ಏಳುರಾಗಿ ಕ್ಯಾಂಪಿನಲ್ಲಿ ಅಪಘಾತ ಬೈಕ ಸವಾರ ಸ್ಥಳದಲ್ಲಿ ಸಾವು….!!!

ಏಳುರಾಗಿ ಕ್ಯಾಂಪಿನಲ್ಲಿ ಅಪಘಾತ ಬೈಕ ಸವಾರ ಸ್ಥಳದಲ್ಲಿ ಸಾವು.

ಸಿಂಧನೂರ : ಮೇ.19.ಬೈಕ್ ಮತ್ತು ಕಾರು ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ 11 ಗಂಟೆಗೆ ಏಳುರಾಗಿ ಕ್ಯಾಂಪಿನ ಕ್ರಾಸ್ ಹತ್ತಿರ ಸಂಭವಿಸಿದೆ.
ಹನುಮಂತ ವಯಸ್ಸು 50 ಭಜಂತ್ರಿ ಸಾವನ್ನಪ್ಪಿರುವ ವ್ಯಕ್ತಿಯಾಗಿದ್ದಾನೆ ನಗರದ ಮಹೆಬೂಬ ಕಾಲೊನಿಯ ನಿವಾಸಿಯಾದ ಹನುಮಂತಪ್ಪ ಬೈಕ್ ಮೂಲಕ ಹಣ್ಣು ಮಾರಲು ಹೊಗುವಾಗ ಏಳುರಾಗಿ ಕ್ಯಾಂಪಿನ ಹತ್ತಿರ ಹೋಮಿನಿ ಕಾರು kA.33.m 2962 ಬೈಕ್ ಗೆ ಡಿಕ್ಕಿ ಒಡೆದ ಪರಿಣಾಮ ಹನುಮಂತಪ್ಪ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ.ವಿಷಯ ತಿಳಿದು ಸಂಚಾರಿ ಠಾಣೆಯ ಪಿಎಸ್ಐ ಬಸವರಾಜ ಸ್ಥಳಕ್ಕೆ ಭೇಟಿ ನೀಡಿ ಶವವನ್ನು ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ತರಲಾಗಿದೆ. ಅಪಘಾತ ಮಾಡಿದ ಕಾರನ್ನು ಪೊಲೀಸರು ವಶಪಡಿಸಿಕೊಂಡು ಸಂಚಾರಿ ಪೋಲೀಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಕಾರು ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಮೃತ ಕುಟುಂಬಸ್ಥರ ನೋವಿನ ಆಕ್ರಂದನ ಆಸ್ಪತ್ರೆಯಲ್ಲಿ ಮುಗಿಲು ಮುಟ್ಟಿದ್ದು ಕಂಡುಬಂದಿದೆ…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend