ಅಕಾಲಿಕ ಮಳೆಯಿಂದ ಅಪಾರ ಪ್ರಮಾಣದ ನಷ್ಟ ರೈತ ಕಂಗಾಲು.
ಸಿಂಧನೂರು : ತಾಲೂಕಿನ ಹಲವು ಕಡೆಗಳಲ್ಲಿ ಗುಡುಗು ಸಿಡಿಲು, ಮಿಂಚು ಸಹಿತ ಸುರಿದ ಅಕಾಲಿಕ ಮಳೆಗಾಳಿಗೆ ಲಕ್ಷಾಂತರ ರೂಪಾಯಿ ಬೆಳೆ ಅಪಾರ ಪ್ರಮಾಣದ ಆಸ್ತಿ ನಷ್ಟವಾಗಿದೆ.
ಮಲ್ಲಾಪೂರು ಗ್ರಾಮದಲ್ಲಿ ಗುರುವಾರ ಭೀಕರ ಗಾಳಿಗೆ ಯಮನಪ್ಪ ನಾಯಕ ಅವರ ಮನೆಗಳಿಗೆ ಹಾಕಿದ ಟಿನ್ ಶೆಡ್ಗಳು, ಗಿಡ, ಉರುಳಿ ಅಪಾರ ನಷ್ಟವಾಗಿದೆ ಗಾಳಿಗೆ ಗಿಡಗಳು ಉರಳಿ ಬಿದ್ದಿವೆ.
ಬೀರು ಬೇಸಿಗೆಯಲ್ಲಿ ಬಿಸಿಲಿನಿಂದ ಕೂಡಿದ್ದ ವಾತಾವರಣದಲ್ಲಿ ಗುರುವಾರ ರಾತ್ರಿ 8 ಘಂಟೆಗೆ ಏಕಾಏಕಿ ಜೋರಾಗಿ ಬೀಸಿದ ಗಾಳಿ, ಮಳೆಗೆ ಮನೆಗಳಿಗೆ ಹಾಕಿದ ಶೆಡ್ಗಳು ಹಾರಿ ಹೋಗುವುದನ್ನು ಗಮನಿಸಿದ ಕುಟುಂಬಗಳು ಮನೆಯಿಂದ ಹೊರ ಬಂದಿದ್ದಾರೆ. ಗಾಳಿಗೆ ಬಿದ್ದ ಟಿನ್ಶೆಡ್ಗಳಿಂದ ಮನೆಯಲ್ಲಿರುವ ಬಟ್ಟೆಗಳು, ಪಾತ್ರೆ ಸಾಮಾನುಗಳು ಗಾಳಿಗೆ ಹಾರಿ ಹೋಗಿದ್ದು,ಅಕ್ಕಿ,ಜೋಳ, ಭತ್ತ,ಸಂಪೂರ್ಣ ನಾಶವಾಗಿವೆ. ಮಕ್ಕಳ ವಿದ್ಯಾಭ್ಯಾಸದ ಪಠ್ಯ ಪುಸ್ತಕಗಳು, ಕಾಗದಪತ್ರಗಳು ತೊಯ್ದು ಓದಲಿಕ್ಕೆ ಬರಲಾದ ಪರಿಸ್ಥಿತಿಯಾಗಿದೆ.ಯಾವುದೇ ಅನಾಹುತ ಸಂಭವಿಸಿಲ್ಲ.
ಸುತ್ತಮುತ್ತಲಿನ ಗ್ರಾಮದಲ್ಲಿ ಮಳೆ, ಗಾಳಿಗೆ ಸಾವಿರಾರು ಎಕರೆಯಲ್ಲಿ ಬೆಳೆದು ನಿಂತ ಭತ್ತ ನೆಲ ಸಮವಾಗಿದೆ. ಸರಕಾರ ಕೂಡಲೇ ರೈತರಿಗೆ ಪರಿಹಾರ ನೀಡಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯರಾದ ಯಮನಪ್ಪ ನಾಯಕ ರೈತರ ಪರವಾಗಿ ಮನವಿ ಮಾಡಿದರು…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
