ತಂದೆತಾಯಿಗಳನ್ನು ದೇವರು ಎಂದುಕೊಂಡರೆ ಮಾತ್ರ ವೃದ್ಧಾಶ್ರಮಗಳ ಅವಶ್ಯಕ ಇರುವುದಿಲ್ಲ-ಡಾ.ನಾಗರಾಜ ಕಾಟ್ವಾ…!!!

ತಂದೆತಾಯಿಗಳನ್ನು ದೇವರು ಎಂದುಕೊಂಡರೆ ಮಾತ್ರ ವೃದ್ಧಾಶ್ರಮಗಳ ಅವಶ್ಯಕ ಇರುವುದಿಲ್ಲ-ಡಾ.ನಾಗರಾಜ ಕಾಟ್ವಾ

ಸಿಂಧನೂರು : ಪ್ರತಿಯೊಬ್ಬರು ತಂದೆ ತಾಯಿಗಳನ್ನು ದೇವರು ಎಂದು ಕೊಂಡರೆ ಮಾತ್ರ ಇಂತಹ ವೃದ್ಧಾಶ್ರಮಗಳ ಅವಶ್ಯಕತೆ ಇರುವುದಿಲ್ಲ . ಸಮಾಜದಲ್ಲಿ ನಾವೆಲ್ಲರೂ ತಂತ್ರಜ್ಞಾನದಲ್ಲಿ ಮುಂದುವರೆದಿದ್ದೇವೆಯೆ ಹೊರತು ಮಾನವೀಯತೆಯಲ್ಲಿ ಇನ್ನೂ ಹಿಂದುಳಿದಿದ್ದೇವೆ ಎಂದು ಡಾ.ನಾಗರಾಜ ಕಾಟ್ವಾ ಮಾತನಾಡಿದರು.

ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್(ರಿ) ಹರೇಟನೂರು ಹಾಗೂ ನಾಗರಾಜ ಕಾಟ್ವಾ ಅಭಿಮಾನ ಬಳಗದ ವತಿಯಿಂದ ಹಮ್ಮಿಕೊಂಡಿದ್ದ” ವಿಶ್ವ ತಾಯಂದಿರ ದಿನಾಚರಣೆ” ಯ “ಮಾತೃ ಬಾಂಧವ್ಯ” ಕಾರ್ಯಕ್ರಮ ಹಾಗೂ ಅವರ ಪುತ್ರನಾದ ಈ ಗ್ರಂಥ್ ಅವರ 5ನೇ ವರ್ಷದ ಹುಟ್ಟುಹಬ್ಬದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಚನ್ನಬಸಯ್ಯ ಸ್ವಾಮಿ ಹಿರೇಮಠರವರ ಇಡೀ ಕುಟುಂಬ ಶ್ರೀಮಠ ಸೇವಾ ಟ್ರಸ್ಟ್ ನ ಮೂಲಕ ಯಾವೊಬ್ಬ ಕೋಟ್ಯಾಧೀಶ ಮಾಡಲಾಗದಂತಹ ಕಾರ್ಯಕ್ಕೆ ಕೈಹಾಕಿರುವುದು ತಾಲೂಕಿನ ಭಾಗ್ಯ. ನಾವು ನಮ್ಮ ಆಸ್ಪತ್ರೆಯಲ್ಲಿ ನಮ್ಮ ಕಾಯಕದಲ್ಲಿದ್ದಾಗ ಕಾರುಣ್ಯ ಆಶ್ರಮದ ಬಗ್ಗೆ ಕೇಳಿದ್ದೆವು ಸಹಾಯವನ್ನು ಕೂಡ ಮಾಡುತ್ತಿದ್ದೆವು ಆದರೆ ಇಂದು ಪ್ರತ್ಯಕ್ಷವಾಗಿ ನೋಡಿದ ಈ ಕ್ಷಣ ನಮ್ಮ ಜೀವನದ ಶುಭ ಕ್ಷಣದ ಘಳಿಗೆ ಎಂದೆನಿಸುತ್ತದೆ. ಈ ಸಂಸ್ಥೆ ಬರೀ ವೃದ್ಧಾಶ್ರಮ ನಡೆಸುವುದಲ್ಲದೆ ಇನ್ನಿತರ ಸಮಾಜಪರ ಕಾರ್ಯಗಳನ್ನು ಕೈಗೆತ್ತಿಕೊಂಡು ಯಶಸ್ವಿಗೊಳಿಸಿ ಕೋರೋನದಂತಹ ಸಮಯದಲ್ಲಿಯೂ ಇಡೀ ಜಿಲ್ಲೆಯಾದ್ಯಂತ ಜಾಗೃತಿ ಹಾಗೂ ಅರಿವು ಮೂಡಿಸುವ ಕಾರ್ಯ ಮಾಡುವುದರ ಮೂಲಕ ಜನರ ಪ್ರೀತಿಗೆ ಪಾತ್ರವಾಗಿದೆ. ಇಂತಹ ಸಂಸ್ಥೆಗೆ ನಾವೆಲ್ಲರೂ ಸಹಕಾರ ನೀಡಿ ಸಹಾಯ ಹಸ್ತ ಚಾಚಿದಾಗ ಮಾತ್ರ ಆಶ್ರಮಕ್ಕೆ ಶಾಶ್ವತ ನೆಲೆಯ ಕಟ್ಟಡ ನಿರ್ಮಾಣವಾಗುತ್ತದೆ ಎಂದು ಮಾತನಾಡಿಆಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮದಲ್ಲಿ ಡಾ. ಮೋನಿಕಾ ನಾಗರಾಜ ಕಾಟ್ವಾ ಆಶ್ರಮದ ಆಡಳಿತಾಧಿಕಾರಿಗಳಾದ ಚನ್ನಬಸಯ್ಯ ಸ್ವಾಮಿ ಹಿರೇಮಠ ಮೇಲ್ವಿಚಾರಕರಾದ ಸುಜಾತ ಚನ್ನಬಸಯ್ಯ ಮತ್ತು ಕಾಟ್ವಾ ಕುಟುಂಬದ ಹಿರಿಯರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.

ನಂತರ ಕಾರುಣ್ಯ ಆಶ್ರಮದ ವತಿಯಿಂದ ವೈದ್ಯ ದಂಪತಿಗಳಿಗೆ ಸನ್ಮಾನಿಸಿ ಗೌರವಿಸಿ ನೆನಪಿನ ಕಾಣಿಕೆಯನ್ನು ವಿತರಿಸಲಾಯಿತು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend