ಕೆ ಅರ್ ಎಸ್ ಪಕ್ಷದ ಕರ್ನಾಟಕ ಜನ ಚೈತನ್ಯ ಯಾತ್ರೆ ಯ ಬಗ್ಗೆ ಚಿತ್ರದುರ್ಗದಲ್ಲಿ ನಡೆದ ಪತ್ರಿಕಾ ಗೋಷ್ಠಿಯ
ಚಿತ್ರದುರ್ಗ ಜಿಲ್ಲೆಯೂ ಅವ್ಯವಸ್ಥೆಯ ಗೂಡಗಿದ್ದು ತಾಲೂಕು ಕಚೇರಿಯಲ್ಲಿಯೇ 16 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಶೌಚಾಲಯವು ಕಳೆದ ಎರಡು ವರ್ಷಗಳಿಂದ ಜನರ ಬಳಗೆ ಸಿಗದೆ ಹಾಗೆ ಇದೆ,ಜನರು ಸಣ್ಣ ಪುಟ್ಟ ರೋಗಗಳಿಗೂ ದಾವಣಗೆರೆಗೆ ಹೊಗುತ್ತಿದ್ದಾರೆ,ಆಸ್ಪತ್ರೆಯಲ್ಲಿ ಕೊಠಡಿಗಳ ಕೊರತೆ, ಸಿಬ್ಬಂದಿ ಕೊರತೆ,ಸ್ವಚ್ಚತೆಯ ಕೊರತೆಯ ಬಗ್ಗೆ ಜನರು ದಿನ ನಿತ್ಯ ದೂರು ಹೇಳುತ್ತಿದ್ದಾರೆ, ರಸ್ತೆ,ಚರಂಡಿ,ಗಂಗ ಕಲ್ಯಾಣ ಯೋಜನೆಯ ಬೋರ್ ವೆಲ್ ಸೇರಿದಂತೆ ಎಲ್ಲ ಕಾಮಗಾರಿಗಳಿಗೂ ಸ್ಥಳೀಯ ಶಾಸಕರು ಅಥಿಕಾರಿಗಳು ಕಮಿಷನ್ ಕೇಳುತಿದ್ದಾರೆ,ಅಕ್ರಮ ಗಣಿಗಾರಿಕೆ ಅನಿರ್ಬಂಧಿತವಾಗಿ ನಡೆಯುತ್ತಿದ್ದು ಗಣಿಗಾರಿಕೆಯಿಂದ ಹಾನಿಯಾದ ಪ್ರದೇಶ ಪುನರ್ ಚೇತನಗೋಳಿಸಲು 3000 ಕೋಟಿ ಹಣ ಬಿಡುಗಡೆಯಾಗಿದ್ದು ಈ ಹಣದಲ್ಲಿಯೂ ಭ್ರಷ್ಟಾಚಾರ ನಡೆಯುತ್ತಿದೆ. ಆ ಮೂಲಕ ಕಮಿಷನ್ ಗೆ ಚಿತ್ರದುರ್ಗ ಜಿಲ್ಲೆಯ ಎಲ್ಲ ಶಾಸಕರು ರಾಜ್ಯದಲ್ಲಿಯೇ ಪ್ರಸಿದ್ದಿ ಪಡೆದಿದ್ದಾರೆ ಎಂದು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಸಂಘಟನಾ ಕಾರ್ಯದರ್ಶಿ ಜ್ಞಾನಸಿಂದೂ ಸ್ವಾಮಿ ತಿಳಿಸಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜನ ಚೈತನ್ಯ ಯಾತ್ರೆಯ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಇಂದು ಭ್ರಷ್ಟಾಚಾರ JCB ಸರ್ಕಾರಗಳ ಎಲ್ಲ ಹಂತಗಳಲ್ಲೂ ಜನರನ್ನೂ ಸೂಲುಗೆ ಮಾಡುತ್ತಿವೆ ರಾಜ್ಯದ ವಾರ್ಷಿಕ ಬಜೆಟ್ ಸುಮಾರು 2,65,000 ಸಾವಿರ ಕೋಟಿಯಲ್ಲಿ 40% ಎಂದರೆ ಕನಿಷ್ಠ ಒಂದು ಸಾವಿರ ಕೋಟಿ ಕಿಕ್ ಬ್ಯಾಕ್ ಕಮಿಷನ್ ರಾಜ್ಯ ಸರ್ಕಾರ ಪಡೆಯುತ್ತಿದೆ ,ರಾಜ್ಯದ PSI ನೇಮಕಾತಿ ಹಗರಣದಲ್ಲಿ ರಾಜ್ಯ ಸರ್ಕಾರದ ಸಚಿವರೇ ನೇರವಾಗಿ ಭಾಗಿಯಾಗಿರುವುದು ಜಾಗದ್ ಜಾಹೀರಗಿದೆ, ಬಿಜೆಪಿ ಸರ್ಕಾರದ ಹಿರಿಯ ರಾಜಕಾರಣಿಯೊಬ್ಬರೆ 2500 ಕೋಟಿಗೆ CM ಖುರ್ಚಿ ಬೀಕರಿಗಿದೆ ಎಂದು ಹೇಳಿದ್ದಾರೆ ಇಂಥ ಭ್ರಷ್ಟ ರಾಜಕಾರಣಿಗಳಿಗೆ ಅಡಳಿತ ನಡೆಸುವ ನೈತಿಕತೆ ಇದೆಯಾ ಎಂದು ಪ್ರಶ್ನೆ ಮಾಡಿದರು
ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು” ಕೇಂದ್ರ ಸರ್ಕಾರ ಜಿ ಎಸ್ ಟಿ ಅಧಿಕ ಸಂಗ್ರಹ ಮಾಡಿರುವುದೆ ತನ್ನ ಸಾಧನೆ ಎಂಬಂತೆ ಬಿಂಬಿಸಿದೆ ,GST ಹೆಸರಿನಲ್ಲಿ ಸಾಮನ್ಯ ಜನರಿಂದ ಹೆಚ್ಚು ತೆರಿಗೆ ಸಗ್ರಹ ಮಾಡಿ ಜನರರನ್ನೂ ಸುಲಿಗೆ ಮಾಡುತ್ತಿದೆ ಇದು ಬ್ರಿಟಿಷರ ತೆರಿಗೆ ಶೋಷಣೆಯನ್ನು ಮಾರು ಜಾರಿಗೊಳಿಸಿದೆ ತೆರಿಗೆ ಏರಿಕೆಯಿಂದ ಜನರ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿರುವುದನ್ನು ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಖಂಡಿಸುತ್ತದೆ ಎಂದರು
ಇಂಧ ವ್ಯವಸ್ಥೆ ಕೊನೆಗೊಳ್ಳಬೇಕಾದರೆ ಕೆ.ಅರ್.ಎಸ್ ಪಕ್ಷದ ಅಭ್ಯರ್ಥಿಗಳು ಜಿಲ್ಲಾ ಪಂಚಾಯತಿ,ತಾಲ್ಲೂಕು ಪಂಚಾಯಿತಿ,ವಿಧಾನ ಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಜನರು ಪ್ರಾಮಾಣಿಕ ರಾಜಕಾರಣಿಗಳಿಗೆ ಮತ ನೀಡುವ ಮೂಲಕ ಬೆಂಬಲಿಸಬೇಕೆಂದು ಕೇಳಿಕೊಂಡರು
ಇಂದಿನ ರಾಜ್ಯದ ದುರಾಡಳಿತ ಮತ್ತು ದಿಕ್ಕೆಟ್ಟ ಪರಿಸ್ಥಿತಿಯ ಭವಿಷ್ಯದ ಬಗ್ಗೆ ಆಶಾವಾದ ತುಂಬಲು ಹಾಗೂ ಜೆ,ಸಿ,ಬಿ ಪಕ್ಷಗಳ ಪರಮನೀಚ ರಾಜಕಾರಣವನ್ನು ಕೊನೆಗೊಳಿಸಲು ಮತ್ತು ಜನರಲ್ಲಿ ಜಾಗೃತಿ ಮೂಡಿಸಲು ಕೆ ಅರ್ ಎಸ್ ಪಕ್ಷವು ಕಳೆದ ಏಪ್ರಿಲ್ 24 ರಂದು ಆರಂಭವಾದ ಜನ ಚೈತನ್ಯ ಯಾತ್ರೆಯೂ ದಿನಾಂಕ 18.05.2022 ರಂದು ಹೊಸದುರ್ಗ ಮತ್ತು 19.05.2022 ರಂದು ಹಿರಿಯೂರಿಗೆ ಬರಲಿದೆ ಈ ಸಂದರ್ಭದಲ್ಲಿ ಜನರು ತಮ್ಮ ನ್ಯಾಯಯುತ ಸರ್ಕಾರಿ ಕೆಲಸಗಳನ್ನು ಲಂಚವಿಲ್ಲದೇ ಮಾಡಿಸಿಕೊಳ್ಳು ಕೆ.ಅರ್.ಎಸ್ ಪಕ್ಷವು ನಿಮ್ಮೊಂದಿಗೆ ಕೈ ಜೋಡಿಸುತ್ತಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಅರ್.ಎಸ್ ಪಕ್ಷದ ಜಿಲ್ಲಾ ಯುವ ಘಟಕದ ಅದ್ಯಕ್ಷ ಮಹೇಶ್, ತಾಲೂಕು ಯುವಘಟಕದ ಅದ್ಯಕ್ಷ ಗೌತಮ್,ಸಾಮಾಜಿಕ ಹೋರಾಟಗಾರ ಹೊಳಿಯಪ್ಪ ಸಾಕ್ಯ ಇದ್ದರು…

ವರದಿ. ಶಶಿಕುಮಾರ್ ಚಳ್ಳಕೆರೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
