ಮಾವನೂರ ಗ್ರಾಮದಲ್ಲಿ ಮನೆಕಳ್ಳತನ.
ಜೇವರ್ಗಿ ತಾಲೂಕಿನ ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾವನೂರ ಗ್ರಾಮದ ಸಿದ್ದಪ್ಪ ತಂದೆ ನಿಂಗಪ್ಪ ಸೀತಾಳ ಎಂಬುವವರ ಮನೆ ಕಳ್ಳತನವಾಗಿದೆ.
ಬಡ ಆಟೋ ಚಾಲಕನಾದ
ಸಿದ್ದಪ್ಪ ತಂದೆ ನಿಂಗಪ್ಪ ಸೀತಾಳ ಕಷ್ಟ ಪಟ್ಟು ದುಡಿದು ತನ್ನ 3 ಜನ ಹೆಣ್ಣು ಮಕ್ಕಳ ಭವಿಷ್ಯಕಾಗಿ ಕೂಡಿಟ್ಟ ಹಣ.
ಕುಟುಂಬಸ್ಥರು ರಾತ್ರಿ ಸುಮಾರು 12 ಗಂಟೆ ಸಮಕ್ಕೆ ಮನೆಯ ಹೊರಗಡೆ ಮಲಗಿರುವಾಗ ಮನೆಯ ಹಿಂಭಾಗದಿಂದ ಒಳಗೆ ಬಂದ ಕಳ್ಳನು ಮೇಲ್ಚಾವಣಿ ಶೆಡ್ಡನ್ನು ಕಿತ್ತಿ ಒಳಗೆ ನುಸುಳಿ ಮನೇಲಿ ಇರುವ ಸುಮಾರು ಮೌಲ್ಯದ ವಸ್ತುಗಳು ಮತ್ತು ನಗದು ಹಣವನ್ನು ದೋಚಿ ಮನೆಯವರಿಗೆ ಕಿಂಚಿತ್ತು ಸುಳಿಯು ಸಿಗದಂತೆ ತಾರೆ ಪರಾರಿಯಾಗಿದ್ದಾರೆ 20000 ಸಾವಿರ ನಗದು ರೂಪಾಯಿಗಳು 6 ಗ್ರಾಂ ಚಿನ್ನ ಮತ್ತು 21 ಸಾವಿರ ಮೌಲ್ಯದ ಒಪ್ಪೋ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ . ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳ್ಳರ ಶೋಧದಲ್ಲಿ ತೊಡಗಿದ್ದಾರೆ.
ಪೊಲೀಸರು ಬೇಗನೆ ಕಳ್ಳರನ್ನು ಪತ್ತೆಹಚ್ಚಿ ಅವರನ್ನು ಶಿಕ್ಷಿಸಿ ನನಗೆ ನ್ಯಾಯ ಕೊಡಿಸುತ್ತಾರೆ ಎಂದು ನಂಬಿದೇನೆ ಎಂದು ಸಿದ್ದಪ್ಪ ಸೀತಾಳ ಹೇಳಿದರು..

ವರದಿ. ಬಸವರಾಜ್ ಹಿರೇಮಠ್
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
