ಕುರುಕುಂದಾ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶ ಮೇವಿನ ಬಣವೆ ಭಸ್ಮ.
ಸಿಂಧನೂರು: ತಡರಾತ್ರಿ ವಿದ್ಯುತ್ ಸ್ಪರ್ಶ ದಿಂದಾಗಿ ಬೆಂಕಿ ತಗಲಿ ರೈತನ ಮೇವಿನ ಬಣವೆ ಸುಟ್ಟು ಭಸ್ಮ ವಾಗಿದ್ದು ಇದರಿಂದ ರೈತನಿಗೆ ಅಪಾರ ನಷ್ಟವಾಗಿದ್ದು ಕಂಡು ಬಂದಿದೆ.
ತಾಲೂಕಿನ ಕುರುಕುಂದಾ ಗ್ರಾಮದ ಶರಣಪ್ಪ ಹನುಮಪ್ಪ ಬಸ್ಸಾಪೂರು ರವರಿಗೆ ಸೇರಿದ ರೈತನ ಬಣವೆ ಸುಟ್ಟು ಕರಕಲಾಗಿದ್ದು ಸುಮಾರು ರೂ. 50 ಸಾವಿರ ನಷ್ಟ ವಾಗಿದೆ ಎಂದು ಅಂದಾಜು ಮಾಡಲಾಗಿದೆ.
ಮದ್ಯರಾತ್ರಿ ಸರಿಯಾದ ಸಮಯಕ್ಕೆ ಬಂದ ಅಗ್ನಿಶಾಮಕ ದಳದ ನೀರಿನ ವಾಹನ ಸ್ಥಳಕ್ಕೆ ಬಂದು ಮದ್ಯ ರಾತ್ರಿಯಿಂದ ಬೆಳಗಿನ ವರೆಗೂ ಬೆಂಕಿ ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಹರಸಾಹಸ ಪಡಬೇಕಾಯಿತು.
ಅದೃಷ್ಟ ವಶಾತ್ ಯಾವುದೇ ಹಾನಿ ಸಂಭವಿಸಿಲ್ಲಾ
ಗ್ರಾಮ ಲೆಕ್ಕಾಧಿಕಾರಿ ಹನುಮಂತ ಗುರಿಕಾರ ಸ್ಥಳಕ್ಕೆ ಬೇಟಿ ನೀಡಿ ಪಂಚನಾಮೆ ಮಾಡಿಕೊಂಡು ಹೋಗಿದ್ದು ಬಣವೆ ಸುಟ್ಟ ರೈತನಿಗೆ ದನಕರುಗಳಿದ್ದು ಅವುಗಳಿಗೆ ಕೂಡಲೇ ತಾತ್ಕಾಲಿಕ ಪರಿಹಾರ ಕೊಡಬೇಕೆಂದು ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಅಮರೇಗೌಡ ಬಸ್ಸಾಪೂರು ಸಂಬಂಧಿಸಿದ ಅಧಿಕಾರಿಗಳನ್ನು ಆಗ್ರಹ ಪಡಿಸಿದರು…

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
