;

ಅಧಿಕಾರ ಪಡೆಯುವ ನಿಟ್ಟಿನಲ್ಲಿ ಜನರ ಮುಂದೆ ನೀರಿನ ವಿಷಯ ತಂದು ಚುನಾವಣಾ ಗೀಮಿಕ್…!!!

ಸಿಂಧನೂರು : ಅಧಿಕಾರ ಪಡೆಯುವ ನಿಟ್ಟಿನಲ್ಲಿ ಜನರ ಮುಂದೆ ನೀರಿನ ವಿಷಯ ತಂದು ಚುನಾವಣಾ ಗೀಮಿಕ್ ಗಾಗಿ ಹೋರಾಟ ಮಾಡುತ್ತಿದ್ದಾರೆ, ಆದರೆ ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಯಾಕೇ ಮಾಡಲಿಲ್ಲಾ,ನಮ್ಮ ನೀರು,ನಮ್ಮ ಹಕ್ಕು ಪಾದಯಾತ್ರೆ ಮೇಕೆದಾಟು ಯೋಜನೆಯ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಜೆಡಿಎಸ್ ಪಕ್ಷವು ಕೂಡ ಜನತಾ ಜಲಧಾರೆ ಎನ್ನುವಕಾರ್ಯಕ್ರಮ ರಾಜ್ಯಾದ್ಯಂತ ಪ್ರಚಾರ ಮಾಡುತ್ತಿದೆ ಹೀಗೆ ಎರಡು ಪಕ್ಷಗಳು ಅಧಿಕಾರದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ನೀರಿನ ಹೋರಾಟ ಕೈಗೊಂಡಿದ್ದು ಯಾಕೆ ?ಎನ್ನುವುದು ಪ್ರಶ್ನೆಯಾಗಿದೆ ಎಂದು ಮಾಜಿ ಸಂಸದ ಕೆ ವಿರುಪಾಕ್ಷಪ್ಪ ಮಾತನಾಡಿದರು .

ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ನೀರಿನ ಹೆಸರಿನಲ್ಲಿ ಯಾತ್ರೆಗಳು ಪ್ರಾರಂಭಿಸಿದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದರು.

ಭ್ರಷ್ಟಾಚಾರ ಇಡೀ ಜಗತ್ತಿನಲ್ಲಿಯೇ ಇದೆ ಕಾಂಗ್ರೆಸ್ ಪಕ್ಷವು 60 ವರ್ಷ ಆಳ್ವಿಕೆ ಮಾಡಿದ ಪಕ್ಷವಾಗಿದ್ದು ಭ್ರಷ್ಟಾಚಾರದ ದೊಡ್ಡ ದೊಡ್ಡ ಹಗರಣ ನಡೆದಿರುವುದು ಕಾಂಗ್ರೆಸ್ ಸರ್ಕಾರ ವಿದ್ದಾಗ ಅಲ್ಲಿಂದನೇ ಈ ಬೇರುಗಳು ಗಟ್ಟಿಯಾಗಿವೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ರಾಮಕೃಷ್ಣ ಹೆಗಡೆ ಯವರು ಭ್ರಷ್ಟಾಚಾರ ನಿರ್ಮೂಲನೆಗಾಗಿ ಲೋಕಾಯುಕ್ತ ಜಾರಿಗೆ ತಂದರು ಆದರೆ ಸಿದ್ದರಾಮಯ್ಯ ತನ್ನ ಅಧಿಕಾರ ಅವಧಿಯಲ್ಲಿ ಎಸಿಬಿ ರಚನೆ ಮಾಡಿ ಪೋಲಿಸ್ ಇಲಾಖೆಗೆ ಅಧಿಕಾರ ಕೊಟ್ಟು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದರು. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲಾ, ಡಿ.ಕೆ.ಶಿವುಕುಮಾರ ಭ್ರಷ್ಟಾಚಾರ ದಿಂದಾಗಿ ಜೈಲಿಗೆ ಹೋಗಿದ್ದು, ಪಕ್ಷದಲ್ಲಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಜಿ. ಪರಮೇಶ್ವರ, ಶಿವರಾಜ್ ತಂಗಡಗಿ ಹಾಗೂ ಮುನಿಯಪ್ಪ ರವರನ್ನು ಸೋಲಿಸಿದ ಕಿರ್ತಿ ಸಿದ್ದರಾಮಯ್ಯ ನವರಿಗೆ ಸಲ್ಲುತ್ತದೆಂದರು.

ತಾವೇ ಪ್ಯಾಕೇಜ್ ಸಿಸ್ಟಮ್ ತಂದು ತಾವೇ ಹರಾಜಿನಲ್ಲಿರುವವರು ಯಾರು ಕಾಮಗಾರಿ ಮಾಡದೇ ಪರ್ಸೆಂಟೇಜ್ ಗೆ ಕಾಮಗಾರಿಯನ್ನು ಕೊಟ್ಟಿರುವುದು ಅಂದಿನಿಂದಲೂ ಈ ವ್ಯವಸ್ಥೆ ಇದೆ. ಹಾಗಾಗಿ ಈ ವ್ಯವಸ್ಥೆಯನ್ನು ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ಅಭಿವೃದ್ಧಿ ಕಾಮಗಾರಿಗೆ ಒಂದು ಹೊಸ ಸಮಿತಿಯನ್ನು ರಚನೆ ಮಾಡಿ ಯಾವುದೇ ಟೆಂಡರ್ ಕಾರ್ಯ ಪ್ರಾರಂಭವಾಗಬೇಕಾದರೆ ಆ ಸಮಿತಿಯ ಆಧಾರದ ಮೇಲೆ ಮಾಡಬೇಕೆಂದು ರಾಜ್ಯ ಸರ್ಕಾರ ತಿರ್ಮಾನಿಸಿದೆ. ರಾಜ್ಯದ ಜನರ ಆಶ್ರೀವಾದದಿಂದ ಮತ್ತೊಂದು ಬಾರಿ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುತ್ತೆಂದು ಹೇಳಿದರು.

ಈ ಸಂದರ್ಭದಲ್ಲಿ ಹನುಮೇಶ ಸಾಲುಗುಂದಾ, ಶಿವುನಗೌಡ ಗೋರೆಬಾಳ, ಎಂ.ದೊಡ್ಡ ಬಸವರಾಜ, ಪರಮೇಶಪ್ಪ ದಡೇಸೂಗುರು, ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;