಮ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕಾಗುತ್ತದೆ ಎಂದು ಅಧಿಕಾರಿಗಳನ್ನು ಶಾಸಕರು ತರಾಟೆಗೆ ತೆಗೆದುಕೊಂಡರು.


ಸಭೆಯ ನಂತರ ಶಾಸಕರು ನಗರಸಭೆ ಅಧ್ಯಕ್ಷರು ಹಾಗೂ ಸದಸ್ಯರ ಹಾಗೂ ಅಧಿಕಾರಿಗಳ ಜೊತೆ ಕುಡಿಯುವ ನೀರಿನ ಕೆರೆ ಹಾಗೂ ನೀರಿನ ಶುದ್ಧಿಕರಣ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದರು.
ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಉಪಾಧ್ಯಕ್ಷ ಮೂರ್ತಜಾ ಹುಸೇನ್,ಸದಸ್ಯರಾದ ಜೀಲಾನಿ ಪಾಷಾ, ಚಂದ್ರ ಶೇಖರ ಮೈಲಾರ, ಮುನೀರ್ ಪಾಶ, ದಾಸರಿ ಸತ್ಯನಾರಾಯಣ, ಕೆ.ಹನುಮೇಶ,ವೀರಭದ್ರಪ್ಪ ಕುರಕುಂದಿ,ಶರಣಪ್ಪ ಉಪ್ಪಲದೊಡ್ಡಿ, ಎಲ್ಲು ಸಾ ಬದಿ,ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು,ಕೆ ಯು ಐ ಡಿ ಎಫ್ ಸಿ ಇ ಇ ಆರ್ ಎಸ್ ಕೋಪ್ಪದ್ ಮುಖಂಡರು ಗಳಾದ ಎಸ್ ಪಿ ಟೈಲರ್,ನಿರುಪಾದಿ ನಾಗಲಾಪುರ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಸಭೆಯಲ್ಲಿ ಹಾಜರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend