ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಎಸ್ ವಿ ಹಟ್ಟಿ. ಎಸ್ ವಿ. ಹಟ್ಟಿ ಸಾ.ಹಿ.ಪ್ರಾ.ಶಾಲೆ ಪ್ರಾರಂಭೋತ್ಸವ…!!!

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಎಸ್ ವಿ ಹಟ್ಟಿ.
ಎಸ್ ವಿ. ಹಟ್ಟಿ ಸಾ.ಹಿ.ಪ್ರಾ.ಶಾಲೆ ಪ್ರಾರಂಭೋತ್ಸವ..
ಸಿದ್ದಾಪುರ ಗ್ರಾಮದ ಎಸ್. ವಿ.ಹಟ್ಟಿ ಸಾ ಹಿ ಪ್ರಾ ಶಾಲೆಯಲ್ಲಿ ಮೇ16 ರಂದು ಶಾಲಾ ಪ್ರಾರಂಭೋತ್ಸವದ ಕಾರ್ಯಕ್ರಮದ ಪ್ರಯುಕ್ತ ಶಾಲೆಯ ಮುಖ್ಯ ದ್ವಾರದಲ್ಲಿ ತಳಿರು ತೋರಣಗಳಿಂದ ಅಲಂಕರಿಸಿ, ಮಕ್ಕಳಿಗೆ ಸಿಹಿ ಹೂಗುಚ್ಛ ನೀಡಿ ಸ್ವಾಗತ ಮಾಡುವುದರ ಮೂಲಕ ಮುಖ್ಯಶಿಕ್ಷಕ ಕೆ ದುರುಗಪ್ಪ, ಎಸ್ಡಿಎಂಸಿ ಅಧ್ಯಕ್ಷ ಪೂಜಾರಿ ತಿಪ್ಪೇಸ್ವಾಮಿ ಮತ್ತು ಸಹಶಿಕ್ಷಕರು ಶಾಲಾ ಮಕ್ಕಳನ್ನು ಮುಂದಿನ ತರಗತಿಗೆ ಬರಮಾಡಿಕೊಂಡರು. ಶಾಲೆಯ ಮಕ್ಕಳ ಮನಸ್ಸಿಗೆ ಮುದ ನೀಡಲು ಶಾಲೆಯನ್ನು ಮಾವಿನತೋಪು ಹಾಗೂ ಹೂಮಾಲೆ ತಳಿರು ತೋರಣಗಳಿಂದಸಿಂಗರಿಸಲಾಗಿತ್ತು. ತರಗತಿಗೆ ಆಹ್ವಾನ ನೀಡಿದ ದೃಶ್ಯಗಳು ನೋಡುಗರ ಕಣ್ಣಿಗೆ ಮಂದಹಾಸ ಬೀರಿದವು.
ಮುಖ್ಯಶಿಕ್ಷಕ ದುರುಗಪ್ಪ ನವರು ಮಾತನಾಡಿ ಎರಡು ವರ್ಷದ ಕೋವಿಡ್ ಹಿನ್ನೆಲೆಯಲ್ಲಿ ಮಕ್ಕಳ ಗುಣಮಟ್ಟದ ವಿದ್ಯಾಭ್ಯಾಸದ ಚೇತರಿಕೆಯಲ್ಲಿ ಕುಂಠಿತವಾಗಿದ್ದು ಶಿಕ್ಷಣದ ಕೊರತೆಯನ್ನು ಸರಿದೂಗಿಸಲು ಶಿಕ್ಷಣ ಇಲಾಖೆ ಜೂನ್ ತಿಂಗಳಲ್ಲಿ ಆರಂಭವಾಗುವ ಶಾಲೆಗಳನ್ನು ಹದಿನೈದು ದಿನ ಮುಂಚಿತವಾಗಿಯೇ ಮೇ 16 ರಂದು ಶಾಲೆಯನ್ನು ಪ್ರಾರಂಭಿಸುವಂತೆ ಆದೇಶ ಮಾಡಿರುವುದರಿಂದ ಈ ದಿನ ನಾವುಗಳು ಶಾಲೆಯನ್ನು ಪ್ರಾರಂಭಿಸುತ್ತಿದ್ದೇವೆ ಕಾರಣ ನಮ್ಮ ಶಾಲೆಯ ಎಲ್ಲ ಶಿಕ್ಷಕರು ಸಿಬ್ಬಂದಿ ಮತ್ತು ನಾವುಗಳೆಲ್ಲರೂ ಸೇರಿ ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಗಮನ ಕೊಟ್ಟು, ಕರ್ತವ್ಯ ನಿರ್ವಹಿಸಬೇಕೆಂದು ಈ ಸಂದರ್ಭದಲ್ಲಿ ಮುಖ್ಯಶಿಕ್ಷಕರು ಮಾತನಾಡಿದರು. ಮಕ್ಕಳಿಗೆ ಸಿಹಿ ಊಟ ಮಾಡಲಾಗಿತ್ತು, ಈ ಸಂದರ್ಭದಲ್ಲಿ ಎಸ್ಡಿಎಂಸಿ, ಶಾಲೆಯ ಶಿಕ್ಷಕರು, ಅಡುಗೆ ಸಿಬ್ಬಂದಿ, ಶಾಲೆಯ ಮಕ್ಕಳು ಸೇರಿದಂತೆ ಸಾರ್ವಜನಿಕರು  ಉಪಸ್ಥಿತರಿದ್ದರು…

ವರದಿ.ಡಿ.ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend