ಕೋಮು ದ್ವೇಷದ ವಿರುದ್ಧ ಸೌಹಾರ್ದ ಬೃಹತ್ ಭಾವೈಕ್ಯತಾ ಸಮಾವೇಶದ ಪೂರ್ವಭಾವಿ ಸಭೆ…!!

ಕೋಮು ದ್ವೇಷದ ವಿರುದ್ಧ ಸೌಹಾರ್ದ ಬೃಹತ್ ಭಾವೈಕ್ಯತಾ ಸಮಾವೇಶದ ಪೂರ್ವಭಾವಿ ಸಭೆ.

ಸಿಂಧನೂರು :ರಾಜ್ಯದಲ್ಲಿ ಭುಗಿಲೆದ್ದಿರುವ ಕೋಮು ದ್ವೇಷದ ವಿರುದ್ಧ ಸೌಹಾರ್ದ ಬೃಹತ್ ಭಾವೈಕ್ಯತಾ ಸಮಾವೇಶವನ್ನು ಸಂಘಟಿಸುವ ನಿಮಿತ್ಯ ಹಿರಿಯ ಮುಖಂಡರಾದ,ಬಾಬರ್ ಪಾಷಾ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಸನಗರದ ಕುಷ್ಟಗಿ ರಸ್ತೆಯ ಸರ್ಕ್ಯೂಟ್ ಹೌಸ್ ನಲ್ಲಿ ಇಂದು ಎಲ್ಲಾ ಸಂಘಟನೆಗಳ ಹಾಗೂ ಸಮಾಜದ ಪ್ರಮುಖ ಮುಖಂಡರ ಸಭೆಯು ಯಶಸ್ವಿಯಾಗಿ ಜರುಗಿತು.

ತಾಲೂಕು ಮಟ್ಟದ ಬೃಹತ್‌ ಭಾವೈಕ್ಯತಾ ಸಮಾವೇಶವನ್ನು ಮೇ 8-2022 ರಂದು ಬಾನುವಾರ ಆಯೋಜಿಸಲು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು. ಹಾಗೆಯೇ ಇದರ ಪೂರ್ವಕವಾಗಿ ಸಾಮರಸ್ಯವನ್ನು ಹಾಳು ಮಾಡುತ್ತಿರುವ ಕೋಮುವಾದಿ ಸಂಘಟನೆಗಳ ವಿರುದ್ಧ ಏಪ್ರಿಲ್ 19-2022ರಂದು ತಹಶಿಲ್ದಾರರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲು ತೀರ್ಮಾನಕ್ಕೆ ಬರಲಾಯಿತು.

ಸರ್ವ ಸಂಘಟನೆಗಳ ಹಾಗೂ ಆಯಾ ಸಮಾಜದ ಎಲ್ಲಾ ಮುಖಂಡರನ್ನು ಒಕ್ಕೂಟದ ಸಂಚಾಲಕರಾಗಿ ಕಾರ್ಯನಿರ್ವಹಿಸಲು ತೀರ್ಮಾನವನ್ನು ಕೈಗೊಳ್ಳಲಾಯಿತು. ಇದರಲ್ಲಿ ಸಮಾವೇಶವನ್ನು ಯಶಸ್ವಿಯಾಗಿ ಜರುಗಿಸಲು, ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಲು, ಸಕ್ರೀಯ ಮುಖಂಡರನ್ನೊಳಗೊಂಡು ಸಭೆಯು 24 ಜನ ಪ್ರಧಾನ ಸಂಚಾಲಕರನ್ನಾಗಿ ಆಯ್ಕೆಗೊಳಿಸಲಾಯಿತು.

ಪ್ರಧಾನ ಸಂಚಾಲಕರು : ಜೆ.ರಾಯಪ್ಪ ವಕೀಲರು, ಎಂ.ಗಂಗಾಧರ, ಡಿ.ಹೆಚ್. ಪೂಜಾರ್,ವೆಂಕೋಬನಾಯಕ, ಬಾಬರ್ ಪಾಷಾ ವಕೀಲರು, ಹೆಚ್.ಎನ್.ಬಡಿಗೇರ,ಸೈಯದ್ ಖಾದರ್ ಸುಭಾನಿ, ಡಿ.ಹೆಚ್. ಕಂಬಳಿ,ಚಂದ್ರಶೇಖರ್ ಗೊರೇಬಾಳ,ಆರ್.ಬೋನವೆಂಚರ್,ಅಲ್ಲಮಪ್ರಭು ಪೂಜಾರ್, ಎಸ್.ದೇವೆಂದ್ರಗೌಡ,ವೀರಭದ್ರಪ್ಪ ಕುರುಕುಂದಿ, ಹುಸೇನಸಾಬ, ಅಶೋಕ ನಂಜಲದಿನ್ನಿ, ನಾಗರಾಜ ಪೂಜಾರ್, ಜಿಲಾನಿಪಾಷಾ, ನರಸಪ್ಪ ಕಟ್ಟಿಮನಿ, ಅಮೀನಪಾಷಾ ದಿದ್ದಗಿ, ಶರಣಪ್ಪ ಮರಳಿ, ಮರಿಯಪ್ಪ ಬಿಎಸ್ ಪಿ, ದೌಲಸಾಬ ದೊಡ್ಡಮನಿ, ವೆಂಕಟೇಶ್ ನಾಯಕ, ಹಂಸರಾಜ್ ಇವರನ್ನು ಪ್ರಧಾನ ಸಂಚಾಲಕರನ್ನಾಗಿ ಸರ್ವಾನುಮತದಿಂದ ಸಭೆಯು ಅನುಮೋದಿಸಿತು.

ಮೇ 8 ರಂದು ಆಯೋಜನೆ ಮಾಡಲಾದ ಸಮಾವೇಶದ ಪೂರ್ವ ಸಿದ್ದತೆಯನ್ನು ಪ್ರಧಾನ ಸಂಚಾಲಕರ ಸಭೆಯನ್ನು ಕರೆದು ರೂಪರೇಷಗಳನ್ನು ಅಂತಿಮಗೊಳಿಸಿ ಕಾರ್ಯಪ್ರವೃತ್ತರಾಗಲು ಸಭೆಯು ನಿರ್ಧರಿಸಿತು.

ಈ ಸಭೆಯಲ್ಲಿ ಶಂಕರ ವಾಲೇಕರ,ನಾರಾಯಣ ಬೆಳಗುರ್ಕಿ,ಎಂ.ಡಿ.ನದೀಮುಲ್ಲಾ,ಲಿಂಗರಾಜ ಮಲ್ಲಾಪೂರ, ವಿಜಯಕುಮಾರ,ಬಂದೇನವಾಜ,ಡಾ.ರಾಮಣ್ಣ ಗೋನವಾರ, ಮಹಾದೇವಪ್ಪ ದುಮುತಿ, ಹುಲಿಗೇಯ್ಯ, ಚಿಟ್ಟಿಬಾಬು, ಮಾಬುಸಾಬ ಬೆಳ್ಳಟ್ಟಿ,ಹೆಚ್. ಕೆ.ದಿದ್ದಗಿ,ಹನುಮಂತ ಕರ್ನಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಹಾಗೂ ಸಮಾಜದ ಮುಖಂಡರು ಪಾಲ್ಗೊಂಡಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend