ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ವೆಂಕಟರಾವ್ ನಾಡಗೌಡ.
ಸಿಂಧನೂರು: 2020 -21 ನೇ ಸಾಲಿನ ಲೋಕೋಪಯೋಗಿ ಇಲಾಖೆ, ಮತ್ತು ಪಿ ಎಮ್ ಜೆ ಎಸ್ ವೈ ಇಲಾಖೆಯಿಂದ ಇಂದು ಮಾಜಿ ಸಚಿವ ಹಾಗೂ ಶಾಸಕ ವೆಂಕಟರಾವ್ ನಾಡಗೌಡ ಸಿಂಧನೂರು ವಿಧಾನ ಸಭಾ ಕ್ಷೇತ್ರದ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಕಾಮಗಾರಿಗಳು ಅಚ್ಚುಕಟ್ಟಾಗಿ ನಡೆಯಬೇಕಾದರೆ, ಗ್ರಾಮೀಣ ಪ್ರದೇಶಗಳಲ್ಲಿ ಜನರ ಸಹಕಾರ ಬಹಳ ಮುಖ್ಯ. ಕಾಮಗಾರಿ ಮಾಡುವ ಸಮಯದಲ್ಲಿ ನೀವೇ ಮುಂದೆ ನಿಂತು ಗುಣಮಟ್ಟದ ಕೆಲಸ ಮಾಡಲು ಸಹಕಾರ ನೀಡಬೇಕು. ಕಾಮಗಾರಿಗಳು ನಿಗದಿತ ಕಾಲಮಿತಿಯೊಳಗೆ ಗುಣಮಟ್ಟದ ಕೆಲಸ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಮತ್ತು ಗುತ್ತೆದಾರರಿಗೆ ಖಡಕ್ಕಾಗಿ ಹೇಳಿದರು.

ಮುಳ್ಳೂರು ಇ ಜೆ ಕ್ಯಾಂಪಿನಲ್ಲಿ 20.00 ಲಕ್ಷ ರೂಗಳ ವೆಚ್ಚದಲ್ಲಿ ಎಸ್ ಟಿ ಕಾಲೋನಿ ಯಲ್ಲಿ ಸಿ ಸಿ ರಸ್ತೆ,ಮುಳ್ಳೂರು ಇ ಜೆ ಗ್ರಾಮದಲ್ಲಿ 15.00 ಲಕ್ಷ ರೂಗಳ ವೆಚ್ಚದಲ್ಲಿ ಎಸ್ ಟಿ ಕಾಲೋವಿ ಯಲ್ಲಿ ಸಿ ಸಿ ರಸ್ತೆ, ಪಗಡದಿನ್ನಿ ಗ್ರಾಮದಲ್ಲಿ 20 ಲಕ್ಷ ರೂಗಳ ವೆಚ್ಚದಲ್ಲಿ ಎಸ್ ಟಿ ಕಾಲೋನಿಯಲ್ಲಿ ಸಿ ಸಿ ರಸ್ತೆ, ಪಗಡದಿನ್ನಿ ಗ್ರಾಮದಲ್ಲಿ 35 ಲಕ್ಷ ರೂಗಳ ವೆಚ್ಚದಲ್ಲಿ ಮೂರು ಶಾಲಾ ಕೊಠಡಿ,ತಿಪ್ಪನಹಟ್ಟಿ ಗ್ರಾಮದಲ್ಲಿ 20 ಲಕ್ಷ ರೂಗಳ ವೆಚ್ಚದಲ್ಲಿ ಎಸ್ ಟಿ ಕಾಲೋನಿ ಯಲ್ಲಿ ಸಿ ಸಿ ರಸ್ತೆ,ತಿಪ್ಪನಹಟ್ಟಿ ಯಿಂದ ಪಗಡದಿನ್ನಿ ಗ್ರಾಮದ ವರೆಗೆ ಪಿ ಎಮ್ ಜೆ ಎಸ್ ವೈ ಇಲಾಖೆಯಿಂದ 139,00 ಲಕ್ಷ ರೂಗಳ ವೆಚ್ಚದಲ್ಲಿ ಡಾಂಬರೀಕರಣ ರಸ್ತೆ,ಕುನ್ನಟಗಿ ಗ್ರಾಮದಲ್ಲಿ 15.00 ಲಕ್ಷ ರೂಗಳ ವೆಚ್ಚದಲ್ಲಿ ಎಸ್ ಟಿ ಕಾಲೋನಿ ಯಲ್ಲಿ ಸಿ ಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಇದೇ ಸಂದರ್ಭದಲ್ಲಿ ಮುಖಂಡರಾದ ಬಸವರಾಜ ಸುಣ್ಣದ,ಪಿ.ರಾಮರೆಡ್ಡಿ, ಅಮರೇಶ,ಸುರೇಶ,ಈರಪ್ಪ, ವೆಂಕಟೇಶ್ ನಂಜಲದಿನ್ನಿ, ಶಂಕರಗೌಡ ಎಲೆಕೂಡ್ಲಗಿ , ಕ್ಷೇತ್ರ ಶಿಕ್ಷಣಾಧಿಕಾರಿ ಶರಣಪ್ಪ ವಟಗಲ್, ಮುಖ್ಯ ಗುರುಗಳಾದ ಪರಸಪ್ಪ, ಜೆಇ ನಂದಿನಿ ಪಾಟೀಲ್ ,ಜೆಇ ಶಿವಪ್ಪ,ಪಿಡಿಓ ಓಂಕಾರೇಶ್ವರಿ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
