ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಚಿಕ್ಕಜೋಗಿಹಳ್ಳಿ ಮಾಕನಡಕುಗ್ರಾಮ ಪಂಚಾಯತಿ
ವಿಶ್ವ ಕೂಲಿ ಕಾರ್ಮಿಕರ ದಿನಾಚರಣೆ
ಮಾಕನಡಕು ಗ್ರಾಮ ಪಂಚಾಯಿತಿ. ಚಿಕ್ಕಜೋಗಿಹಳ್ಳಿ ಗ್ರಾಮದ. ಕೆರೆಯ ಅಂಗಳದಲ್ಲಿ ಕೂಲಿ ಕಾರ್ಮಿಕರಿಂದ ವಿಶ್ವ ಕೂಲಿಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕಲ್ಪನಾ ಹೇಮೇಶ್ ಗೌಡ ಮಾತನಾಡಿ. ಹೆಚ್ಚಿನ ಬಿಸಿಲು ವಾತಾವರಣ ಇರುವುದರಿಂದ ಪ್ರತಿಯೊಬ್ಬ ಕೂಲಿಕಾರ್ಮಿಕರು ತಮ್ಮ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳಿ. ಏನಾದರೂ ಆರೋಗ್ಯದಲ್ಲಿ ಸಮಸ್ಯೆಗಳು ಕಾಣಿಸಿಕೊಂಡರೆ ತಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಹೋಗಿ ಚಿಕಿತ್ಸೆ ಪಡೆದುಕೊಳ್ಳಿರಿ. ಸರ್ಕಾರ ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಬಂದು ತಮ್ಮ ಕೆಲಸವನ್ನು ನಿರ್ವಹಿಸಿ ಎಂದು ಹೇಳಿದರು. ಪ್ರತಿಯೊಬ್ಬ ಕೂಲಿಕಾರ್ಮಿಕರಿಗೆ ಸರ್ಕಾರ ನಿಗದಿಪಡಿಸಿದ ಕೂಲಿಯನ್ನು ಕೂಲಿ ಕಾರ್ಮಿಕರಿಗೆ ಕೊಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ. ಗ್ರಾಮ ಪಂಚಾಯಿತಿ ಕಾರ್ಯದರ್ಶಿ u. M. ಪ್ರಕಾಶ್. ಗ್ರಾಮ ಪಂಚಾಯಿತಿ ಸದಸ್ಯರಾದ ಬೋರಮ್ಮ. ಶ್ರೀಮತಿ ಮಾಲಾಶ್ರೀ. ಓಬಣ್ಣ. ಮೇಟಿ ರಾಮಣ್ಣ ಸೇರಿದಂತೆ ಕೂಲಿ ಕಾರ್ಮಿಕರು. ಮಹಿಳೆಯರು. ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು..

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
