ವಿಜಯನಗರ ಜಿಲ್ಲೆ. ಕೂಡ್ಲಿಗಿ ತಾಲ್ಲೂಕು ಹಿರೇಕುಂಬಳಗುಂಟೆ.
ಶಂಕರಾಚಾರ್ಯರ ಜಯಂತಿ ಆಚರಣೆ
ಕಾನಹೊಸಹಳ್ಳಿ ಹೋಬಳಿ ವ್ಯಾಪ್ತಿಗೆ ಸೇರಿದ ಹಿರೇಕುಂಬಳಗುಂಟೆ ಗ್ರಾಮಪಂಚಾಯಿತಿಯಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ಪೂಜಿಸಿ ಪುಷ್ಪಾರ್ಚನೆ ಮಾಡಿ ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಆಚರಿಸಲಾಯಿತು.
ಈ ಕಾರ್ಯಕ್ರಮ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ್ ದೇಶಕ್ಕೆ ಏಕತೆಯ ಬೆಸುಗೆ ಹಾಕಿದ ಸಂತ ಜಗದ್ಗುರು ಶಂಕರಾಚಾರ್ಯರು ಭಾರತ ಕಂಡ ಮಹಾನ್ ದಾರ್ಶನಿಕ. ಹಾಗೂ ವೇದಗಳ ತತ್ವಗಳನ್ನು ಭರತ ಭೂಮಿಯಲ್ಲಿ ಪ್ರಚಾರ ಪಡಿಸಿದ ಮಹಾಮೇಧಾವಿ. ಶಂಕರಾಚಾರ್ಯರು ತೋರಿದ ಭಕ್ತಿಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ. ಅವರ ತತ್ವ ಆದರ್ಶಗಳನ್ನು ಪಾಲಿಸೋಣ. ಎಂದು ಹೇಳಿ ಶಂಕರಾಚಾರ್ಯರ ಬಾಲ್ಯ ಮತ್ತು ಅವರ ಜೀವನ ಕುರಿತು ಸವಿಸ್ತಾರವಾಗಿ ಈ ಸಂದರ್ಭದಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಎಸ್ ಡಿಎ. ಕೊಟ್ರೇಶ್. ಕಂಪ್ಯೂಟರ್ ಆಪರೇಟರ್ ರಮೇಶ್. ಗ್ರಂಥಾಲಯದ ಮೇಲ್ವಿಚಾರಕ ವೃ ಷ್ಬೇಂದ್ರ. ಚಂದ್ರಪ್ಪ ನಾಗರಾಜ ಮಂಜುನಾಥ ಸೇರಿದಂತೆ ಶಾಲಾ ಮಕ್ಕಳು ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಅಧ್ಯಕ್ಷರು ಉಪಾಧ್ಯಕ್ಷರು. ಗ್ರಾಮ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು…

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
