ಭಗತ್ ಸಿಂಗ್ ಬಾಯ್ಸ್’ ಇಟ್ಟಿಗಿ ಇವರಿಂದ ಅದ್ದೂರಿ ಬಸವ ಜಯಂತಿ ಆಚರಣೆ
ವಿಜಯ ನಗರ ಜಿಲ್ಲೆಯ, ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ 3/5/2022ರ ಮಂಗಳವಾರದಂದು ‘ಭಗತ್ ಸಿಂಗ್ ಬಾಯ್ಸ್’ಇವರಿಂದ ಮಹಾ ಮಾನವತವಾದಿ,ವಚನ ಶ್ರೇಷ್ಠರಾದ ಬಸವೇಶ್ವರರ ಜಯಂತಿಯನ್ನು ಆಚರಣೆ ಮಾಡಲಾಯಿತು. ಬಿಸಿಲಿನ ತಾಪಮಾನ ಸ್ವಲ್ಪ ಕಡಿಮೆ ಆದ ಮೇಲೆ ಮಧ್ಯಾಹ್ನ 4 ರ ನಂತರ ಶುರುವಾದ ಕಾರ್ಯಕ್ರಮದಲ್ಲಿ ಮೊದಲು ಬಸವೇಶ್ವರರ ಭಾವಚಿತ್ರಕ್ಕೆ ಹೂವಿನ ಹಾರದೊಂದಿಗೆ ಪೂಜೆ ಸಲ್ಲಿಸಿ ಎತ್ತಿನ ರಥದೊಂದಿಗೆ ಭಾವಚಿತ್ರವನ್ನು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿದರು. ಈ ಮೆರವಣಿಗೆಯಲ್ಲಿ ಡ್ರಮ್ಸೆಟ್ ವಾದ್ಯಗಳೊಂದಿಗೆ ಒಟ್ಟು ಹದಿನೈದು ಜತೆ ಸಿಂಗರಿಸಿದ ಎತ್ತುಗಳು ಮತ್ತು ರೈತರು ಪಾಲ್ಗೊಂಡಿದ್ದರು. ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜೊತೆಗೆ ರಥದಲ್ಲಿ ವಿಶೇಷವಾಗಿ ಬೆಲ್ಲದ ಪಾನಕವನ್ನು ಭಕ್ತರಿಗೆ ಹಂಚುತ್ತಾ,ಊರಿನ ಪ್ರಮುಖ ದೇವಾಲಗಳಾದ ಬಸವೇಶ್ವರ,ಆಂಜನೇಯ, ಕಲ್ಲೇಶ್ವರ, ಊರಮ್ಮ,ದುರ್ಗಮ್ಮ ದೇವಾಲಗಳ ಮುಂದೆ ಮೆರವಣಿಗೆ ಮಾಡಿ ದೇವರ ದರ್ಶನ ಪಡೆದುಕೊಂಡರು. ನಂತರ ಮೆರವಣಿಗೆ ಮರಳಿ ಸ್ವಂತ ಸ್ಥಾನಕ್ಕೆ ತಲುಪಿತು.ನಂತರ ಮುತ್ತೈದೆಯರು ಮೆರವಣಿಗೆ ಯಲ್ಲಿ ಪಾಲ್ಗೊಂಡ ಎತ್ತುಗಳಿಗೆ ನಿವಾಳಿಸಿ(ದೃಷ್ಟಿ ತೆಗೆದು)ದರು.ನಂತರ ಕೇಸರಿ ಬಾತ್& ಪಲಾವ್ ಪ್ರಸಾದ ವಿತರಣೆಯೊಂದಿಗೆ ಕಾರ್ಯ ಕ್ರಮ ಮುಕ್ತಾಯವಾಯಿತು. ಈ ಕಾರ್ಯಕ್ರಮದಲ್ಲಿ “ಭಗತ ಸಿಂಗ್ ಬಾಯ್ಸ್” ನ ಸರ್ವ ಸದಸ್ಯರು ಹಾಗೂ ಬಳಿಗಾರ ಅಜ್ಜಪ್ಪ,ಪತ್ತಾರ ಈರಣ್ಣ,ಗಣೇಶ್ ಆಚಾರ್,ಅಜ್ಜಯ್ಯನವರ ಮೌನೇಶ್, ಕ್ಯಾತನ ಪಂಪಣ್ಣ,ಕಮ್ಮಾರ ರುದ್ರಚಾರ್(ಗ್ರಾ ಪ ಸದಸ್ಯರು)ಬುಡ್ಡಿ ಬಸವರಾಜ್,ಮಡ್ಡಿ ಅಜ್ಜಪ್ಪ ಇನ್ನೂ ಬಳಿಗಾರ ಓಣಿಯ ಎಲ್ಲಾ ಹಿರಿಯ-ಕಿರಿಯ ರೈತರು,ಯುವಕರು, ಭಾಗವಹಿಸಿದಗದರು. ಊರಿನವರೆಲ್ಲಾ ಒಂದಾಗಿ ಇಂತಹ ಕಾರ್ಯಕ್ರಮಗಳು ನಡೆದಾಗ ಅಲ್ಲಿರುವವರ ಸಂಭ್ರಮಕ್ಕೆ ಪಾರವೆ ಇಲ್ಲ ಅದಕ್ಕೆ ಹೇಳಿರೊದು ‘ಒಗ್ಗಟ್ಟಿನಲ್ಲಿ ಬಲವಿದೆ’ ಅಂತ.ಇ ಒಗ್ಗಟ್ಟು ಹೀಗೆ ಇರಲೆಂದು ನಮ್ಮ ಪತ್ರಿಕೆಯ ಆಶಯ.
ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
