ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಂಡು ಮುಣಗುಗ್ರಾಮ ಪಂಚಾಯಿತಿ
ಸಿದ್ದಾಪುರ ಗ್ರಾಮದಲ್ಲಿ ಬಸವ ಜಯಂತಿ ಆಚರಣೆ
ಗುಂಡುಮುಣುಗು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಸಿದ್ದಾಪುರ ಗ್ರಾಮದಲ್ಲಿ ಭಕ್ತ ಭಂಡಾರಿ ಬಸವಣ್ಣನವರ ಜಯಂತಿಯನ್ನು ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಬಸವಣ್ಣನವರ ಭಾವಚಿತ್ರಕ್ಕೆ ಹೂಮಾಲೆ ಹಾಕಿ ಪೂಜೆ ಮಾಡಿ. ಗ್ರಾಮದ ಬಸವೇಶ್ವರ ದೇವಸ್ಥಾನದಿಂದ. ಎತ್ತಿನ ಗಾಡಿಯಲ್ಲಿ ಇಟ್ಟುಕೊಂಡು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಮನೆಗಳ ಮುಂದೆ ಬಸವೇಶ್ವರ ಭಾವಚಿತ್ರ ಬರುತ್ತಿದ್ದಂತೆ ಗ್ರಾಮದಲ್ಲಿ ಜನರು ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುತ್ತಿದ್ದರು. ಈ ಮೆರವಣಿಗೆಯಲ್ಲಿ ಯುವಕರು ಮಕ್ಕಳು ತಮಟೆ ವಾದ್ಯಗಳನ್ನು ಬಾರಿಸುತ್ತಾ. ಬಸವಣ್ಣನವರ ಜೈಕಾರ ಹಾಕುತ್ತಾ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಈ ಮೆರವಣಿಗೆಯಲ್ಲಿ ಪಾನಕ ಹಾಗೂ ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರು ಹಾಗೂ ಬಸವಣ್ಣನ ಭಕ್ತಾದಿಗಳು ಪಾನಕ ಮತ್ತು ಮಜ್ಜಿಗೆಯನ್ನು ಕುಡಿದರು. ನಂತರ ಸಾಯಂಕಾಲ 5 ಗಂಟೆಗೆ ಗ್ರಾಮದಲ್ಲಿ ಮೆರವಣಿಗೆ ಮುಗಿಸಿಕೊಂಡು ಬಸವೇಶ್ವರ ದೇವಸ್ಥಾನಕ್ಕೆ ಬರಲಾಯಿತು. ಬಸವೇಶ್ವರ ದೇವಸ್ಥಾನದಲ್ಲಿ ಪಾನಕ. ಪ್ರಸಾದ ವಿತರಣೆ ಮಾಡಲಾಯಿತು.
ಈ ಜಯಂತಿ ಕಾರ್ಯಕ್ರಮದಲ್ಲಿ, ಶ್ರೀ. ಜೆ.ಮಲ್ಲಿಕಾರ್ಜುನ. ಎಂ ನಾಗರಾಜ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ.ಶ್ರೀ ದೇವೇಂದ್ರಪ್ಪ. ತಾಳಿಕೆರೆತಿಪ್ಪೇಸ್ವಾಮಿ. ಹರೀಶ ಗಿರೀಶ ಸಂತೋಷ. ಸಂದೀಪ. ಸಾಗರ. ದಲಿತ ಮುಖಂಡ ತಿಪ್ಪೇಸ್ವಾಮಿ. ಸೇರಿದಂತೆ ಯುವಕರು. ಮಕ್ಕಳು. ಗ್ರಾಮಸ್ಥರು ಭಾಗವಹಿಸಿದ್ದರು…

ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
