ದಲಿತ ಪರ ಹಾಗೂ ವಿವಿಧ ಸಂಘಟನೆಗಳಿಂದ ಕಾನಹೊಸಹಳ್ಳಿ ನಾಡಕಚೇರಿಯಲ್ಲಿ ಮನವಿ ಪತ್ರ ಸಲ್ಲಿಕೆ…!!!

ವಿಜಯನಗರ ಜಿಲ್ಲೆ, ಕೂಡ್ಲಿಗಿ ತಾಲೂಕು ಕಾನಹೊಸಹಳ್ಳಿ.
ದಲಿತ ಪರ ಹಾಗೂ ವಿವಿಧ ಸಂಘಟನೆಗಳಿಂದ ಕಾನಹೊಸಹಳ್ಳಿ ನಾಡಕಚೇರಿಯಲ್ಲಿ ಮನವಿ ಪತ್ರ ಸಲ್ಲಿಕೆ
ಅವೈಜ್ಞಾನಿಕ ಹೆದ್ದಾರಿ ನಿರ್ಮಾಣ, ಕಾನಹೊಸಹಳ್ಳಿ ರಾಷ್ಟ್ರೀಯ ಹೆದ್ದಾರಿ ಸರ್ವಿಸ್ ರೋಡ್ ಪಕ್ಕದಲ್ಲಿರುವ ದಲಿತ ಕೇರಿಗಳಿಗೆ ಮಳೆಯ ನೀರು ನುಗ್ಗಿ. ಅಲ್ಲಿ ವಾಸಿಸುವ ಕುಟುಂಬಗಳಿಗೆ ಹಾಗೂ ಸರ್ವಿಸ್ ರೋಡ್ ನಲ್ಲಿ ಓಡಾಡುವ ಸಾರ್ವಜನಿಕರಿಗೂ ಹಾಗು ವಾಹನಗಳಿಗೂ ತೊಂದರೆಯಾಗುವುದನ್ನು ವಿರೋಧಿಸಿ ಅವೈಜ್ಞಾನಿಕ ರಸ್ತೆ ಕಾಮಗಾರಿ ಯನ್ನು ಹಾಗೂ ಚರಂಡಿಯನ್ನು ನಿರ್ಮಾಣ ಮಾಡಿ ಕಳಪೆ ಕಾಮಗಾರಿ ಮಾಡಿ ಜವಾಬ್ದಾರಿಯಿಂದ ಜಾರಿಕೊಂಡು ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವಿಸ್ ರೋಡ್ ಗುತ್ತಿಗೆದಾರರ ವಿರುದ್ಧ ದಲಿತ ಸಂಘಟನೆಗಳು ಹಾಗೂ ಕಾನಹೊಸಹಳ್ಳಿಯ ವಿವಿಧ ಸಂಘಟನೆಗಳ ನೇಕಾರರಿಂದ ಹಾಗೂ ಸದಸ್ಯರಿಂದ ಸಾರ್ವಜನಿಕರಿಂದ ಅವೈಜ್ಞಾನಿಕ ರಸ್ತೆ ಕಾಮಗಾರಿಯನ್ನು ಅತಿ ಶೀಘ್ರದಲ್ಲಿ ಸರಿಪಡಿಸಿ ಇಲ್ಲಿ ಆಗುವ ಅನಾಹುತಗಳನ್ನು ತಪ್ಪಿಸಲು ಹೊಸಹಳ್ಳಿಯ ನಾಡಕಚೇರಿಯ ಉಪತಹಸೀಲ್ದಾರರು ಮೂಲಕ ಮಾನ್ಯ ಜಿಲ್ಲಾಧಿಕಾರಿಗಳು ವಿಜಯನಗರ ಜಿಲ್ಲೆಯವರಿಗೆ, ಮನವಿ ಪತ್ರ ಸಲ್ಲಿಸಲಾಯಿತು. ನಂತರ ದಲಿತ ಮುಖಂಡ ಬಿಟಿ ಗುದ್ದಿ ಚಂದ್ರು ಈ ಸಂದರ್ಭದಲ್ಲಿ ಮಾತನಾಡಿ ರಾಷ್ಟ್ರೀಯ ಹೆದ್ದಾರಿ ಹಾಗೂ ಸರ್ವಿಸ್ ರೋಡ್ ಸೇರಿದಂತೆ ಇಲ್ಲಿ ನಡೆದಿರುವ ಕಳಪೆ ಕಾಮಗಾರಿಗಳ ಬಗ್ಗೆ ಉತ್ತಮ ರೀತಿಯಲ್ಲಿ ದುರಸ್ತಿ ಮಾಡಲು ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದರೂ ಕೂಡ ಪ್ರಯೋಜನವಾಗಿಲ್ಲ. ಕೆಲವು ಅಧಿಕಾರಿಗಳು ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಹೋಗಿದ್ದಾರೆ ಆದರೆ ಏನು ಪ್ರಯೋಜನವಾಗಿಲ್ಲ ಸಂಬಂಧಪಟ್ಟ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿಗಳು ಈ ಕಾಮಗಾರಿಯ ಕುರಿತು ಆದಷ್ಟು ಬೇಗ ಸರಿಪಡಿಸಲಾಗುವುದು ಎಂದು ಹಾರಿಕೆ ಉತ್ತರ ಕೊಟ್ಟು ಜವಾಬ್ದಾರಿಯಿಂದ ಜಾರಿಕೊಳ್ಳುತ್ತಾರೆ. ಆದರೆ ಕಷ್ಟ ಅನುಭವಿಸುವುದು ನಮ್ಮ ದಲಿತರು ಹಾಗೂ ಹೊಸಹಳ್ಳಿಯ ಸಾರ್ವಜನಿಕರು ಮಾತ್ರ. ಅನೇಕ ಬಾರಿ ಮಾಧ್ಯಮದ ಮೂಲಕ ಪ್ರಕಟಣೆಯು ಮಾಡಿದ್ದಾರೆ. ಆದರೆ ಈ ರಾಷ್ಟ್ರೀಯ ಹೆದ್ದಾರಿ ಪದಾಧಿಕಾರಿಗಳಿಗೆ ಸ್ವಲ್ಪ ಜವಾಬ್ದಾರಿ ಇಲ್ಲವಾಗಿದೆ. ರಾಷ್ಟ್ರೀಯ ಹೆದ್ದಾರಿ ಕುರಿತಂತೆ ಸಾರ್ವಜನಿಕರ ಬಸ್ ನಿಲ್ದಾಣದ ಮುಂದೆ ಇರುವ ಸಾರ್ವಜನಿಕ ರಸ್ತೆಯು ಕೂಡ ತುಂಬಾ ಹದಗೆಟ್ಟು ಹೋಗಿದೆ ಇದನ್ನು ಈವರೆಗೂ ಸರಿಪಡಿಸಲು ಆಗಲಿಲ್ಲ ಸುಮಾರು ವರ್ಷಗಳು ಕಳೆದರು ಕೂಡ ಈ ರಸ್ತೆಯ ಕಾಮಗಾರಿ ಮುಂದುವರಿಯದೇ ಹಾಗೆ ನಿಂತಿದೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಳತೆ ಮಾಡಿದಂತೆ ನಟನೆ ಮಾಡಿ ರಸ್ತೆಯನ್ನು ಮಾತ್ರ ಮಾಡದೆ ಹಾಗೆಯೇ ಬಿಟ್ಟು ಹೋಗಿದ್ದಾರೆ. ಅತಿ ಶೀಘ್ರದಲ್ಲಿ ದಲಿತ ಕಾಲೋನಿಯಲ್ಲಿ ಆಗುತ್ತಿರುವ ತೊಂದರೆ ಹಾಗೂ ಬಸ್ಟಾಂಡ್ ನಿಲ್ದಾಣ ಮುಂದುಗಡೆ ಸಾರ್ವಜನಿಕ ರಸ್ತೆ ಕಾಮಗಾರಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಿಸದಿದ್ದಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ದಲಿತ ಮುಖಂಡ ಹಾಗೂ ಡಿ ಎಚ್ ಎಸ್ ಸಂಚಾಲಕ ಬಿಟಿ ಗುದ್ದಿ ಚಂದ್ರು ಈ ಸಂದರ್ಭದಲ್ಲಿ ಮಾತನಾಡಿದರು . ಈ ವಿಚಾರವಾಗಿ ಅನೇಕ ಹೊಸಹಳ್ಳಿ ಗ್ರಾಮದ ಮುಖಂಡರು ಮಾತನಾಡಿದರು. ಈ ಸಂದರ್ಭದಲ್ಲಿ
ಕಂದಾಯ ಇಲಾಖೆಯ ಮುರಳಿಕೃಷ್ಣ ರೇವಣಸಿದ್ದಪ್ಪ, ಮುಖಂಡರಾದ ಬೊಮ್ಮಣ್ಣ, ಗ್ರಾಮ ಪಂಚಾಯಿತಿ ಸದಸ್ಯಹೊನ್ನೂರ ಸ್ವಾಮಿ.ಹೇಮಂತ್ ಕುಮಾರ್, ಫೋಟೋ ನಾಗರಾಜ್, ನೀರಗಂಟಿ ಸುರೇಶ್, ಬಿಟಿ ಗುದ್ದಿ ಚಂದ್ರು, ಸೇರಿದಂತೆ ಯುವಕರು, ವಿವಿಧ ಸಂಘಟನೆಯ ಪದಾಧಿಕಾರಿಗಳು. ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು..

 

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend