;

ಗ್ರಾಮ ಪಂಚಾಯತಿ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರುಗಳಿಗಿಲ್ಲ ಗೌರವ ಧನ…!!!

ಗ್ರಾಮ ಪಂಚಾಯತಿ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರುಗಳಿಗಿಲ್ಲ ಗೌರವ ಧನ.

ಸರ್ಕಾರದ ಬಹು ನಿರೀಕ್ಷಿತವಾದ ಯೋಜನೆಗಳಲ್ಲಿ ಒಂದಾದ NRLM ಯೋಜನೆ ಬಗ್ಗೆ ನಾವು ನೋಡುವುದಾದರೆ ಇದರಡಿಯಲ್ಲಿ ಗ್ರಾಮ ಪಂಚಾಯತಿ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟ ಗಳನ್ನು ಮಹಿಳೆಯರಿಗಾಗಿಯೇ ರಚನೆ ಮಾಡಲಾಗುತ್ತದೆ. ಇದರ ಉದ್ದೇಶ ಮಹಿಳೆಯರು ತಮ್ಮ ಸ್ವಂತ ದುಡಿಮೆಯಿಂದ ಆರ್ಥಿಕವಾಗಿ ಮೇಲೆ ಬಂದು ತಮ್ಮ ಕುಟುಂಭವನ್ನು ಸುಲಲಿತವಾಗಿ ನೆಡಿಸಿ ಕೊಂಡು ಹೋಗಲು ಸಹಾಯವಾಗುವಂತೆ ಕಾರ್ಯ ಮಾಡುವುದಾಗಿದೆ. ಅಂದ್ರೆ ಗ್ರಾಮೀಣ ಮಹಿಳೆಯರನ್ನು ಸಂಘಟಿತರನ್ನಾಗಿ ಮಾಡಿ ಒಂದು ಗ್ರಾಮ ಪಂಚಾಯತಿ ಮಟ್ಟದ ಸಂಜೀವಿನಿ ಮಹಿಳಾ ಒಕ್ಕೂಟವನ್ನು ರಚಿಸಿ ಸ್ಥಳೀಯವಾಗಿ ಅರೆ ಸರ್ಕಾರಿ ಸಂಸ್ಥೆಯನ್ನು ಹುಟ್ಟು ಹಾಕಿ…. ಅದರ ಅಧಿಕಾರವನ್ನು ಆ ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ಖಜಾಂಚಿ, ಹೀಗೆ ಒಕ್ಕೂಟದ ಕಾರ್ಯಕಾರಿ ಕಮಿಟಿ ಸದಸ್ಯರಗಳ ಕೈಗೆ ಕೊಟ್ಟು ಅದನ್ನು ವ್ಯವಸ್ಥೆತೆಯಿಂದ ನೆಡಿಸಿಕೊಂಡು ಹೋಗಲು ಸರ್ಕಾರದಿಂದ ಗೌರವ ಧನವನ್ನು ನಿಗದಿ ಪಡಿಸಿ ಎಂ ಬಿ ಕೆ, (ಮ್ಯಾನೇಜಿಂಗ್ ಬುಕ್ ಕೀಪರ್ )ಎಲ್ ಸಿ ಆರ್ ಪಿ (ಲೋಕಲ್ ಕಾಮನ್ ರಿಸೋರ್ಚ್ ಪರ್ಸನ್ )ಗಳನ್ನು ಆಯಾ ಗ್ರಾಮ ಪಂಚಾಯ್ತಿ ವ್ಯಾಪ್ತಿ ಜನಸಂಖ್ಯೆ ಗನುಸರವಾಗಿ ಆಯ್ಕೆ ಮಾಡಿ ಗ್ರಾಮ ಪಂಚಾಯತಿ ಸ್ವಾದಿನದಲ್ಲಿದ್ದಂತ ಒಂದು ಬಿಲ್ಡಿಂಗ್ ನಲ್ಲಿ ಕಛೇರಿಯನ್ನು ಪ್ರಾರಂಭವಾಗಿರುತ್ತದೆ. ಈ ವೆವಸ್ಥಿತಿಯಲ್ಲಿರುವಂತ ಒಕ್ಕೂಟದಲ್ಲಿ ರಚನೆಯಾಗಿರುವ ಸಾಮಾನ್ಯ ಮಹಿಳಾ ಸಂಘದ ಮಹಿಳೆಯರಿಗಾಗಿ ತಮ್ಮ ಸ್ವಂತ ಉದ್ದಿಮೆಯನ್ನು ಪ್ರಾರಂಭಿಸುವುದಕ್ಕಾಗಿ ಈ NRRLM ಯೋಜನೆಯಿಂದ 75000/-ರೂ ಗಳು, ಇನ್ನು ಎಸ್ ಸಿ /ಎಸ್ ಟಿ ಸಂಘ ಗಳಿಗೆ 120,000/-(1ಲಕ್ಷದ ಇಪ್ಪತ್ತು ಸಾವಿರ )ಗಳ ಸಾಲದ ರೂಪದಲ್ಲಿ ಬರುತ್ತದೆ. ಈ ಸಾಲ ಸೌಲಭ್ಯ ವನ್ನು ಕಡಿಮೆ ಬಡ್ಡಿ ದರದಲ್ಲಿ ಸಂಘದ ಸದಸ್ಯರುಗಳು ಹೊಸ ಉದ್ದಿಮೆಯನ್ನು ಪ್ರಾರಂಭಿಸಿ ಪ್ರತಿ ತಿಂಗಳು ಕಂತಿನ ರೂಪದಲ್ಲಿ ಸಾಲ ಮರು ತಿರುವಳಿ ಮಾಡುತ್ತಾ ಸಾಲ ಮುಕ್ತ ರಾಗುವುದಾಗಿದೆ. ಇಷ್ಟೆಲ್ಲ ಕೆಲಸವನ್ನು ತುಂಬಾ ಜವಾಬ್ದಾರಿಯುತವಾಗಿ ನಿಭಾಯಿಸುವಂತ ಕಾರ್ಯಕಾರಿ ಸಮಿತಿ ಸದಸ್ಯರುಗಳಿಗೆ ಗ್ರಾಮ ಪಂಚಾಯತಿ ಸದಸ್ಯರುಗಳಿಗೆ ಸಿಗುವಂತ ಗೌರವ ಧನವು ಇಲ್ಲಿಯವರೆಗೂ ಸರ್ಕಾರದಿಂದ ಗೌರವಧನವನ್ನು ನಿಗದಿಗೊಳಿಸಿಲ್ಲ. ಇನ್ನು ಗೌರವಧನ ನಿಗದಿಗೊಳಿಸಿ ಆಯ್ಕೆ ಮಾಡಿಕೊಂಡಂತ ಒಕ್ಕೂಟದ ಸಿಬ್ಬಂದಿಗಳಿಗೆ ವರ್ಷದಲ್ಲಿ ಒಂದು ಸರಿ ಇಲ್ಲ ತಿಳಿದಾಗ ಕೊಡುವ ರೂಢಿಯನ್ನು ಸರ್ಕಾರ ಹೊಂದಿದೆ….. ಈ ಕಡಿಮೆ ದುಡ್ಡಿನಲ್ಲಿ ದುಡಿಯುವಂತ ಹೆಣ್ಣುಮಕ್ಕಳ ಗೋಳ ನ್ನು ಕೇಳುವವವರೇ ಇಲ್ಲದಂತಾಗಿದೆ… ತಾವೇ ರಿಸ್ಕ್ ತೆಗಿದುಕೊಂಡು ರಚಿಸಿರುವ ಸ್ವ ಸಹಾಯ ಸಂಘಗಳ ನಿರ್ವಹನೆಯನ್ನು ಅಂದ್ರೆ ಕೊಡಿಸಿರುವ ಸಾಲದ ಹಣವನ್ನು ಮಾರುವಸೂಲಾತಿಯಾಗುವಂತೆ ಪ್ರತಿ ತಿಂಗಳು ಕಟ್ಟಿಸಿ ಕೊಳ್ಳುವುದು ಆ ಹಣವನ್ನು ಬ್ಯಾಂಕುಗಳಿಗೆ ಜಮಾ ಮಾಡಿಸುವುದು… ಬ್ಯಾಂಕ್ ಮ್ಯಾನೇಜರ್ ಗಳು ಹೇಳಿದಂತ ದಾಖಲಾತಿಗಳನ್ನು ಮತ್ತು ತಾಲೂಕು ಪಂಚಾಯತಿಯಲ್ಲಿರುವ ಕಚೇರಿಗಳಿಗೆ ಅಲೆದಾಡಿ ಕೊಡುವುದೆಲ್ಲ ಈ ಕಡಿಮೆ ಗೌರವ ಧನವನ್ನು ತೆಗಿದುಕೊಳ್ಳುತ್ತಿರುವ MBK, LCRP ಗಳ ಹೊಣೆಯಾಗಿರುತ್ತದೆ… ಇವರಿಗೇನು ಬಸ್ ಚಾರ್ಜ್ ಗಾಗಲಿ, ಊಟ ತಿಂಡಿ ಗಾಗಲಿ ಯಾವುದೇ ಹಣ ಇರುವುದಿಲ್ಲ, ಹಾಗಿದ್ದರು ಸಹ ಅವರು ತಮ್ಮ ಒಕ್ಕೂಟ ವ್ಯಾಪ್ತಿಯ ಸಂಘ ಗಳಿಗೆ ಸಾಲ ಸೌಲಭ್ಯ ಕೊಡಿಸುವಸಾಲ ಮರು ಪಾವತಿ ಮಾಡಿಸುವ ಕಾರ್ಯವನ್ನು ಎಡೆಬಿಡದೆ ಮಾಡುವರಾಗಿದ್ದಾರೆ, ಆದ್ರೆ ಇವರಿಗೆ ಪ್ರತಿ ತಿಂಗಳಿಗೆ ನಿಗದಿ ಪಡಿಸಿರುವ ಗೌರವಧನ ಮಾತ್ರ ಗಗನ ಚುಕ್ಕಿಯಾಗಿರುತ್ತದೆ. ಇವರದು ಒಂದು ರೀತಿಯಾದರೆ, ಏನು ಪ್ರತಿಫಲವಿಲ್ಲದೆ ಒಕ್ಕೂಟದ ಜವಾಬ್ದಾರಿಯನ್ನು ಹೊತ್ತಿರುವ ಕಾರ್ಯಕಾರಿ ಸಮಿತಿಯ ಸದಸ್ಯರುಗಳ ಗೋಳು ಯಾರಿಗೂ ತಿಳಿಯದು…. ಈ ಕಾರ್ಯಕಾರಿ ಸಮಿತಿ ಸದಸ್ಯರುಗಳು ತಮ್ಮ ತಮ್ಮ ಕುಟುಂಬಗಳ ಜವಾಬ್ದಾರಿಗಳನ್ನು ಬದಿಗೊತ್ತಿ ಸಭೆ ಸಮಾರಂಭಗಳಲ್ಲಿ ಪಾಲ್ಗೊಳ್ಳಬೇಕಾಗಿರುವುದು ಒಂದು ಶೋಚನಿಯ ಸಂಗತಿಯಾಗಿದೆ….. ಒಟ್ಟಿನಲ್ಲಿ ಲಕ್ಷಾಂತರ, ಕೋಟ್ಯಂತರ ಹಣದ ಹರಿವನ್ನು ಸರ್ಕಾರ ಅಧಿನದ NRLM ಯೋಜನೆಗೆ ಒದಗಿಸುವ ಶಕ್ತಿ ಇದ್ದರೂ ಅದರ ಕಾರ್ಯವನ್ನು ಮಾಡುವ ಕಾರ್ಯಕಾರಿ ಸಮಿತಿ ಒಕ್ಕೂಟದ ಸದಸ್ಯರಿಗೂ & ಅಲ್ಲಿ ದುಡಿಯುವಂತ ಸಿಬ್ಬಂದಿಗಳಿಗೆ ಪ್ರತಿ ತಿಂಗಳು ದೊರೆಯುವ ಗೌರವ ಧನ ಸಿಗುವಂತಾಗಬೇಕು… ಕೈ ತುಂಬಾ ದುಡ್ಡಿದ್ದರು ತಿನ್ನಲು ಬಾರದ ಆಹಾರವಾಗಿದೆ ಅಲ್ಲಿ ನಿರ್ವಹಣೆ ಮಾಡುತ್ತಿರುವರೆಲ್ಲರಿಗೂ,,,, ಒಟ್ಟಿನಲ್ಲಿ ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು &ಸರ್ಕಾರ ವು ಕಣ್ತೆರೆದು ಕಷ್ಟ್ಟದಿಂದ ಇರುವವರು ಎಚ್ಛೆತ್ತು ಆಡಳಿತದ ವಿರುದ್ದ ಬಡಿದೆದ್ದು ಪ್ರಶ್ನೆ ಮಾಡುವ ಹಾಗೂ ಬೀದಿಗಿಳಿದು ಹೊರಡುವ ಮೊದಲೇ ಸರ್ಕಾರ ಎಚ್ಚೆತ್ತು ಕೊಂಡು ಆದಷ್ಟು ಬೇಗ ಸಹಾಯ ಮಾಡುವಲ್ಲಿ ಸರಿಯಾದ ಸಮಯಕ್ಕೆ ಗೌರವ ಧನ ವನ್ನು ರಿಲೀಜ್ ಮಾಡಬೇಕೆಂಬುದೇ ಪತ್ರಿಕೆಯ ಆಶಯವಾಗಿದೆ….

ವರದಿ. ಪ್ರಕಾಶ್, ಇಟ್ಟಗಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;