ಬೆಂಗಳೂರಲ್ಲಿ ಬಾರೀ ಮಳೆ ಮನೆಗಳಿಗೆ ನುಗ್ಗಿದ ನೀರು,ತುಂಬಿ ಹರಿದ ರಾಜಕಾಲುವೆಗಳು…!!!

ಬೆಂಗಳೂರು (ಮೇ.18): ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿ ಮಳೆರಾಯನ ಅರ್ಭಟಕ್ಕೆ ಇಡೀ ನಗರ ತಲ್ಲಣಗೊಂಡಿತು. ನಗರದ ಬಹುತೇಕ ಭಾಗಗಳಲ್ಲಿ ಸತತವಾಗಿ ಎರಡು ತಾಸು ಸುರಿದ ಮಳೆಯಿಂದಾಗಿ ರಸ್ತೆಗಳು ಹೊಳೆಯಾದರೆ, ಅಂಡರ್‌ ಪಾಸ್‌, ಜಂಕ್ಷನ್‌ಗಳು ಹೊಂಡಗಳಾಗಿ ಮಾರ್ಪಟ್ಟವು.

ಕಾರು, ಬೈಕ್‌, ಆಟೋಗಳು ನೀರಿನಲ್ಲಿ ಭಾಗಶಃ ಮುಳುಗಡೆಯಾಗಿದ್ದವು. ಇನ್ನು ಹಲವೆಡೆ ಮನೆ, ಅಂಗಡಿಗಳಿಗೆ ಮಳೆ ನೀರು ನುಗ್ಗಿ ಜನಜೀವನ ಅಕ್ಷರಶಃ ಅಸ್ಥವ್ಯಸ್ಥವಾಯಿತು.

ಒಂದು ತಾಸು ಸುರಿದ ಮಳೆಗೆ ಮುಳುಗಿತು ಬೆಂಗಳೂರು, ಜನಜೀವನ ತತ್ತರ

ಮುಖ್ಯವಾಗಿ ಸಿಲ್ಕ್ ಬೋರ್ಡ್‌ ಜಂಕ್ಷನ್‌, ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ಭಾರೀ ಪ್ರಮಾಣ ಮಳೆ ನೀರು ಜಮಾವಣೆ ಗೊಂಡಿದ್ದರಿಂದ ಕಾರು, ಆಟೋ ಸೇರಿದಂತೆ ಬೈಕುಗಳು ಬಹುತೇಕ ನೀರಿನಲ್ಲಿ ಮುಳುಗಡೆ ಆಗಿದ್ದವು. ಶಾಂತಿನಗರ ಡಬ್ಬಲ್‌ ರಸ್ತೆಯಲ್ಲಿ ಭಾರೀ ಪ್ರಮಾಣದ ನೀರು ನಿಂತುಕೊಂಡ ಪರಿಣಾಮ ಕಾರು ಸೇರಿದಂತೆ ಇತರೆ ವಾಹನಗಳು ಕೆಟ್ಟು ನಿಂತುಕೊಂಡವು. ರಸ್ತೆಗಳ ಅವ್ಯವಸ್ಥೆ, ಅಂಡರ್‌ ಪಾಸ್ ಅವ್ಯವಸ್ಥೆ ವಿರುದ್ಧ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ…

ವರದಿ. ಮುಕ್ಕಣ್ಣ ಹುಲಿಗುಡ್ಡ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend