ಇಟ್ಟಿಗಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಜಗಜ್ಯೋತಿ ಬಸವೇಶ್ವರರ ಜಯಂತಿ ಆಚರಣೆ
ವಿಜಯನಗರ ಜಿಲ್ಲೆಯ, ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ವೈಶಾಖ ಶುಕ್ಲಪಕ್ಷದ ತೃತೀಯ ದಿನದಂದು ಲಿಂಗಾಯತ ಮತದ ಸ್ಥಾಪಕರಾದ ಬಸವಣ್ಣನವರ ಜನ್ಮದಿನವಾದ ಬಸವ ಜಯಂತಿಯನ್ನು ಆಚರಿಸಲಾಯಿತು. ಬಸವ ಜಯಂತಿಯು ಲಿಂಗಾಯತರ ಹಾಗೂ ಸರ್ವಧರ್ಮೀಯರ ಅತ್ಯಂತ ಪ್ರಮುಖ ಹಬ್ಬ. ಕರ್ನಾಟಕದಾದ್ಯಂತ ಇದನ್ನು ಬಹಳ ವೈಭವ ಹಾಗೂ ಉಲ್ಲಾಸದಿಂದ ಆಚರಿಸಲಾಗುತ್ತದೆ. ಬಸವೇಶ್ವರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಶುರುವಾದ ಕಾರ್ಯಕ್ರಮದಲ್ಲಿ ಇಟ್ಟಿಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶ್ರೀ ಎಂ ಪ್ರಕಾಶ್,ಗ್ರಾ ಪ ಉಪಾಧ್ಯಕ್ಷರು,ಗ್ರಂಥಪಾಲಕರು,ನೀರಗಂಟಿಗಳು,ಶ್ರೀ ಹೆಚ್ ಪ್ರಕಾಶ್ ಕ್ಲರ್ಕ್, ಕಂ.ಡಿ.ಇ.ಒ. ಪಂಚಾಯತಿ ಕಾರ್ಯಲಯದ ಸಿಬ್ಬಂದಿಗಳು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಹನ್ನೆರಡನೆಯ ಶತಮಾನದಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆದ ಸಾಮಾಜಿಕ ಕ್ರಾಂತಿಯ ರೂವಾರಿ ಬಸವಣ್ಣನವರು. ಅಲ್ಲಮಪ್ರಭು, ಅಕ್ಕಮಹಾದೇವಿ, ಮಡಿವಾಳಮಾಚಯ್ಯ, ನೂಲಿನ ಚಂದಯ್ಯ ಮುಂತಾದ ಶಿವಶರಣರ ಕಾಲದಲ್ಲಿಯೇ ಜೀವಿಸಿದ್ದ ಜಗಜ್ಯೋತಿ ಬಸವಣ್ಣನವರ ಪ್ರಭಾವದ ಕಾರಣ ಆ ಕಾಲವನ್ನು ಬಸವಯುಗವೆಂದೇ ಕರೆಯುತ್ತಾರೆ.
” ನೀರಿಂಗೆ ನೈದಿಲೇ ಶೃಂಗಾರ,
ಊರಿಂಗೆ ಆರವೆಯೇ ಶೃಂಗಾರ,
ಸಮುದ್ರಕ್ಕೆ ತೆರೆಯೇ ಶೃಂಗಾರ
ನಾರಿಗೆ ಗುಣವೇ ಶೃಂಗಾರ
ಗಗನಕ್ಕೆ ಚಂದ್ರಮನೇ ಶೃಂಗಾರ
ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೇ ಶೃಂಗಾರ”.

ವರದಿ-ಪ್ರಕಾಶ್ ಆಚಾರ್.ಇಟ್ಟಿಗಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
