;

ಹೊಳಲು ಸ್ವಾಮಿ ವಿವೇಕಾನಂದ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ 93.13 % ಫಲಿತಾಂಶ…!!!

ಹೊಳಲು ಸ್ವಾಮಿ ವಿವೇಕಾನಂದ ಪ್ರೌಢಶಾಲೆ
ಎಸ್ಸೆಸ್ಸೆಲ್ಸಿ 93.13 % ಫಲಿತಾಂಶ

ಹೂವಿನ ಹಡಗಲಿ: ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತಾಲೂಕಿನ
ಹೊಳಲು ಗ್ರಾಮದ ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ
ಶೇಕಡಾ 93.13 ಫಲಿತಾಂಶ ಲಭಿಸಿದೆ.

ಪರೀಕ್ಷೆಗೆ ಹಾಜರಾದ 102
ವಿದ್ಯಾರ್ಥಿಗಳ ಪೈಕಿ 95 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.

ಎಂ ದೀಪಾ 618(99)
ಶಾಲೆಯ ಇತಿಹಾಸದಲ್ಲೇ ಅತ್ಯಧಿಕ ಅಂಕ ಗಳಿಸಿದ್ದಾಳೆ.
ಡಿ ಸುಜಾತಾ 616 (98)
ಜಿ ರೇಣುಕಾ 608 (97)
ಎನ್ ರಾಜು 605 (97)
ಎಂ ಪೂಜಾ 601 (96)
ಹೆಚ್ಚು ಅಂಕ ಪಡೆದಿರುತ್ತಾರೆ.

ಸರಣಿ ಪೂರ್ವ ಸಿದ್ಧತಾ ಪರೀಕ್ಷೆ,ಪಾಲಕರ ಮನೆ ಭೇಟಿ, ಎಲ್ಲಾ ವಿದ್ಯಾರ್ಥಿಗಳ
ವೈಯಕ್ತಿಕ ಗಮನ,
ಗಣಿತ ವಿಜ್ಞಾನ ಇಂಗ್ಲೀಷ್
ಕಠಿಣ ವಿಷಯಗಳಿಗೆ ಆದ್ಯತೆ, ಬೆಳಗಿನ ವಿಶೇಷ ತರಗತಿ, ಸಂಜೆಯ ಗುಂಪು ಅಧ್ಯಯನ ಹೀಗೆ ಹಲವು
ಕಾರ್ಯಕ್ರಮಗಳು ಫಲಿತಾಂಶ ಸುಧಾರಣೆಗಾಗಿ
ವರ್ಷ ಪೂರ್ತಿ ಮಾಡಲಾಗಿತ್ತು ಎಂದು
ಕ್ಷೇತ್ರ ಶಿಕ್ಷಣಾಧಿಕಾರಿ
ಶಂಕರ್ ಎನ್ ಹಳ್ಳಿಗುಡಿ ಹೇಳಿದರು.

ಕನ್ನಡ ಮಾಧ್ಯಮದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಎಂ.ದೀಪಾ ಹಾಗೂ ಇತರರ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದ ಅದರಲ್ಲೂ ಕನ್ನಡ ಮಾಧ್ಯಮದಲ್ಲಿ 618 ಅಂಕ ಗಳಿಸುವುದು ಸುಲಭದ ಮಾತಲ್ಲ. ಇದರ ಹಿಂದೆ ಅವಿರತ ಶ್ರಮ ಎದ್ದು ಕಾಣುತ್ತದೆ. ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕು ಉಜ್ವಲವಾಗಲಿ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಹೆಚ್ ಕೆ ಚಂದ್ರಪ್ಪ ತಿಳಿಸಿದರು.

ವಿದ್ಯಾರ್ಥಿಗಳ ಸಾಧನೆಗೆ
ಮುಖ್ಯ ಗುರುಗಳಾದ ಹಳ್ಳಿ ಮಂಜುನಾಥ
ಎಸ್ ಡಿ ಎಂ ಸಿ ಅಧ್ಯಕ್ಷರು
ಪದಾಧಿಕಾರಿಗಳು ಮತ್ತು
ಶಾಲೆಯ ಶಿಕ್ಷಕ ಸಿಬ್ಬಂದಿ
ಅಭಿನಂದಿಸಿದ್ದಾರೆ…

ವರದಿ.ಅಜಯ್, ಚ. ಹೂವಿನಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;