ಅಕ್ರಮ ಚಟುವಟಿಕೆ ತಾಣ ಪ್ರವಾಸಿ ಮಂದಿರ…!!”

ಅಕ್ರಮ ಚಟುವಟಿಕೆ ತಾಣ ಪ್ರವಾಸಿ ಮಂದಿರ.

ಸಿಂಧನೂರು. ಮೇ.31.ಜನಪ್ರತಿನಿಧಿಗಳು ಸರಕಾರಿ ಅಧಿಕಾರಿಗಳಿಗೆ ಸಭೆ ಮಾಡಲು ಹಾಗೂ ತಂಗಲು ಸರಕಾರ ಪ್ರವಾಸಿ ಮಂದಿರಗಳನ್ನು ನಿರ್ಮಾಣ ಮಾಡಿದ್ದು ಸರಕಾರಿ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳು ಇಲಾಖೆಗೆ ಹಣ ಕಟ್ಟಿ ಪ್ರವಾಸಿ ಮಂದಿರದಲ್ಲಿ ಕೊಠಡಿಗಳನ್ನು ಪಡೆಯಲು ಅವಕಾಶ ಇದೆ.ಹಾಗೂ ಪ್ರವಾಸಿ ಮಂದಿರ ಗದ್ದಲ ಗಲಾಟೆ ಇಲ್ಲದೆ ಪ್ರಶಾಂತವಾಗಿರಬೇಕು.
ನಗರದ ಪ್ರವಾಸಿ ಮಂದಿರಗಳು ಸರಕಾರಿ ಅಧಿಕಾರಿಗಳಿಗೆ ಕೊಠಡಿಗಳು ಸಿಗದೆ ಅಕ್ರಮ ಮರಳು ದಂದೆ ಕೊರರು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವ ವ್ಯಕ್ತಿಗಳು ಪ್ರವಾಸಿ ಮಂದಿರವನ್ನು ತಮ್ಮ ಕೇಂದ್ರಸ್ಥಳವನ್ನಾಗಿ ಮಾಡಿಕೊಂಡ ಕಾರಣ ಅಕ್ರಮ ಚಟುವಟಿಕೆಗಳ ತಾಣವಾಗಿ ಪ್ರವಾಸಿ ಮಂದಿರ ಮಾರ್ಪಟ್ಟಿದೆ ಎನ್ನುವ ದೂರುಗಳು ಕೇಳಿ ಬರುತ್ತಿವೆ.
ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತ್ತಿದ್ದು ಸಿಬ್ಬಂದಿಗಳು ಏನು ಮಾತನಾಡದೆ ಹೆದರಿ ಭಯದಲ್ಲಿ ನೌಕರಿ ಮಾಡುತ್ತಿದ್ದು ಕಂಡು ಬಂದಿದೆ. ನಗರದ ಗಂಗಾವತಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರದಲ್ಲಿ ಒಂದು ದಿನಕ್ಕೆ ಸರಕಾರಿ ಅಧಿಕಾರಿಗಳಿಗೆ 200 ರೂಪಾಯಿ, ಖಾಸಗಿ ವ್ಯಕ್ತಿಗಳಿಗೆ 475 ರೂಪಾಯಿ ಇರುತ್ತದೆ. ಕುಷ್ಟಗಿ ರಸ್ತೆಯಲ್ಲಿರುವ ಪ್ರವಾಸಿ ಮಂದಿರ ( ಸರ್ಕ್ಯೂಟ್ ಹೌಸ್) ಒಂದು ದಿನಕ್ಕೆ ಸರಕಾರಿ ಅಧಿಕಾರಿಗಳಿಗೆ 1000 ರೂಪಾಯಿ, ಖಾಸಗಿಯವರಿಗೆ 2000 ರೂಪಾಯಿ ದರವಿದ್ದು ಲೋಕಪಯೋಗಿ ಇಲಾಖೆ ದರವನ್ನು ನಿಗದಿಪಡಿಸಿದೆ.
ಗಂಗಾವತಿ ರಸ್ತೆ ಪ್ರವಾಸಿ ಮಂದಿರದಲ್ಲಿ ಮೌನೇಶ, ಆಲಂಬಾಷ ಜವಳಗೇರಾ, ದರ್ಶನ್ ಬಾಯಿ, ಪರಸಪ್ಪ ನಾಲ್ಕು ಜನ ಸಿಬ್ಬಂದಿಗಳು. ಕುಷ್ಟಗಿ ರಸ್ತೆ ಪ್ರವಾಸಿ ಮಂದಿರದಲ್ಲಿ( ಸರ್ಕ್ಯೂಟ್ ಹೌಸ್) ಸ್ವಚ್ಛತೆ ಮಾಡುವ 3 ಜನ ಮಹಿಳೆಯರು. ಒಬ್ಬರು ದೋಭಿ, ಬಾಬಣ್ಣ,ಹನುಮಂತ, ಬಾಬು, ದುರುಗೇಶ, ಸೇರಿದಂತೆ ಒಟ್ಟು ಎಂಟು ಜನ ಸಿಬ್ಬಂದಿಗಳು ಕೆಲಸ ಮಾಡುವ ಬಗ್ಗೆ ಇಲಾಖೆ ಮೂಲಗಳು ಪತ್ರಿಕೆಗೆ ತಿಳಿಸಿವೆ.
ಪ್ರವಾಸಿ ಮಂದಿರದಲ್ಲಿ ಕೊಠಡಿಗಳನ್ನು ಪಡೆಯಲು ಇಲಾಖೆಯಲ್ಲಿ ಹಣ ಕಟ್ಟಿ ರಸೀದಿ ತಂದಾಗ ಮಾತ್ರ ಸಿಬ್ಬಂದಿಗಳು ಕೊಠಡಿಗಳನ್ನು ಒದಗಿಸಬೇಕು ಇದರಿಂದ ಇಲಾಖೆಗೆ ಆದಾಯ ಬರುತ್ತದೆ.ಇತ್ತೀಚೆಗೆ ದಿನಗಳಲ್ಲಿ ಹಣ ಕಟ್ಟಿ ರಸೀದಿ ತರದೇ ಕೆಲವರು ಸಿಬ್ಬಂದಿಗಳ ಮೇಲೆ ದೌರ್ಜನ್ಯ ಮಾಡಿ ಅಕ್ರಮವಾಗಿ ಕೊಠಡಿಗಳನ್ನು ಪಡೆದುಕೊಳ್ಳುತ್ತಿರುವುದು ಕಂಡು ಬಂದಿದೆ.
ಪ್ರವಾಸಿ ಮಂದಿರದಲ್ಲಿ ಗಂಡ ಹೆಂಡತಿ ಜಗಳ , ಲೇವಾದೇವಿ ವ್ಯವಹಾರ,ಅಕ್ರಮ ಮರಳು ದಂದೆ ಕೊರರು ಸೇರಿದಂತೆ ಅಕ್ರಮ ಚಟುವಟಿಕೆಗಳ ಸರದಾರರು ಪ್ರವಾಸಿ ಮಂದಿರವನ್ನು ತಮ್ಮ ಚಟುವಟಿಕೆ ತಾಣವನ್ನಾಗಿ ಮಾಡಿಕೊಂಡು ಇಲ್ಲಿಂದಲೇ ಡೀಲ್ ಬಗೆಹರಿಸಿಕೊಳ್ಳುತ್ತಾರೆ.
ಅಕ್ರಮ ಚಟುವಟಿಕೆಗಳು ಹಾಗೂ ದಿನನಿತ್ಯದ ಗಲಾಟೆ ಜಗಳಗಳಿಂದ ಪ್ರವಾಸಿ ಮಂದಿರ ನೆಮ್ಮದಿ ಇಲ್ಲದಾಗಿದೆ.ಇದರ ಬಗ್ಗೆ ಅರಿವು ಇದ್ದರು ಸಹ ಇಲಾಖೆ ಅಧಿಕಾರಿಗಳು ಕಡಿವಾಣ ಹಾಕದೇ ನಿರ್ಲಕ್ಷ್ಯಮಾಡಿದ ಕಾರಣ ಅಕ್ರಮ ಚಟುವಟಿಕೆಗಳ ಸರದಾರರು ಸಿಬ್ಬಂದಿಗೆ ಹೆದರಿಸಿ ಪ್ರವಾಸಿ ಮಂದಿರದಲ್ಲಿ ಮೋಜು ಮಸ್ತಿ ಮಾಡುತ್ತಾ ತಮ್ಮ ಸ್ವಂತ ಮನೆಯನ್ನಾಗಿ ಮಾಡಿಕೊಂಡಿದ್ದು ನಮ್ಮ ಅಧಿಕಾರಿಗಳು ಬೈಯುತ್ತಾರೆ ಹಣ ಕಟ್ಟಿ ರಸೀದಿ ತಂದರೆ ನಿಮಗೆ ಕೋಠಡಿ ಎಂದು ಸಿಬ್ಬಂದಿಗಳು ಹೇಳಿದರೆ ನಾವು ಯಾರು ಎಂಬುದು ನಿಮಗೆ ಗೊತ್ತಿಲ್ಲ. ನಿಮ್ಮ ಅಧಿಕಾರಿಗಳಿಗೆ ನಮ್ಮ ಹೆಸರು ಹೇಳಿ ನಾವು ಯಾರು ಎಂಬುದು ಅವರೇ ಹೇಳುತ್ತಾರೆ ಎಂಬ ದಿಮಾಕಿನ ಮಾತನ್ನು ಈ ಪುಡಾರಿಗಳು ಆಡುತ್ತಾರೆ ದಿನನಿತ್ಯದ ಮಾತಾಗಿದೆ.
ಲೋಕೊಪಯೋಗಿ ಇಲಾಖೆಯ ಎ ಇ ಇ ಚಂದ್ರಶೇಖರ ಪಾಟೀಲ ಇನ್ನೂ ಮುಂದೆಯಾದರು ನಿದ್ದೆಯಿಂದ ಎಚ್ಚೆತ್ತು ಕೊಂಡು ತಮಗಿರುವ ಅಧಿಕಾರವನ್ನು ಬಳಸಿಕೊಂಡು ಯಾವ ವ್ಯಕ್ತಿಗೆ ಹೆದರದೇ ಹಣ ಕಟ್ಟಿ ರಸೀದಿ ಪಡೆದವರಿಗೆ ಕೊಠಡಿಗಳನ್ನು ಒದಗಿಸಬೇಕು. ಸಿಸಿ ಕ್ಯಾಮೆರಾ ಅಳವಡಿಸಿ ರಾತ್ರಿ ವೇಳೆಯಲ್ಲಿ ಬರುವ ಮಹಿಳೆಯರ ಸಂಪೂರ್ಣ ಮಾಹಿತಿ ಪಡೆಯಬೇಕು.
ಅನವಶ್ಯಕವಾಗಿ ಪ್ರವಾಸಿ ಮಂದಿರಕ್ಕೆ ಬರುವ ಜನರಿಗೆ ನಿಷೇಧ ಹೇರುವಂತೆ ಸಿಬ್ಬಂದಿಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಬೇಕು. ಈಗಾಗಲೇ ಕೆಲವರು ಪ್ರವಾಸಿ ಮಂದಿರದಲ್ಲಿ ಮಹಿಳೆಯರನ್ನು ಕರೆದುಕೊಂಡು ಬಂದು ಮಲಗಿ ಹೋಗಿದ್ದು ಗುಸು ಗುಸು ಸುದ್ದಿ ಹರಿದಾಡುತ್ತಿದೆ ಎನ್ನಲಾಗಿದೆ. ಇನ್ನು ಮುಂದೆ ಆದರೂ ಒಬ್ಬ ಪೋಲೀಸ ಅಧಿಕಾರಿಯನ್ನು ನೇಮಿಸಿ ಗೇಟಿನ ಮುಂಭಾಗದಲ್ಲಿ ಯೇ ಪ್ರವಾಸಿ ಮಂದಿರಕ್ಕೆ ಬರುವವರನ್ನು ಕಡಿವಾಣ ಹಾಕದಿದ್ದರೆ ಪ್ರವಾಸಿ ಮಂದಿರ ಅನೈತಿಕ ಚಟುವಟಿಕೆ ತಾಣ ಹಾಗೂ ಕಾನೂನು ಬಾಹಿರ ಚಟುವಟಿಕೆಗಳ ಕೇಂದ್ರವಾದರು ಅಚ್ಚರಿಪಡಬೆಕಾಗಿಲ್ಲ…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend