AIYF ಕಬ್ಬಡಿ ಪಂದ್ಯಾವಳಿಯಲ್ಲಿ ವಿಶೇಷ ವ್ಯಕ್ತಿಗಳಿಗೆ ನಮ್ಮ ಸಂಘಟನೆಯ ವತಿಯಿಂದ ಸನ್ಮಾನ ಮಾಡಲಾಯಿತು….
ಶ್ರೀ.ಕೆ.ಹೆಚ್. ಮಹಮ್ಮದ್ ಆರೀಫ್ ಇವರು ಕರೋನ ಸಂದರ್ಭದಲ್ಲಿ ಅನೇಕ ಜೀವಗಳ ಉಳಿವಿಗೆ ಶ್ರಮಿಸಿದ್ದಲ್ಲದೆ, ಉರಗ ತಜ್ಞರು ಕೂಡ ಹೌದು, ಶ್ರೀ ಭಾಸ್ಕರ್ ಅವರು ಈಜು ತಜ್ಞರು 30 ವರ್ಷಗಳಿಂದ ನದಿಯಲ್ಲಿ ಮುಳುಗಿದ್ದ ಯಾರಿಂದಲೂ ತರಲು ಸಾಧ್ಯವಾಗದಿದ್ದ ಮೃತದೇಹವನ್ನು ಹೊರತೆಯುತ್ತಿದ್ದವರು, ಸಹೋದರಿ ಐಶ್ವರ್ಯ ಬಡತನದಲ್ಲಿ ಅರಳಿದ ಕ್ರೀಡಾ ಪ್ರತಿಭೆ ಈಗಾಗಲೇ ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿದ್ದಾರೆ.
ಕಾಮ್ರೇಡ್ ರಮೇಶ್ ಕೆಳಗೂರು ನಮ್ಮ ಪ್ರೀತಿಯ ಸಂಗಾತಿ ಬಹು ವರ್ಷಗಳಿಂದ ನೊಂದವರ ಹೋರಾಟದ ಧ್ವನಿ, ಮಲೇಷ್ಯಾದಲ್ಲಿನ ಉದ್ಯೋಗವನ್ನು ತೊರೆದು ಮತ್ತೆ ಹೋರಾಟದಲ್ಲಿ ತೊಡಗಿಕೊಂಡವರು. ನಮ್ಮ ಪಕ್ಷದ ಬಡಜನರಿಗಾಗಿ ನಡೆಸುತ್ತಿರುವ “ಸೂರಿಗಾಗಿ ಸಮರ” ಹೋರಾಟವನ್ನು ಈ ಭಾಗದಲ್ಲಿ ಮುನ್ನಡೆಸುತ್ತಿರುವ ನಾಯಕ, ಈ ಭಾಗದಲ್ಲಿ ಕ್ರೀಡಾ ಚಟುವಟಿಕೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಎಲ್ಲಾ ಸಂಗಾತಿಗಳಿಗೆ ಸದಾ ಮಾರ್ಗದರ್ಶನ ಮಾಡುತ್ತಾ ಎಲ್ಲರನ್ನೂ ಪ್ರೀತಿಯಿಂದ ಕರೆದೊಯ್ಯುವ ಪ್ರೀತಿಯ ಸಂಗಾತಿ. ಈ ಎಲ್ಲಾ ಸಾಧಕರುನ್ನು ನಮ್ಮ ಮೂಡುಗೆರೆ ಸಂಗಾತಿಗಳು ಆತ್ಮೀಯವಾಗಿ ಸನ್ಮಾನಿಸುವ ಮೂಲಕ ಕ್ರೀಡಾಕೂಟಕ್ಕೆ ಮೆರುಗನ್ನು ತಂದರು.
ಮತ್ತೊಮ್ಮೆ ನಮ್ಮ ಸಂಘಟನೆಯ ಪ್ರೀತಿಯ ಆಹ್ವಾನಕ್ಕೆ ಆಗಮಿಸಿ ಸನ್ಮಾನ ಸ್ವೀಕರಿಸಿದ ಎಲ್ಲಾ ಗಣ್ಯರಿಗೆ AIYF ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ…

ವರದಿ. ಪ್ರತಾಪ್, ಸಿ, ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
