ಕುಸನೂರ ವಸತಿ ಬಡಾವಣೆಯ ನಿವೇಶನಗಳು ಲಾಟರಿ ಮೂಲಕ ಹಂಚಿಕೆ; ಪ್ರಾಧಿಕಾರದಿಂದ ಅಪ್ಪನ‌ ಕೆರೆ ಅಭಿವೃದ್ಧಿ -ದಯಾಘನ ಧಾರವಾಡಕರ್…!!!

ಕುಸನೂರ ವಸತಿ ಬಡಾವಣೆಯ
ನಿವೇಶನಗಳು ಲಾಟರಿ ಮೂಲಕ ಹಂಚಿಕೆ; ಪ್ರಾಧಿಕಾರದಿಂದ ಅಪ್ಪನ‌ ಕೆರೆ ಅಭಿವೃದ್ಧಿ
-ದಯಾಘನ ಧಾರವಾಡಕರ್

ಕಲಬುರಗಿ,
ಕಲಬುರಗಿ ನಗರದ ಹೃದಯ ಭಾಗದಲ್ಲಿರುವ ಶ್ರೀ ಶರಣಬಸವೇಶ್ವರ ಕೆರೆಯ ಒಂದು ಭಾಗದಲ್ಲಿ ಈಗಾಗಲೆ ಮಹಾನಗರ ಪಾಲಿಕೆ ಮತ್ತು ಕೆ.ಕೆ‌.ಆರ್‌.ಡಿ.ಬಿ. ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿದ್ದು, ಅದೇ ರೀತಿಯಾಗಿ ಇನ್ನೊಂದು ಭಾಗದಲ್ಲಿ ಕಲಬುರಗಿ‌ ನಗರಾಭಿವೃದ್ಧಿ ಪ್ರಾಧಿಕಾರವು 10 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳನ್ನು
ಕೈಗೊಳ್ಳಲಿದೆ ಎಂದು ಪ್ರಾಧಿಕಾರದ ಅಧ್ಯಕ್ಷ ದಯಾಘನ‌ ಧಾರವಾಡಕರ್ ಹೇಳಿದರು.

ಮಂಗಳವಾರ ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ ಭವನದಲ್ಲಿ
ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಭಿವೃದ್ಧಿಪಡಿಸಲಾದ ಕುಸನೂರ ವಸತಿ ಬಡಾವಣೆ ಯೋಜನೆಯಲ್ಲಿನ ನಿವೇಶನಗಳ ಲಾಟರಿ ಮೂಲಕ ಹಂಚಿಕೆ ಪ್ರಕ್ರಿಯೆಗೆ ಚಾಲನೆ‌ ನೀಡಿ ಮಾತನಾಡಿದರು.

ಪ್ರಾಧಿಕಾರವು ನಿವೇಶನ, ಮನೆ‌, ಬಡಾವಣೆ ಅಭಿವೃದ್ಧಿಪಡಿಸುವದಷ್ಟೆ ಅಲ್ಲ ನಗರದ ಅಭಿವೃದ್ಧಿಗೂ ಕೈ ಜೋಡಿಸಿದೆ. ಕೆ.ಕೆ.ಅರ್.ಡಿ.ಬಿ. ಅನುದಾನದೊಂದಿಗೆ 26.30 ಕೋಟಿ ರೂ. ವೆಚ್ಚದಲ್ಲಿ ಈಗಾಗಲೇ ನಗರದ ಎಂ.ಎಸ್.ಕೆ.ಮಿಲ್ ಪ್ರದೇಶದ ಸುಸಜ್ಜಿತ ಕಣ್ಣಿ ತರಕಾರಿ ಮಾರುಕಟ್ಟೆ ಕಾಮಗಾರಿಗೆ ಶಂಕುಸ್ಥಾಪನೆ‌ ನೆರವೇರಿಸಿದ್ದು, ಮುಂದಿನ 2 ತಿಂಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದೆ‌. ಇದರಿಂದ ಬೀದಿಯಲ್ಲಿ ತರಕಾರಿ‌ ಮಾರುತ್ತಿದ್ದ ರೈತಾಪಿ ಜನರಿಗೆ ಸುಸಜ್ಜಿತ ಸ್ಥಳ ದೊರೆಯಲಿದೆ. ಒಟ್ಟಾರೆಯಾಗಿ ಕಲಬುರಗಿ ನಗರ ಸುಂದರ‌ ಮತ್ತು ಮಾದರಿ‌ ನಗರ‌ವನ್ನಾಗಿಸುವ ಪಣ ತೊಡಲಾಗಿದೆ ಎಂದರು.

ಕುಸನೂರ ಬಡಾವಣೆ ಯೋಜನೆ 4-5 ವರ್ಷದ ಹಿಂದಿನ ಯೋಜನೆಯಾಗಿದೆ. ಕಾರಣಾಂತರದಿಂದ‌ ನೆನಗುದ್ದಿಗೆ ಬಿದ್ದಿದ ಈ ಯೋಜನೆಗೆ ತಾವು ಪ್ರಾಧಿಕಾರದ ಅಧ್ಯಕ್ಷರಾದ ನಂತರ ಕಳೆದ ಒಂದು ವರ್ಷದಿಂದ ಯೋಜನೆಗಿರುವ ಸಮಸ್ಯೆ-ತೊಡಕುಗಳನ್ನು ನಿವಾರಿಸಿ ಇಂದು ನಿವೇಶನ ಹಂಚಿಕೆ ಪಾರದರ್ಶಕವಾಗಿ ಮಾಡಲಾಗುತ್ತಿದೆ. ಮುಂದಿನ ದಿನದಲ್ಲಿ ಇಂತಹ ಯೋಜನೆಗಳು ನಿರಂತರವಾಗಿ ಜಾರಿಗೆ ತರಲಾಗುವುದು ಎಂದರು.

ಇದಕ್ಕೂ ಮುನ್ನ ಪ್ರಾಧಿಕಾರದ ಆಯುಕ್ತ ದಯಾನಂದ ಪಾಟೀಲ ಸರ್ವರನ್ನು ಸ್ವಾಗತಿಸಿ ಮಾತನಾಡಿ, ನಗರಾಭಿವೃದ್ಧಿ ಪ್ರಾಧಿಕಾರದಿಂದ 90.17 ಎಕರೆ ಪ್ರದೇಶದಲ್ಲಿ ಅಭಿವೃದ್ಧಿಪಡಿಸಲಾದ ಕುಸನೂರ ವಸತಿ ಯೋಜನೆಯಡಿ ಒಟ್ಟು 1490 ನಿವೇಶನಗಳಿದ್ದು, ಇದರಲ್ಲಿ ಮೂಲೆ‌ ನಿವೇಶನ 188 ಹೊರತುಪಡಿಸಿ 1302 ನಿವೇಶನಗಳನ್ನು ಹರಾಜಿಗೆ ಇಡಲಾಗಿದೆ. 1302 ನಿವೇಶನಕ್ಕೆ 1989 ಅರ್ಜಿ ಸ್ವೀಕೃತಗೊಂಡಿರುವ ಹಿನ್ನೆಲೆಯಲ್ಲಿ ಇಂದು ಪ್ರವರ್ಗವಾರು ಲಾಟರಿ ಮೂಲಕ‌ ಪಾರದರ್ಶಕವಾಗಿ ಹಂಚಿಕೆ ಪ್ರಕ್ರಿಯೆ‌ ನಡೆಸಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಗೃಹ ಮಂಡಳಿಯ ಕಾರ್ಯನಿರ್ವಾಹಕ ಅಭಿಯಂತ ಮುರಳಿಧರ ದೇಶಮುಖ, ಪ್ರಾಧಿಕಾರದ ನಗರ ಯೋಜನಾ ಸದಸ್ಯ ಎಸ್.ಎಸ್.ಗಾರಂಪಳ್ಳಿ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ದಿಲೀಪ್ ಜಾಧವ, ಕಾರ್ಯದರ್ಶಿ ವೀಣಾ ಕುಲಕರ್ಣಿ ಇದ್ದರು. ಸುಬ್ಬರಾವ್ ನಿರ್ವಹಣೆ‌ ಮಾಡಿದರು.

ಪ್ರಾಧಿಕಾರದ ಅನೇಕ ಸಿಬ್ಬಂದಿಗಳು ಹಂಚಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು….

ವರದಿ. ವರದಿಗಾರ ಎಚ್ಚರಿಕೆ ಕನ್ನಡ ನ್ಯೂಸ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend