ಮುದೇನೂರು ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ. ಬಿ. ಕೆ. ಸ್ಥಾಪಿತ) ಗ್ರಾಮ ಶಾಖೆ ಉದ್ಘಾಟನೆ…!!!

: ವಿಜಯನಗರ ಜಿಲ್ಲೆ. ಹೂವಿನಹಡಗಲಿ ತಾಲ್ಲೂಕು. ಮುದೇನೂರು ಗ್ರಾಮ .
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಪ್ರೊ. ಬಿ. ಕೆ. ಸ್ಥಾಪಿತ) ಗ್ರಾಮ ಶಾಖೆ ಉದ್ಘಾಟನೆ
ಮುದೇನೂರು ಗ್ರಾಮ :- ಕರ್ನಾಟಕ ದಲಿತ ಸಂಘರ್ಷ ಸಮಿತಿ ಯಾವುದೇ ಜಾತಿ ಧರ್ಮ, ಜನಾಂಗ ಕ್ಕೆ ಸೀಮಿತವಾಗಿಲ್ಲ . ಪ್ರತಿಯೊಂದು ಜಾತಿಯಲ್ಲೂ ದಲಿತರಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ವರೆಲ್ಲರೂ ದಲಿತರೇ. ಎಂದು ಮುದೇನೂರು ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೃಷ್ಣಪ್ಪ ಸ್ಥಾಪಿತ ಗ್ರಾಮ ಶಾಖೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೂವಿನಹಡಗಲಿ ತಾಲೂಕು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಶ್ರೀಮತಿ ಲಲಿತಮ್ಮನವರು ಗ್ರಾಮ ಶಾಖೆಯ ಉದ್ಘಾಟನೆ ಮಾಡಿ ಮಾತನಾಡಿದರು.. ಕರ್ನಾಟಕ ದಲಿತ ಸಂಘರ್ಷ ಸಮಿತಿ, ದಲಿತರಿಗಾಗಿ ದಲಿತರಿಗೋಸ್ಕರ, ದಲಿತರ ಕುಂದುಕೊರತೆಗಳ ಬಗ್ಗೆ, ದಲಿತರ ಹಕ್ಕುಗಳ ಬಗ್ಗೆ ಹೋರಾಟ ಮಾಡುವುದೇ ದಲಿತ ಸಂಘರ್ಷ ಸಮಿತಿ ಕರ್ತವ್ಯ, ಯಾರೊಬ್ಬ ದಲಿತರು ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗಬಾರದು. ಪ್ರತಿಯೊಬ್ಬರು ಶಿಕ್ಷಣವನ್ನು ಪಡೆಯಿರಿ, ಶಿಕ್ಷಣದಿಂದ ಯಾರೂ ವಂಚಿತರಾಗಬಾರದು, ಡಾ ಬಿ ಆರ್ ಅಂಬೇಡ್ಕರ್ ರವರು ಉನ್ನತ ಶಿಕ್ಷಣವನ್ನು ಪಡೆದು . ಯಾರು ಪಡೆಯ ಲಾರದಂತಹ ಪದವಿಗಳನ್ನು ಪಡೆದರು. ಭಾರತದ ಸಂವಿಧಾನವನ್ನು ರಚನೆ ಮಾಡಿದರು. ಸಂವಿಧಾನ ನಮ್ಮ ಜನ್ಮಸಿದ್ಧ ಹಕ್ಕು, ಪ್ರತಿ ಯೊಬ್ಬರು ಸಂವಿಧಾನವನ್ನು ಪೂಜಿಸಬೇಕು. ಸವಿಂದಾನ ಉಳುವಿಗಾಗಿ ನಾವೆಲ್ಲರೂ ಶ್ರಮಿಸಬೇಕು. ಇತ್ತೀಚಿನ ದಿನಗಳಲ್ಲಿ ಒಬ್ಬ ನ್ಯಾಯಾಧೀಶ ಗಣರಾಜ್ಯೋತ್ಸವ ದಿನದಂದು ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನ ಮಾಡಿದ್ದು. ಭಾರತದ ಸಂವಿಧಾನಕ್ಕೆ ಅವಮಾನ ಮಾಡಿದಂತೆ. ಇನ್ನು ಕೆಲವು ರಾಜಕೀಯ ಗಣ್ಯರು ಸಹ ಸಂವಿಧಾನದ ಬಗ್ಗೆ ಮಾತನಾಡಿದ್ದಾರೆ. ಕಾರಣ ನಾವುಗಳು ಸಂವಿಧಾನದ ಉಳಿವಿಗಾಗಿ ಸಂವಿಧಾನಕೋಸ್ಕರ ಸಂಘಟಿತರಾಗಬೇಕು ಎಂದು ಈ ಸಂದರ್ಭದಲ್ಲಿ ಮಾತನಾಡಿದರು ಕಾರ್ಯಕ್ರಮದಲ್ಲಿ ಹೂವಿನಹಡಗಲಿ ತಾಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕರಾದ ಶ್ರೀಮತಿ ಲಲಿತಮ್ಮ , ಹೋಬಳಿ ಸಂಚಾಲಕರಾದ ಆಂಜನೇಯ,ಗ್ರಾಮ ಘಟಕ ಸಂಚಾಲಕರಾದ ಹಾಲಪ್ಪ, ಸಂಘಟನಾ ಸಂಚಾಲಕರಾದ ಚೌಡಪ್ಪ. ಸೇರಿದಂತೆ ಗ್ರಾಮ ಘಟಕದ ಸರ್ವ ಸದಸ್ಯರು. ಪದಾಧಿಕಾರಿಗಳು, ಊರಿನ ಹಿರಿಯರು. ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು…

ವರದಿ.ಅಜಯ್, ಚ, ಹೂವಿನಹಡಗಲಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend