ಸಿಡಿಲು ಬಡಿತಕ್ಕೆ ಮಗು ಬಲಿ !
ವಿಜಯನಗರ (ಜಿ)
ಹಗರಿಬೊಮ್ಮನಹಳ್ಳಿ (ತಾ) ಮಾಲವಿ ಗ್ರಾಮದ ಚಲವಾದಿ ನಾಗರಾಜ್ (12) ಎಂಬ ಮಗು ಸಿಡಿಲ ಹೊಡೆತಕ್ಕೆ ಸಾವನ್ನಪ್ಪಿರುವ ದುರ್ದೈವಿಯಾಗಿದ್ದಾನೆ .
ಘಟನೆ ನಡೆದಿದ್ದು ,
ಮಾಲವಿ ಗ್ರಾಮದ ಚಲವಾದಿ ಮಂಜುನಾಥ ಎಂಬುವವರ ಪುತ್ರ ನಾಗರಾಜ್ ತಾಯಿ ಚಿಂತ್ರಪಳ್ಳಿ ಗ್ರಾಮಕ್ಕೆ ಹೋಗಿ ರಸ್ತೆ ಮಧ್ಯೆ ನಡೆದುಕೊಂಡು ಬರುವಾಗ ಚಿಂತ್ರಪಳ್ಳಿ ಗ್ರಾಮದ ಬಳಿಯ ಮಾಜಿ ಶಾಸಕ ಅನಿಲ್ ಲಾಡ್ ಫಾರ್ಮರ್ಸ್ ಬಳಿ ಶುಕ್ರವಾರ ಸಂಜೆ 5 ಗಂಟೆಯ ಸಮಯಕ್ಕೆ ಈ ದುರ್ಘಟನೆ ಸಂಭವಿಸಿದೆ
ಇದ್ದ ಒಬ್ಬ ಮಗನನ್ನು ಕಳೆದುಕೊಂಡ ಪೋಷಕರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು.
ಪ್ರಕರಣ ಸ್ಥಳಕ್ಕೆ ತಾಸಿಲ್ದಾರ್ ಶರಣಮ್ಮ ಭೇಟಿ ನೀಡಿ ಪರಿಶೀಲಿಸಿದರು .
ಈ ವಿಷಯಕ್ಕೆ ಸಂಬಂಧಿಸಿದಂತೆ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ವರದಿ.ಧನಂಜಯ್ ಹಗರಿಬೊಮ್ಮನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
