ಸಿಂಗಾಪುರ ಅಕ್ರಮ ಮರಳು 4 ಟಿಪ್ಪರ ವಶ. ಚಾಲಕರ ಬಂಧನ.
ಸಿಂಧನೂರ : ಮೇ 19 ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ 4 ಟಿಪ್ಪರಗಳನ್ನು ಗ್ರಾಮೀಣ ಠಾಣೆಯ ಪಿಎಸ್ಐ ಯರಿಯಪ್ಪ ಸಿಬ್ಬಂದಿಗಳೊಂದಿಗೆ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿ ವಶಪಡಿಸಿಕೊಂಡು ಚಾಲಕರನ್ನು ಬಂಧಿಸಿದ್ದಾರೆ.
ತಾಲೂಕಿನ ಸಿಂಗಾಪುರ ಗ್ರಾಮದ ತುಂಗಭದ್ರಾ ನದಿಯಿಂದ ಅಕ್ರಮ ಮರಳು ಸಾಗಾಣಿಕೆಯಲ್ಲಿ ತೊಡಗಿದ್ದ ಬಗ್ಗೆ ಮಾಹಿತಿ ಪಡೆದುಕೊಂಡ ಗ್ರಾಮೀಣ ಠಾಣೆಯ ಪಿಎಸ್ಐ ಯರಿಯಪ್ಪ ಸಿಬ್ಬಂದಿಗಳಾದ ಶೆಟ್ಟಪ್ಪ, ಪರಶುರಾಮ,ಲಿಂಗಪ್ಪ ಮಲ್ಲಿಕಾರ್ಜುನ,ಅಮರೇಶ, ಇವರೊಂದಿಗೆ ರಾತ್ರಿ 12 ಗಂಟೆ ಸುಮಾರಿಗೆ ದಾಳಿ ಮಾಡಿ 4 ಟಿಪ್ಪರಗಳನ್ನು ವಶಪಡಿಸಿಕೊಂಡು ಚಾಲಕರನ್ನು ಬಂಧಿಸಿ ಠಾಣೆಗೆ ಕರೆದುಕೊಂಡು ಬಂದಿದ್ದಾರೆ.
ಟಿಪ್ಪರ ಚಾಲಕರಾದ ಸೋಮನಾಯಕ, ಹೇಮನಾಯಕ,ಗಣೇಶ ನಾಯ್ಕ,ಅಬ್ದುಲ್ ಸಲಾಮ ಇವರನ್ನು ಬಂಧಿಸಲಾಗಿದೆ.ಟಿಪ್ಪರ ನಂಬರ KA.36 B.5271, KA.10.A.1142..KA.35.B.1393, KA.34.B.3989. ಟಿಪ್ಪರ ಮಾಲೀಕರಾದ ಇಬ್ರಾಂ ಬಳ್ಳಾರಿ,ಯುನೀಷ ಬಾಷಾ ಕಲಾಂ ಬಳ್ಳಾರಿ, ಮಹ್ಮದ ರಫಿ ತೋರಣಗಲ್ಲ ಮಾಲೀಕರು ಹಾಗೂ ಚಾಲಕರ ಮೇಲೆ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸಲಾಗುತ್ತಿದೆ…

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
