ಬಡೇಲಡಕು ಗ್ರಾಮ. ಡಾ.ಬಿ. ಆರ್.ಅಂಬೇಡ್ಕರ್ ರವರ 131ನೇ ಜಯಂತಿಯ ಆಚರಣೆ…!!!

ವಿಜಯನಗರ ಜಿಲ್ಲೆ.ಕೂಡ್ಲಿಗಿ ತಾಲೂಕು. ಬಡೇಲಡಕು ಗ್ರಾಮ ಪಂಚಾಯಿತಿ. ಬಡೇಲಡಕು ಗ್ರಾಮ.
ಡಾ.ಬಿ. ಆರ್.ಅಂಬೇಡ್ಕರ್ ರವರ 131ನೇ ಜಯಂತಿಯ ಆಚರಣೆ
ಬಡೇಲಡಕು :- ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಯುವಕ ಸಂಘ ಬಡಲಡು ಕು ಶಾಖೆ ವತಿಯಿಂದ ಡಾಕ್ಟರ್ ಬಿಆರ್ ಅಂಬೇಡ್ಕರ್ 131ನೇ ಜಯಂತಿಯನ್ನು ಅತಿ ಸಂಭ್ರಮ-ಸಡಗರದಿಂದ ಆಚರಿಸಲಾಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಅಂಬೇಡ್ಕರ್ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ಯುವಕರು ಮುಖಂಡರು ಅಂಬೇಡ್ಕರ್ರವರ ಘೋಷಣೆಗಳನ್ನು ಕೂಗುತ್ತಾ ಜೈಕಾರ ಹಾಕಿದರು. ನಂತರ ಕಾರ್ಯಕ್ರಮವನ್ನು ಏರ್ಪಡಿಸಿದ್ದ ಸ್ಥಳಕ್ಕೆ ಆಗಮಿಸಿ ದಲಿತ ಮುಖಂಡರ ಊರಿನ ಗಣ್ಯರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮ ಕುರಿತು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಘಟನಾ ಸಂಚಾಲಕರಾದ ದುರುಗೇಶ್ ಅವರು ಈ ಕಾರ್ಯಕ್ರಮ ಕುರಿತು ಮಾತನಾಡಿ,ಅಂಬೇಡ್ಕರ್ರವರು ಭಾರತದ ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರಾಗಿದ್ದರು, ಅವರು ನಮ್ಮ ಬೃಹತ್ ಸಂವಿಧಾನದ ರಚನೆಗಾಗಿ ಅವರು ಪಟ್ಟ ಶ್ರಮ. ಅವರ ಕೊಡುಗೆ ಅಪಾರ ಅಮೋಘವಾದದ್ದು. ಆದುದರಿಂದಲೇ ಭಾರತದ ಸಂವಿಧಾನ ಶಿಲ್ಪಿ ಎಂದು ಕರೆಯುತ್ತಿದ್ದಾರೆ. ಇವರು ಒಂದು ಜಾತಿ ಧರ್ಮಕ್ಕೆ ಸೀಮಿತವಾಗಿರಲಿಲ್ಲ, ಪ್ರತಿಯೊಂದು ಜಾತಿಗೂ ಧರ್ಮದವರಿಗೂ ಮತದಾನದ ಹಕ್ಕನ್ನು ತಂದುಕೊಟ್ಟಂತಹ ಮಹಾಪುರುಷ ದೇವರು ಎಂದು ಈ ಸಂದರ್ಭದಲ್ಲಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ತಾಲೂಕು ಮುಖಂಡರಾದ ಎಚ್ ದುರುಗೇಶ. ವೆಂಕಟೇಶ್, ಸದಸ್ಯರಾದ ಹನುಮಂತಪ್ಪH. ಸತ್ಯಪ್ಪ ದುರ್ಗ ರಾಜ್ ಮೂರ್ತಪ್ಪ. ಕುಮಾರ. ಓಂ ನಾಥ. ನಾಗರಾಜ ಬಿ ಕಾಶಿನಾಥ ಜೆ ನಾಗರಾಜ. ಸಿ ಡಿ. ವೆಂಕಟೇಶ್, ಗೆದ್ದ ಪರ ಮಂಜು ಶಿಡ್ಲಾಪುರ ಮಂಜು. ಸೇರಿದಂತೆ ದಲಿತ ಸಂಘರ್ಷ ಸಮಿತಿಯ ಮುಖಂಡರು ಸದಸ್ಯರು ಪದಾಧಿಕಾರಿಗಳು, ಮುಖಂಡರು, ಮಹಿಳೆಯರು, ಮಕ್ಕಳುಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು…

ವರದಿ.ಡಿ. ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend