ಸುಮಾರು 3 ವರ್ಷಗಳ ತನಕ ಇಟ್ಟಿಗಿ ಗ್ರಾಮ ಪಂಚಾಯತಿಯಲ್ಲಿ ಸೇವೆ ಸಲ್ಲಿಸಿ 11-04-2022 ರ ಜಿಲ್ಲಾ ಪಂಚಾಯತಿ ಆದೇಶದಂತೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಬೈಲವದ್ದಿಗೆರೆ ಗ್ರಾ ಪಂ ಗೆ ವರ್ಗಾವಣೆಯಾದ ಉಮೇಶ್ ಸರ್ ಗೆ ಅಭಿನಂದನೆಯನ್ನು ಹೇಳುತ್ತಾ…. ತೆರುವುಗೊಂಡ ಪಿ ಡಿ ಒ ಸ್ಥಾನಕ್ಕೆ ಬಂದಂತ ಉತ್ತಂಗಿ ಗ್ರಾ ಪಂ ಪಿ ಡಿ ಓ ರಾಗಿ ಕಾರ್ಯ ನಿರ್ವಹಿಸುತ್ತಿರುವ ಮತ್ತು ಇಟ್ಟಿಗಿ ಗ್ರಾಮದವರೆ ಆದ ಎಂ ಪ್ರಕಾಶ್ ಸರ್ ರವರಿಗೆ ಸುಸ್ವಾಗತವನ್ನು ಹೆಚ್ ಪ್ರಕಾಶ್ ಕ್ಲರ್ಕ್ ಕಂ ಡಿ ಇ ಒ ಗ್ರಾ ಪಂ ಇಟ್ಟಿಗಿ & ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಸಿಬ್ಬಂದಿ ವರ್ಗದವರು ಮಾಲಾರ್ಪಣೆಯೊಂದಿಗೆ ಸ್ವಾಗತಿಸಿದರು. ಈ ಸುಸಮಯದಲ್ಲಿ ಹೂವಿನ ಹಡಗಲಿ ವಿಧಾನ ಸಭಾ ಕ್ಷೇತ್ರ ಬಿ ಜೆ ಪಿ ಯ ಯುವ ಮೋರ್ಚಾ ಉಪಾಧ್ಯಕ್ಷರಾದ ನಟರಾಜ್ ಅಡೇಗೌಡರು ಹಾಗೂ ಅವರ ಸಹಪಾಠಿಗಳು ಭಾಗಿಯಾಗಿ ಸಂಘದ ಕಾರ್ಯದರ್ಶಿಗಳು ಸಹ ಭಾಗಿಯಾಗಿ ನೂತನ ಪಿಡಿಓ ಅಧಿಕಾರಿಗಳಿಗೆ ಸ್ವಾಗತ ಕೋರಿದರು..

ವರದಿ- ಪ್ರಕಾಶ್ ಆಚಾರ್.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
