ಪರಿಕ್ರಮ ಸಾಧನೆಯಿಂದ ಪ್ರಗತಿ ಕಾಣಲು ಸಾಧ್ಯ – ಶ್ರೀ ರಂಭಾಪುರಿ ಜಗದ್ಗುರುಗಳು…!!!

ಪರಿಕ್ರಮ ಸಾಧನೆಯಿಂದ ಪ್ರಗತಿ ಕಾಣಲು ಸಾಧ್ಯ – ಶ್ರೀ ರಂಭಾಪುರಿ ಜಗದ್ಗುರುಗಳು.

ಸಿಂಧನೂರು : ಮೇ 19. ಮನುಷ್ಯ ಜೀವನ ಉಜ್ವಲಗೊಳ್ಳಲು ಕ್ರಿಯಾಶೀಲ ಜೀವನ ಮುಖ್ಯ, ಸಾಧನೆ ಮಾತನಾಡಬೇಕೆ ವಿನ: ಮಾತನಾಡುವುದೇ ಸಾಧನೆಯಲ್ಲ, ಪರಿಶ್ರಮ ಮತ್ತು ಸಾಧನೆಯಿಂದ ಜೀವನದಲ್ಲಿ ಶ್ರೇಯಸ್ಸನ್ನು ಕಾಣಲು ಸಾಧ್ಯವಾಗುವುದೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ನಗರದ ಬಾಳೆಹೊನ್ನೂರು ಖಾಸಾ ಶಾಖಾ ಮಠದಲ್ಲಿ ಜರುಗಿದ ಸೋಮನಾಥ ಶಿವಾಚಾರ್ಯ ಸ್ವಾಮಿಗಳವರ ಪಟ್ಟಾಧಿಕಾರದ 15 ನೇ ವರ್ಷದ ವರ್ಧಂತಿ ಹಾಗೂ ಜಲ ಸಂರಕ್ಷಣಾ ಅಭಿಯಾನ ಜಾಗೃತಿ ಸಮಾವೇಶದಲ್ಲಿ ಆರ್ಶಿವಚನ ನೀಡಿದರು.

ಪ್ರತಿಯೊಬ್ಬರೂ ತಮ್ಮ ಏಳ್ಗೆಯನ್ನಷ್ಟೇ ಬಯಸಿ ಬಾಳುತ್ತಾರೆ, ಆದರೆ ದೇಶದ ಅಭಿವೃದ್ಧಿ, ಬಡಜನರ ಉದ್ದಾರ, ದೇಶ ಕಾಯುವ ಸೈನಿಕರ ಚಿಂತನ, ಅನ್ನ ನೀಡುವ ರೈತ ಸಮುದಾಯದ ಬಗೆಗೆ ಯಾರೂ ಮಾತನಾಡುವುದಿಲ್ಲ. ವೈಯಕ್ತಿಕ ಹಿತಾಸಕ್ತಿ ಜೊತೆಗೆ ನಿತ್ಯ ಅರ್ಧ ಗಂಟೆ ಯೋಚಿಸಿ ಕಾರ್ಯೋನ್ಮುಖವಾದರೆ ದೇಶದ ಪ್ರಗತಿ ಅದ್ಭುತವಾಗಿ ನೆರವೇರುವುದರಲ್ಲಿ ಯಾವುದೇ ಸಂದೇಹವಿಲ್ಲ. ಮನುಷ್ಯ ಅನ್ನವಿಲ್ಲದೇ ಬದುಕಬಹುದು, ಆದರೆ ನೀರಿಲ್ಲದೇ ಬಾಳಲಾಗದು. ಸೋಮನಾಥ ಶಿವಾಚಾರ್ಯರು ತಮ್ಮ ಪಟ್ಟಾಧಿಕಾರದ 15ನೇ ವರುಷದ ಜಾಗೃತಿ ಸಮಾವೇಶ” ಹಮ್ಮಿಕೊಂಡಿರುವುದು ಅವರ ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿದೆ. “ಜಲ ಸಂರಕ್ಷಣಾ ಅಭಿಯಾನ ಮಹತ್ವ ಕೆಲಸವನ್ನು ಎಲ್ಲರೂ ನೀಡಿರುವುದು ಅವರ ಸಾಮಾಜಿಕ ಕಾಳಜಿಗೆ ಸಾಕ್ಷಿಯಾಗಿದೆ.

ನೀರನ್ನು ವ್ಯರ್ಥವಾಗಿ ಕಳೆಯದೆ ಪ್ರತಿಯೊಂದು ಹನಿ ನೀರನ್ನು ಸದ್ಬಳಕೆ ಮಾಡಿಕೊಳ್ಳುವ ಅವಶ್ಯಕತೆಯಿದೆ,ಕೆಲವರು ನೀರಿನ ಮಹತ್ವ ಅರಿಯದೇ ವ್ಯರ್ಥವಾಗಿ ಬಳಸುವುದನ್ನು ಕಾಣುತ್ತೇವೆ.ಜಲಮೂಲ ಸ್ಥಳಗಳನ್ನು ಕಾಪಾಡುವ ಮತ್ತು ಅಭಿವೃದ್ಧಿ ಪಡಿಸುವ ಕೆಲಸವನ್ನು ಎಲ್ಲರೂ ಜವಾಬ್ದಾರಿಯಿಂದ ಮಾಡಬೇಕಾಗುತ್ತದೆ.

ಸೋಮನಾಥ ಶ್ರೀಗಳು ಹದಿನೈದು ವರ್ಷದ ಅವಧಿಯಲ್ಲಿ ಶ್ರೀ ಮಠ ಅಭಿವೃದ್ಧಿ ಹಾಗೂ ಭಕ್ತ ಸಂಕುಲದಲ್ಲಿ ಸಂಸ್ಕಾರ ಸದ್ವಿಚಾರಗಳ ಮೂಲಕ
ಮತ್ತು ಅಭಿವೃದ್ಧಿಪಡಿಸುವ ಅವಧಿಯಲ್ಲಿ ಅರಿಯದೇ ಶ್ರೀ ಮಠದ ಅಭಿವೃದ್ಧಿ ಬದುಕನ್ನು ಶ್ರೀಮಂತಗೊಳಿಸಿರುವುದನ್ನು ಕಂಡು ತಮ್ಮ ಹರ್ಷ ವ್ಯಕ್ತಪಡಿಸಿ ಶ್ರೀಗಳಿಗೆ ರೇಷ್ಮೆ ಪೀತಾಂಬರ ಫಲ ಪುಷ್ಪವಿತ್ತಾ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಶಾಸಕ ವೆಂಕಟರಾವ್ ನಾಡಗೌಡ, ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ರೈತ ಧುರೀಣ ಬೆಳಗುರ್ಕಿ ಹನಮಂತಗೌಡ ಹಾಗೂ ಕಾಂಗ್ರೆಸ್ ಯುವ ಧುರೀಣ ಬಸನಗೌಡ ಬಾದರ್ಲಿ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ 50 ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ನಿರ್ಮಾಣಗೊಳ್ಳಲಿರುವ ಯಾತ್ರಿ ನಿವಾಸಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.

ಎಮ್ಮಿಗನೂರು ಹಂಪಿ ಸಾವಿರದೇವರ ಮಠದ ವಾಮದೇವ ಮಹಂತ ಶಿವಾಚಾರ್ಯ ಸ್ವಾಮಿಗಳು ಶ್ರೀಗಳವರ ಕ್ರಿಯಾಶೀಲ ಬದುಕಿನ ಬಗೆಗೆ ಮೆಚ್ಚುಗೆಯ ಮಾತನಾಡಿದರು.

ಮಠಾಧ್ಯಕ್ಷ ಸೋಮನಾಥ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ ವೀರಶೈವ ಧರ್ಮ ಕಾಯಕ ಮತ್ತು ದಾಸೋಹಕ್ಕೆ ಬಹಳಷ್ಟು ಮಹತ್ವ ಕೊಟ್ಟಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮಹತ್ವ ಕೊಟ್ಟ ಕಾಯಕದಿಂದಲೇ ಕಲಾ ಚೈತನ್ಯ ಎಂದು ಸಾರಿದ್ದಾರೆ, ನೀರಿನ ಬಗ್ಗೆ ಕಾಳಜಿ ವಹಿಸದೇ ನಿರ್ಲಕ್ಷ್ಯ ತೋರಿದ್ದಾದಲ್ಲಿ ಭವಿಷ್ಯತ್ತಿನ ದಿನಗಳಲ್ಲಿ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ನೀರಿನ ನೀರಿನ ಸದ್ಬಳಕೆ ಅವಶ್ಯಕ, ಶ್ರೀ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಭಕ್ತರ ಸಹಕಾರದಿಂದ ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವೆ ಎಂದರು.

ಮಸ್ಕಿ, ತುರುವಿಹಾಳ, ರವುಡಕುಂದ, ನವಲಕಲ್, ಕೆಂಭಾವಿ, ಉಟಕನೂರು, ಸಿರುಗುಪ್ಪ ಶ್ರೀಗಳಲ್ಲದೇ ಹಲವಾರು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. 5 ಜನ ಗಣ್ಯರಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಶ್ರೀ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ತಾಲೂಕ ವೀರಶೈವ ಲಿಂಗಾಯತ ಸಮಾಜ ಹಾಗೂ ತಾಲೂಕಾ ವೀರಶೈವ ಮಹಾಸಭಾ ಸಂಯುಕ್ತವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದಕ್ಕೂ ಮುನ್ನ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ ಹಾಗೂ 30 ಜಂಗಮ ಪಟುಗಳಿಗೆ ಶಿವದೀಕ್ಷಾ ಅಯ್ಯಾಚಾರ ನಡೆದವು,…

 

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend