ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾದ ಡಾ.ಎಸ್ ಶಿವರಾಜ ಅವಿರೋಧವಾಗಿ ಆಯ್ಕೆ.
ಸಿಂಧನೂರು : ರಾಯಚೂರು ಜಿಲ್ಲಾ ಸರಕಾರಿ ಮತ್ತು ಖಾಸಗಿ ಉಪನ್ಯಾಸಕರ ಸೌಹಾರ್ದ ಸಹಕಾರಿ ನಿಯಮಿತದ ಸಂಸ್ಥಾಪಕ ಅಧ್ಯಕ್ಷರಾಗಿ ಬಾಲಕರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾದ ಡಾ.ಎಸ್ ಶಿವರಾಜ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಅಂಬಾಮಠ ಸರಕಾರಿ ಕಾಲೇಜಿನ ಪ್ರಭಾರಿ ಪ್ರಾಚಾರ್ಯರಾದ ಬಸಪ್ಪ ನವರೂ ಸಹ ಅವಿರೋಧವಾಗಿ ಆಯ್ಕೆಯಾದರು. ಜಿಲ್ಲೆಯ ಉಪನ್ಯಾಸಕರಿಗೆ ಸರಳವಾಗಿ ಮತ್ತು ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಬ್ಯ ಕಲ್ಪಿಸುವ ಉದ್ದೇಶದೊಂದಿಗೆ ಈ ಸೌಹಾರ್ದ ಸಹಕಾರಿ ಬ್ಯಾಂಕ್ ಸ್ಥಾಪಿಸಲಾಗಿದೆ ಎಂದು ಸಹಕಾರಿಯ ಅಧ್ಯಕ್ಷರಾದ ಡಾ.ಶಿವರಾಜ ಹೇಳಿದರು. ಕಾಲೇಜಿನ ಬೋಧಕ ಮತ್ತು ಬೋಧಕೇತರ ರಿಗೆ ಫೋನ್ ಸಂದೇಶದಲ್ಲಿಯೇ ಸಾಲ ಮಂಜೂರಾತಿ ಮಾಡುವ ಸೌಲಬ್ಯ ನೀಡಲಾಗುವುದು. ಎಂದು ಹೇಳಿದರು. ಸಹಕಾರಿಯ ನಿರ್ದೇಶಕರಾದ ಮುರುಡಯ್ಯ ಸ್ವಾಮಿ, ಶಿವಶಂಕರಪ್ಪ, ಶೇಖರಯ್ಯ ಸ್ವಾಮಿ, ಶರಣಪ್ಪ ಹೊಸಳ್ಳಿ, ಮಹಿಬೂಬು ಕೆ, ಅಮರೇಶಪ್ಪ ಹಾವೋಜಿ, ಬಸಲಿಂಗಯ್ಯ ಸ್ವಾಮಿ, ಚಂದ್ರಶೇಖರ ವಲ್ಕಂದಿನ್ನಿ, ವಿಜಯಕುಮಾರ, ಸಾಯಿಬಣ್ಣ , ಮಲ್ಲಪ್ಪ, ಶ್ರೀದೇವಿ ಮತ್ತು ಷಹಮೀದ್ ಉಪಸ್ಥಿತರಿದ್ದರು. ಕಾನೂನು ಸಲಹೆಗಾರರಾದ ಮಲ್ಲಿಕಾರ್ಜುನ ವಕೀಲರು ಸಹಕಾರಿಯ ಕಾರ್ಯಕ್ರಮಗಳನ್ನು ವಿವರಿಸಿದರು…

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
