ನಿಕ್ಷಪಕ್ಷಪಾತವಾಗಿ ತನಿಖೆಗೆ ಬಂದ ಜಿಲ್ಲಾ ಮುಖ್ಯ ವೈದ್ಯಾಧಿಕಾರಿಗೆ ಶಾಸಕರಿಂದ ಪೋನ್ ಕರೆ…!!!

ನಿಕ್ಷಪಕ್ಷಪಾತವಾಗಿ ತನಿಖೆಗೆ ಬಂದ ಜಿಲ್ಲಾ ಮುಖ್ಯ ವೈದ್ಯಾಧಿಕಾರಿಗೆ ಶಾಸಕರಿಂದ ಪೋನ್ ಕರೆ.

ಸಿಂಧನೂರು : ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಗುರುವಾರದಂದು ಹೆರಿಗೆಗೆಂದು ಬಂದ ಮಹಿಳೆ ವೈಧ್ಯರಿಲ್ಲದೇ ನರಳಾಟದಿಂದ ತೀವ್ರ ನೋವು ಅನುಭವಿಸಿದ ಘಟನೆ ನಡೆದದ್ದು ಮುಖ್ಯ ವೈದ್ಯಾಧಿಕಾರಿ ಆಸ್ಪತ್ರೆಯಲ್ಲಿ ಇದ್ದರೂ ಚಿಕಿತ್ಸೆ ನೀಡದೇ ಹೊರಗೆ ಹೋದ ಘಟನೆಯನ್ನು ಜಿಲ್ಲಾ ಮುಖ್ಯ ವೈದ್ಯಾಧಿಕಾರಿಗೆ ರಾಮಕೃಷ್ಣ ರವರಿಗೆ ವಿಷಯ ತಿಳಿಸಿ ನಮ್ಮ ಪತ್ರಿಕೆಯಲ್ಲಿ ಸುದ್ದಿ ಬಿತ್ತರಿಸಿದ ಹಿನ್ನೆಲೆ ತಾಲೂಕು ಆಸ್ಪತ್ರೆಗೆ ಬೇಟಿ ನೀಡಿ ಅಲ್ಲಿನ ಅವ್ಯವಸ್ಥೆಗಳ ಬಗ್ಗೆ ಪರಿಶೀಲಿಸಿದಾಗ ವೈದ್ಯರು ಇಲ್ಲದಿರುವುದು ಘಟನೆ ಕಂಡು ಬಂತು. ಪತ್ರಕರ್ತರೊಂದಿಗೆ ಮಾತನಾಡುವ ವೇಳೆಯಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಅವರು ಪೋನ ಕರೆ ಮಾಡಿದ್ದಾರೆ, ತನಿಖೆ ವೇಳೆಯಲ್ಲಿ ಪೋನ್ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.

ಗುರುವಾರದಂದು ಚಿರತ್ನಾಳ ಗ್ರಾಮದ ವಜ್ರಮ್ಮ ಗಂಡ ರಮೇಶ ಎಂಬ ಮಹಿಳೆ ಹೆರಿಗೆಗೆಂದು ನಗರದ ಸರ್ಕಾರಿ ಆಸ್ಪತ್ರೆಗೆ ಬಂದು ಮೂರು ತಾಸು ಆದರು ಸಹ ಚಿಕಿತ್ಸೆ ನೀಡದೇ ಸುಳ್ಳು ನೆಪ ಹೇಳಿ ವೈಧ್ಯರು ಇಲ್ಲ ಎಂದು ನಿರ್ಲಕ್ಷಿಸಿದ ಮುಖ್ಯ ವೈದ್ಯಾಧಿಕಾರಿ ಹನುಮಂತರೆಡ್ಡಿ ಅವರು ಬೇಜ್ವಾಬ್ದಾರಿ ಹೇಳಿಕೆ ನೀಡಿ ಮಹಿಳೆ ಸಂಭಂದಿಕರು ಅಂಗಲಾಚಿ ಬೇಡಿಕೊಂಡರು ಕರುಣೆ ಇಲ್ಲದೆ ಹೊರ ನಡೆದಿರುವ ಘಟನೆಯನ್ನು ವೈದ್ಯಕುಲಕ್ಕೆ ಮಾಡಿರುವ ದ್ರೋಹ, ಇಲ್ಲಿಯ ಅವ್ಯವಸ್ಥೆಗಳ ವೀಕ್ಷಣೆ ಮಾಡಿದಾಗ 12 ಜನ ಕರ್ತವ್ಯದಲ್ಲಿ ಇರಬೇಕಾದ ವೈಧ್ಯರಲ್ಲಿ ಆರು ಜನರನ್ನು ಹೊರತುಪಡಿಸಿ ಇನ್ನುಳಿದ ವೈದ್ಯರು ಇಲ್ಲದಿರುವ ವಿಷಯ ಮನಗಂಡು ಪತ್ರಕರ್ತ ರೊಂದಿಗೆ ಮಾತನಾಡಿದ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ರಾಮಕೃಷ್ಣ ಅವರು ನಿನ್ನೆ ನಡೆದ ಆಸ್ಪತ್ರೆಯಲ್ಲಿನ ಸ್ಟಾಫ್ ನರ್ಸ್‌ ಮತ್ತು ವೈದ್ಯರು ನಿರ್ಲಕ್ಷ್ಯತೆ ಯಿಂದ ಬಡ ರೋಗಿಗಳು ನಿತ್ಯ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಆಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಮತ್ತು ಮುಖ್ಯ ವೈದ್ಯಾಧಿಕಾರಿಯ ಮೇಲೆ ಸಾರ್ವಜನಿಕರಿಂದ ಅನೇಕ ದೂರುಗಳ ಆಧಾರದ ಮೇರೆಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದೇನೆ.ಇಲ್ಲಿ ವೈದ್ಯಾಧಿಕಾರಿಗಳ ಮಧ್ಯ ಹೊಂದಾಣಿಕೆ ಇಲ್ಲಾ, ಬೆಳಿಗ್ಗೆ 9:00 ಘಂಟೆಗೆ ಬರಬೇಕಾದ ವೈದ್ಯಾಧಿಕಾರಿಗಳು 11:00 ಕ್ಕೆ ಬರುತ್ತಾರೆ, ಅತೀ ಹೆಚ್ಚು ತಮ್ಮ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಾರೆ ಪ್ರತಿಯೊಂದು ಔಷದಿಗೆ ಖಾಸಗಿ ಮೆಡಿಕಲ್ ಮತ್ತು ಚಿಕಿತ್ಸೆಗೆ ತಮ್ಮ ಆಸ್ಪತ್ರೆಗೆ ಕಳಿಸುತ್ತಾರೆ ಎಂಬುದು ದೂರುಗಳು ಬಂದಿವೆ.

ಸರ್ಕಾರದ ಮಾರ್ಗಸೂಚಿಯಂತೆ ಔಷಧಿ ತಂತ್ರಜ್ಞಾನ ಅಳವಡಿಕೆ ಮಾಡಿದ್ದಾರೆ ಪ್ರತಿಯೊಂದು ಔಷಧಿಗಳನ್ನು ಆನ್‌ಲೈನ್ ಮೂಲಕ ನೊಂದಾಯಿಸಬೇಕು, ಅಂದಾಗ ಮಾತ್ರ ನಮಗೆ ಔಷಧಿ ಬರುತ್ತದೆ.ಜಿಲ್ಲಾ ಕೇಂದ್ರದಲ್ಲಿ ಔಷಧಿಗಳನ್ನು ಸ್ಟೋರ್ ಮಾಡಲಾಗಿರುತ್ತದೆ.ಶೇಕಡಾ 90 % ಸಿಗುತ್ತವೆ ಒಂದು ವೇಳೆ ಜಿಲ್ಲಾ ಕೆಂದ್ರದಲ್ಲಿ ಸಿಗಲಿಲ್ಲ ಎಂದಾಗ ಅದನ್ನು ಖರೀದಿ ಮಾಡಿಕೊಡುವ ಕೆಲಸ ಸರ್ಕಾರದ ವ್ಯವಸ್ಥೆಯಾಗಿದೆ. ಆದರೆ ಇಲ್ಲಿ ಪ್ರತಿಯೊಂದು ಸಣ್ಣ ಸಣ್ಣ ಇಂಜೆಕ್ಷನ್ ಗೆ ಹೊರಗಡೆ ಬರೆದು ಕೊಡುವಂತಹ ಸ್ಥಿತಿಯಿದೆ.100 ಹಾಸಿಗೆ ಯುಳ್ಳ ಆಸ್ಪತ್ರೆಯಾಗಿದ್ದರಿಂದ ರಾಜ್ಯ ಮಟ್ಟದ ನಿರ್ದೇಶಕ ಅಡಿಯಲ್ಲಿ ಇರುವಂತದ್ದು ನಾನು ಸುಪರ್ ವೈಜರರಾಗಿ ಕೆಲಸ ಮಾಡುತ್ತೇನೆ,ಇಲ್ಲಿರುವ ಸಮಸ್ಯೆಗಳ ಬಗ್ಗೆ ಕುಲಂಕುಶವಾಗಿ ವಿಚಾರಿಸಿ ನಿರ್ದೇಶನಾಲಕ್ಕೆ ವರದಿ ಸಲ್ಲಿಸುವುದು ಅಷ್ಟೇ ನನ್ನ ಕೆಲಸ. ಸರಕಾರಿ ಸಂಬಳ ತೆಗೆದುಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ದೂರುಗಳು ಬಂದಿದ್ದೆ ಪರಿಶೀಲನೆ ಮಾಡುತ್ತೇನೆ ಹಾಜರಾತಿ ರಿಜಿಸ್ಟರ್ ಅನ್ನು ಪರಿಶೀಲನೆ ಮಾಡಿ ಕಮೀಷನರಿಗೆ ದೂರು ಕೊಡುತ್ತೇನೆ.ಇಸಿಜಿ ಮಿಷಿನ್ ಕಳವು ಆದ ಬಗ್ಗೆ ನನ್ನ ಗಮನಕ್ಕೆ ಇಲ್ಲಾ ತನಿಖೆ ಮಾಡುತ್ತೇನೆ.ಡಾ.ಹನುಮಂತ ರೆಡ್ಡಿ ಅವರನ್ನು ಮುಖ್ಯ ವೈದ್ಯಾಧಿಕಾರಿ ಮುಂದುವರೆದರೆ ಆಸ್ಪತ್ರೆಯಲ್ಲಿನ ವ್ಯವಸ್ಥೆಯು ಸುಧಾರಿಸುವುದಿಲ್ಲ ಅವರ ಮೇಲೆ ಸೂಕ್ತ ಕ್ರಮ ಕೈಗೊಂಡು ಇನ್ನು ಒಂದು ವಾರದಲ್ಲಿ ಆ ಸ್ಥಾನಕ್ಕೆ ಬೇರೆಯವರನ್ನು ನೇಮಕ ಮಾಡುವಂತೆ ಆದೇಶ ಮಾಡಿ ಅವರ ವಿರುದ್ದ ಕ್ರಮ ಕೈಗೊಳ್ಳತೇನೆ ಎಂದು ಭರವಸೆ ನೀಡಿದರು.

ಒಬ್ಬ ಮಹಿಳೆ ನೋವಿಗೆ ಸ್ಪಂದಿಸದಿರುವುದು ಮನುಷ್ಯತ್ವ ಇಲ್ಲದಂತೆ ವರ್ತಿಸಿದ್ದಾರೆಂದು ಅವರನ್ನು ಸೇವೆಯಿಂದ ಅಮಾನತು ಮಾಡಬೇಕು ಅಂದಾಗ ಮಾತ್ರ ಬೇರೆಯವರಿಗೆ ಭಯ ಉಂಟಾಗುತ್ತದೆ ಎಂದು ಸಮಾಜ ಸೇವಕಿ ಡಾ.ನಾಗವೇಣಿ ಅವರು ಈ ಸಂದರ್ಭದಲ್ಲಿ ಆಗ್ರಹಿಸಿದರು.

ವೈದ್ಯಾಧಿಕಾರಿ ಬೇಜವಾಬ್ದಾರಿ ಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ಆರೋಗ್ಯ ವಿಚಾರಿಸಿದರು.

ಈ ಸಂಧರ್ಭದಲ್ಲಿ ವೈದ್ಯಾಧಿಕಾರಿ ಸ್ರೀರೋಗ ತಜ್ಞ ನಾಗರಾಜ ಕಾಟ್ವ, ಮಂಜುನಾಥ, ಸಾರ್ವಜನಿಕರಾದ ವೆಂಕಟೇಶ್ ಬಾದರ್ಲಿ, ಕೆ.ಲಿಂಗರಾಜ ಇತರರು ಸೇರಿದಂತೆ ಉಪಸ್ಥಿತರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend