;

ಮಂಜಮ್ಮ ಜೋಗುತಿಯವರನ್ನು ಕುಣಿಯುವುದಕ್ಕೆ ಮಾತ್ರ ಸೀಮಿತಗೊಳಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯವೈಖರಿಯನ್ನು ಮೀರಿ…!!!

ಮಂಜಮ್ಮ ಜೋಗುತಿಯವರನ್ನು ಕುಣಿಯುವುದಕ್ಕೆ ಮಾತ್ರ ಸೀಮಿತಗೊಳಿಸಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯವೈಖರಿಯನ್ನು ಮೀರಿ* :- ಬಹಳಷ್ಟು ನೋವಿನಿಂದ ಈ ಮಾತನ್ನು ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಆತ್ಮೀಯರೆ. ಕಠಿಣ ಪರಿಶ್ರಮ ಹಾಗೂ ನೋವಿನ ಅಗಾಧ ಅನುಭವದಿಂದ ಜೋಗುತಿ ನೃತ್ಯವನ್ನು ಹಗಲು ರಾತ್ರಿ ಎನ್ನುವಂತೆ ಅಭ್ಯಸಿಸಿ ಜನರು ನಿಬ್ಬೆರಗಾಗುವಂತೆ ತಲೆಯ ಮೇಲೆ ದೇವಿಯ ಮೂರ್ತಿಯ ಬಿಂದಿಗೆಯೊಂದಿಗೆ ನೃತ್ಯಿಸುವ ಆ ನಾಟ್ಯಕ್ಕೆ ತಲೆದೂಗದ ಮನುಷ್ಯನಿಲ್ಲ ಎನ್ನುವ ಭಾವನೆ ನನ್ನದು ಜೊತೆಗೆ ನೆತ್ತಿಯ ಮೇಲೆ ಬಿಂದಿಗೆ ಇದ್ದರೂ ಸಹ ಮಲಗಿಕೊಂಡು ಮಾಡುವ ಜೋಗುತಿ ನಾಟ್ಯ, ಮಯೂರಿಯನ್ನು ನಾಚಿಸುವಂತಿರುವುದರಿಂದಲೇ ರಾಜ್ಯಾಧ್ಯಂತ ಗಮನ ಸೆಳೆದು ಇದು ಲಕ್ಕಾಂತರ ಜೋಗುತಿಯರ ಮಧ್ಯ ವಿಶೇಷವಾಗಿ ಸ್ಥಾನ ಮಾನ ಪಡೆದಿರುವುದು. ಅಂದು ರಸ್ತೆಯ ಮಧ್ಯ ಅಧ್ಬುತವಾಗಿ ನರ್ತಿಸುತ್ತಿದ್ದರೂ, ದೊಡ್ಡ ದೊಡ್ಡ ಮಾಧ್ಯಮದ ಗಮನಕ್ಕೂ,ಸಂಸ್ಕೃತಿ ಇಲಾಖೆಗೂ ಹಾಗೂ ಸರ್ಕಾರದ ಗಮನಕ್ಕಿಲ್ಲದ ಸಂದರ್ಭದಲ್ಲಿ ನನ್ನ ಗಮನಕ್ಕೆ ಬಿದ್ದದ್ದು ಅಚಾನಕ್ಕಾಗಿ. ಸಮಾರು ವರ್ಷಗಳ ಹಿಂದೆ ಅಂದು ನಾನು ನನ್ನ ಪತ್ರಿಕೆಯಾದ ಸ್ಟಾರ್ ಆಫ್ ಬಳ್ಳಾರಿ ಪತ್ರಿಕೆಯ ಜೊತೆಗೆ ಜಗಧೀಶ್ ಭಾವೆ ಯವರ ನಿಕಟ ಸ್ನೇಹದ ಫಲವಾಗಿ ಬಾಲಕೃಷ್ಣ ಕಾಕತ್ಕರ್ ರವರ ನಿರೂಪಣೆಯಲ್ಲಿ ಉದಯ ಟಿ.ವಿ.ಯ ಕ್ರೈಂ ಸ್ಟೋರಿ ಯಲ್ಲಿ ಕಾರ್ಯನರ್ವಹಿಸುವ ಅವಕಾಶ ದೊರೆತ್ತಿತ್ತು.ಬಳ್ಳಾರಿಯ ಸೆಂಟ್ರಲ್ ಜೈಲ್ ನಲ್ಲಿ ಸಜೆ ಆದಂತ ಕೈಧಿಗಳು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೂ ನಡೆಸುವ ಅನೈತಿಕ ಚಟುವಟಿಕೆ ಕುರಿತಂತೆ ಹಿಡನ್ ಕ್ಯಾಮರಾ ದೊಂದಿಗೆ ಮಾಡಿದಂತ ಸ್ಟೋರಿ ಇಡೀ ರಾಜ್ಯಾಧ್ಯಂತ ಗಮನ ಸೆಳೆದಿದ್ದಲ್ಲದೇ ಜೈಲಿನ ಸೂಪರಿಂಟೆಂಡೆಂಟ್ ಕೆಲಸದಿಂದ ಅಮಾನತ್ತಾಗಿದ್ದರು. ಅದೇ ರೀತಿ ಯಾಗಿ ಸಂಡೂರು ನಲ್ಲಿ ನಡೆದಂತ ವಿವಾಹಿತ ಮಹಿಳೆಯ ಕೊಲೆಯ ಕುರಿತಂತ ಸ್ಟೋರಿ ಮಾಡಲು ಹೊರಟಂತ ಸಂದರ್ಭದಲ್ಲಿ ಮಂಜಮ್ಮ ಹಾಗೂ ತಂಡದವರು ಬಸ್ ಸ್ಟ್ಯಾಂಡ್ ನಲ್ಲಿ ಜೋಗುತಿ ನೃತ್ಯವನ್ನು ಮಾಡುತ್ತಿರುವುದು ನನ್ನ ಕಣ್ಣಿಗೆ ಬಿದ್ದಿದ್ದ ತಡ ಕೂಡಲೇ ಕೆಲ ತುಣುಕುಗಳನ್ನು ಚಿತ್ರಿಸಿಕೊಂಡ ನಂತರ ಹೇಗಾದರೂ ಮಾಡಿ ಈ ಅಪ್ಪಟ ಕಲಾವಿದೆಯ ಬದುಕನ್ನು ಕ್ರೈಂ ಸ್ಟೋರಿಯಲ್ಲಿ ಮಾಡಲೇಬೇಕೆಂದು ಆತ್ಮೀಯರಾದ ಭಾವೆ ಯವರೊಂದಿಗೆ ಸಮಾಲೋಚಿಸಿ ಮಂಜಮ್ಮನವರೊಂದಿಗೆ ಸಂಪರ್ಕ ಸಾಧಿಸಿ ಅವರು ವಾಸಿಸುತ್ತಿದ್ದ ಚಿಲಕನಹಟ್ಟಿ ಗ್ರಾಮಕ್ಕೆ ತಂಡದೊಂದಿಗೆ ತೆರಳಿ ರಾತ್ರಿ ಪೂರ್ತಿ ಚಿತ್ರೀಕರಣ ನಡೆಸಿಕೊಂಡು ಬಂದ ನಂತರ ಉದಯ ಟಿ.ವಿ.ಯ ಕ್ರೈಂ ಸ್ಟೋರಿಯಲ್ಲಿ ಎರೆಡು ದಿನಗಳ ಕಾಲ ಪ್ರಸಾರವಾದ ನಂತರ ರಾತ್ರಿ ಕಳೆದು ಬೆಳಗಾಗುವುದರೊಳಗೆ ರಾಜ್ಯದ ಮನೆಮಾತಾದರೂ ಮಂಜಮ್ಮ ಜೋಗುತಿ.ತದನಂತರ Z.TV ಯ ಬದುಕು ಜಟಕಾ ಬಂಡಿಯಲ್ಲಿ ಇವರ ಸಂಪೂರ್ಣ ಕುಟುಂಬದ ಜೀವನ ಚರಿತ್ರೆಯನ್ನು ,ಇವರ ತಂಡ ಹಾಗೂ ಕುಟುಂಬದವರನ್ನು ಕರೆದುಕೊಂಡು ಜಿ.ಟಿ.ವಿ.ಯ ಸ್ಟೂಡಿಯೋದಲ್ಲಿ ಚಿತ್ರೀಕರಣದ ನಂತರ ರಾಜ್ಯಾಧ್ಯಂತ ಪ್ರಸಾರವಾಗಿದ್ದು ವಿಶೇಷ. ಮಾಧ್ಯಮದವರ ಸಹಕಾರದೊಂದಿಗೆ ಇಂದು ರಾಜ್ಯ,ರಾಷ್ಟ್ರ,ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪದ್ಮಶ್ರೀ ಪುರಸ್ಕೃತರಾಗಿರುವ ನನ್ನ ಆತ್ಮೀಯರಾಗಿರುವ ಮಂಜಮ್ಮ ಜೋಗುತಿ ಹಾಗೂ ತಂಡದವರು ಇರುವಂತ ದಿನ ಮಾನಗಳಲ್ಲಿ ಸುಖಃ ಶಾಂತಿ ನೆಮ್ಮದಿಯಿಂದ ಕಳೆಯಲಿ ಹಾಗೂ ಬಹುದಿನಗಳ ಕನಸು ನನಸಾದ ಈ ದಿನ ಅಂದರೆ ದಿನಾಂಕ:-3/5/2022 ರಂದು ಜರುಗಲಿರುವ ನೂತನ ಗೃಹ ಪ್ರವೇಶಕ್ಕೆ ನನ್ನ ಹೃದಯ ಪೂರ್ವಕ ಶುಭಾಶಯದ ಜೊತೆಗೆ ಶತಕೋಟಿ ನಮನಗಳು ಮಂಜಮ್ಮ ಜೋಗುತಿ ಹಾಗೂ ತಂಡಕ್ಕೆ. ಬಂಗ್ಲೆ ಮಲ್ಲಿಕಾರ್ಜುನ,ಮಾ.ರಾಜ್ಯ ಕಾರ್ಯದರ್ಶಿಗಳು ,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ.

ವರದಿ.ಮಂಜುನಾಥ್, ಎನ್

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *