;

ಭ್ರಷ್ಟಾಚಾರ,ಮರಳು ದಂದೆ, ಅಕ್ರಮ ಮಧ್ಯಮಾರಟ,ಆಕ್ರಮ ಸಾಗುವಳಿ ವಿರುದ್ಧ ಪ್ರತಿಭಟನೆ – ಹುಲುಗಪ್ಪ ಮಲ್ಕಾಪೂರು…!!!

ಭ್ರಷ್ಟಾಚಾರ,ಮರಳು ದಂದೆ, ಅಕ್ರಮ ಮಧ್ಯಮಾರಟ,ಆಕ್ರಮ ಸಾಗುವಳಿ ವಿರುದ್ಧ ಪ್ರತಿಭಟನೆ – ಹುಲುಗಪ್ಪ ಮಲ್ಕಾಪೂರು.

ಸಿಂಧನೂರು : ದಿ.ಏಪ್ರಿಲ್ 22 ರಂದು ಬೆಳಿಗ್ಗೆ 10 ಗಂಟೆಗೆ ತಹಸೀಲ್ದಾರ್ ಕಾರ್ಯಾಲಯದ ಮುಂದೆ ತಾಲೂಕು ಆಡಳಿತ ಮಂಡಳಿ ಭ್ರಷ್ಟಾಚಾರದಲ್ಲಿ ಮುಳುಗಿರುವುದನ್ನು ಖಂಡಿಸಿ ಮತ್ತು ವಿವಿಧ ಭೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಗುವದು ಎಂದು ಬಿ ಎಸ್ ಪಿ ತಾಲೂಕು ಅಧ್ಯಕ್ಷ ಹುಲುಗಪ್ಪ ಮಲ್ಕಾಪುರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ
ಬಹುಜನ ಸಮಾಜ ಪಕ್ಷದ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ತಾಲೂಕಿನಾದ್ಯಂತ ಇತ್ತೀಚಿನ ದಿನಗಳಲ್ಲಿ ಹಲವು ರೀತಿಯ ಸಮಸ್ಯೆಗಳಿದ್ದು ಅದರಲ್ಲಿ ಪ್ರಮುಖವಾಗಿರುವ ವಿಷಯ 2016-17ನೇ ಸಾಲಿನ ಆಯವ್ಯಯ ಬಜೆಟಿನಲ್ಲಿ ಹೋಬಳಿಗೆ ಒಂದರಂತೆ ವಸತಿ ಶಾಲೆ ನಿರ್ಮಿಸುವ ಉದ್ದೇಶದಿಂದ ಹಿಂದಿನ ಸರ್ಕಾರ ಘೋಷಣೆ ಮಾಡಿದ್ದವು. ಅದರಂತೆ ಗೋರೆಬಾಳ ಹೋಬಳಿ ಗೋರೆಬಾಳ ಗ್ರಾಮದ ಸರ್ವೇ ನಂಬರ್ 22/*/1. 8 ಎಕರೆ 21ಗುಂಟೆ ಭೂಮಿಯನ್ನು 1.86.96000ರೂಪಾಗಳನ್ನು ಕೊಟ್ಟು ಸರ್ಕಾರವು ಖರೀದಿ ಮಾಡಿ ರಾಜ್ಯಪಾಲರ ಪರವಾಗಿ ಪ್ರಾಚಾರ್ಯರು ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆ ಗೋರೆಬಾಳ ಇವರ ಹೆಸರಿನಲ್ಲಿ 8 ಎಕರೆ 21ಗುಂಟೆ ಪಹಣಿ ಪತ್ರಿಕೆಯನ್ನು ಸಹ ಮಾಡಿರುತ್ತದೆ.ಆದರೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಆ ಭೂಮಿಯನ್ನು ಖಾಸಗಿ ವ್ಯಕ್ತಿಗಳು ಅನಧಿಕೃತವಾಗಿ ಕಬ್ಜ ಹೊಂದಿ ಸಾಗುವಳಿ ಮಾಡುತ್ತಾ ಬಂದಿರುತ್ತಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದ್ದು, ಕಟ್ಟಡ ಇಲ್ಲದ ಕಾರಣ ತಾತ್ಕಾಲಿಕವಾಗಿ ನಡೆಸುತ್ತಿರುವ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯ ತಿಂಗಳಿಗೆ ಬಾಡಿಗೆಯ ಕಟ್ಟುತ್ತಿರುವುದು ಸರ್ಕಾರಕ್ಕೆ ಹೊರೆಯಾಗುತ್ತಿದ್ದೇ.ಇದರ ಸಂಬಂಧ ನಾವು ಈಗಾಗಲೇ ದಿನಾಂಕ 5-04-2022ರಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದು ಇದುವರೆಗೂ ಯಾವುದೇ ಕಾನೂನು ಕ್ರಮ ತೆಗೆದುಕೊಂಡಿರುವುದಿಲ್ಲ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವಂತಹ ಕಾರ್ಮಿಕರನ್ನು ನೇಮಕ ಮಾಡಿಕೊಳ್ಳುವುದರಲ್ಲಿ ಐ ಎನ್ ಸಿ ಏಜೆನ್ಸಿ ರಾಯಚೂರು ಮತ್ತು ಜಿಲ್ಲಾ ಆರೋಗ್ಯ ಇಲಾಖೆಯ ಆಡಳಿತ ಮಂಡಳಿ ಗೊಂದಲದಿಂದಾಗಿ ಕಾರ್ಮಿಕರಿಗೆ ಸಮಸ್ಯೆಯಾಗಿದೆ, ಇದರಿಂದ ಆಸ್ಪತ್ರೆಗಳಲ್ಲಿರುವ ರೋಗಿಗಳಿಗೆ ಸರಿಯಾದ ಸ್ಪಂದನೆ ಇಲ್ಲದಿರುವುದರಿಂದ ಬಹಳ ತೊಂದರೆಯಾಗಿದೆ.

ತಾಲೂಕಿನ ಕೆಲವು ಹಳ್ಳಿಗಳಲ್ಲಿ ಚಹದಂಗಡಿ,ಹೋಟೆಲ್,ಕಿರಾಣಿ ಅಂಗಡಿಗಳಲ್ಲಿ,ರಾಜಾರೋಷವಾಗಿ ಮದ್ಯ ಮಾರಾಟ ನಡೆಯುತ್ತಿರುವುದರ ಪರಿಣಾಮದಿಂದಾಗಿ ಇಂದು ಅಪ್ರಾಪ್ತ ಬಾಲಕರು ದುಷ್ಕಟಕ್ಕೆ ಬಲಿಯಾಗುತ್ತಿದ್ದಾರೆ. ಮಹಿಳೆಯರ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳು ನಡೆಯುತ್ತಿರುವುದಕ್ಕೆ ಮಧ್ಯೆ ಎಂಬುವುದು ಪೂರಕ ವಸ್ತುವಾಗಿದೆ. ಇದನ್ನು ತಡೆಯಲು ಅಧಿಕಾರಿಗಳು ಸಹ ವಿಫಲರಾಗಿದ್ದಾರೆ.

ತಾಲೂಕಿನಾದ್ಯಂತ ಹಗಲು- ರಾತ್ರಿಯೆನ್ನದೆ ಮರಳು ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ ಅದಕ್ಕೆ ಜೀವಂತ ಸಾಕ್ಷಿಯೆಂದರೆ ಇತ್ತೀಚಿನ ದಿನಮಾನಗಳಲ್ಲಿ ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲಾಗುತ್ತಿರುವುದು ಮತ್ತು ಅಲ್ಲಲ್ಲಿ ರಸ್ತೆ ಅಪಘಾತಗಳು ಸಂಭವಿಸುತ್ತಿರುವುದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಸಂಚಾರಿ ಠಾಣೆಯ ಅಧಿಕಾರಿಗಳು ಒಳಗೊಂಡಂತೆ ಅನೇಕರು ಮೌನವಹಿಸಿದ್ದಾರೆ ಹಾಗಾಗಿ ಇದನ್ನು ವಿರೋಧಿಸಿ ಬಹುಜನ ಸಮಾಜ ಪಕ್ಷವು ಸಾರ್ವಜನಿಕ ಸಹಯೋಗದೊಂದಿಗೆ ಸಿಂಧನೂರಿನ ತಹಸೀಲ್ದಾರ್ ಕಾರ್ಯಲಯಾದ ಮುಂದೆ ದಿನಾಂಕ 22/04/2022 ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿಬೇಕು ಎಂದು ಮನವಿ ಮಾಡಿದರು

ಈ ಸಂದರ್ಭದಲ್ಲಿ ಎಸ್.ಐ. ಸಾಲಗುಂದ, ವಿರೂಪಾಕ್ಷಿ ಸಾಸಲಮರಿ, ಮಂಜುನಾಥ್, ಶಿವಕುಮಾರ್ ಇತರರು
ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;