;

ತಾಲ್ಲೂಕು ಹೋರಾಟಕ್ಕೆ ಬೆಲ್ಲದ ನಾಡಿನ ಮಹಾಲಿಂಗಪುರ ತವರು ಕಲಾವಿದರ ಬೆಂಬಲ…!!!

ತಾಲ್ಲೂಕು ಹೋರಾಟಕ್ಕೆ ಬೆಲ್ಲದ ನಾಡಿನ ಮಹಾಲಿಂಗಪುರ ತವರು ಕಲಾವಿದರ ಬೆಂಬಲ

ಮಹಾಲಿಂಗಪುರ ತಾಲ್ಲೂಕು ಹೋರಾಟಕ್ಕೆ ಹದಿನಾರು ದಿನಕ್ಕೆ ಕಾಲಿಟ್ಟದ್ದು ಈ ದಿನದ ಸತ್ಯಾಗ್ರಹದಲ್ಲಿ ಬೆಲ್ಲದ ನಾಡು ಸಕ್ಕರೆ ಬೀಡು ಕಲಾವಿದರ ತವರೂರು ಎಂದು ರಾಜ್ಯಾದ್ಯಂತ ಪ್ರಸಿದ್ಧ ಪಡೆದ ಮಹಾಲಿಂಗಪುರ ಪಟ್ಟಣದ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಗೈದು ದೇಶದಲ್ಲಿ ತನ್ನದೆ ಆದ ಜನಪ್ರಿಯತೆ ಪಡೆದ ಮಹಾಲಿಂಗಪುರದ ಕರಡಿ ಮಜಲು ಕಲಾವಾದ್ಯಗಳನ್ನು ಬಾರಿಸುತ ಮೆರವಣಿಗೆ ಮುಖಾಂತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಕರ್ನಾಟಕ ರಾಜ್ಯದಲ್ಲಿ ಹೆಸರುವಾಸಿಯಾದ ಶ್ರೀ ಕೃಷ್ಣ ಪಾರಿಜಾತ ಕಲಾವಿದರು ವೇಷಭೂಷಣ ಧರಿಸಿಕೊಂಡು ವಿಭಿನ್ನವಾಗಿ ಮೆರವಣಿಗೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಮಹಾಲಿಂಗಪುರದ ಜನಪದ ಮಹಿಳಾ ಕಲಾವಿದರು, ಸಂಗೀತ ಗಾಯಕರು, ಭಜನಾ ಗಾಯಕರು, ಚಿತ್ರಕಲಾ ಕಲಾವಿದರು ಹೀಗೆ ಸಕಲ ವಿವಿಧ ಕಲಾ ಪರಿಣಿತರು ಮಹಾಲಿಂಗಪುರ ಕಲಾವಿದರ ಒಕ್ಕೂಟದ ನೂರಕ್ಕೂ ಹೆಚ್ಚು ಸದಸ್ಯರು ಪಾಲ್ಗೊಂಡು ನಗರದ ಬಸವೇಶ್ವರ ವೃತ್ತದಿಂದ ಜೋಡು ರಸ್ತೆ,ನಡುಚೌಕಿ,
ಜವಳಿ ಬಜಾರ್, ಗಾಂಧಿ ವೃತದ ಮೂಲಕ ಹಾದು ವೀರರಾಣಿ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಇರುವ ಅನಿರ್ದಿಷ್ಟ ಸತ್ಯಾಗ್ರಹ ವೇದಿಕೆಗೆ ಹೋಗಿ ಹೋರಾಟದಲ್ಲಿ ಪಾಲ್ಗೊಂಡರು.

ವರದಿ.
ಬಸವರಾಜ ನಂದೆಪ್ಪನವರ ಮಹಾಲಿಂಗಪುರ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;