;

ಟೈಗರ್ ಕ್ರಿಕೆಟ್ ಗೆ ಪ್ರಥಮ ಸ್ಥಾನ, ಲೆವನ್ ಬುಲೆಟ್ ಕ್ರಿಕೆಟ್ಗೆ ದ್ವಿತೀಯ ಬಹುಮಾನ…!!!

ಬಿಂದಾಸ್ ಕ್ರಿಕೇಟರ್ಸ- ಇಟ್ಟಿಗಿ ಇವರ ವತಿಯಿಂದ 4ನೇ ಬಾರಿಗೆ ಸ್ಟಂಪರ್ ಬಾಲ್ ಟೂರ್ನಮೆಂಟ್ನಲ್ಲಿ ನ್ಯೂ ಟೈಗರ್ ಕ್ರಿಕೆಟ್ ಗೆ ಪ್ರಥಮ ಸ್ಥಾನ, ಲೆವನ್ ಬುಲೆಟ್ ಕ್ರಿಕೆಟ್ಗೆ ದ್ವಿತೀಯ ಬಹುಮಾನ. ವಿಜಯ ನಗರ ಜಿಲ್ಲಾ, ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮದಲ್ಲಿ ಬಿಂದಾಸ್ ಕ್ರಿಕೇಟರ್ಸ- ಇಟ್ಟಿಗಿ ಇವರ ವತಿಯಿಂದ 4ನೇ ಬಾರಿಗೆ ಸ್ಟಂಪರ್ ಬಾಲ್ ಟೂರ್ನಮೆಂಟ್‌ ನ್ನು ಆಯೋಜಿಸಲಾಗಿತ್ತು. ಈ ಆಯೋಜನೆಯಲ್ಲಿ ಹಲವು ಪಂದ್ಯಗಳ ಹಣಾ-ಹಣಿಯೊಂದಿಗೆ ಪ್ರಥಮ ಸ್ಥಾನವನ್ನು ನ್ಯೂ ಟೈಗರ್ ಕ್ರಿಕೆಟ್ ಹರಪನಹಳ್ಳಿ,
ಲೆವನ್ ಬುಲೆಟ್ ಕ್ರಿಕೆಟ್ ಇಟ್ಟಿಗಿ ದ್ವಿತೀಯ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾದವು. ಟ್ರೋಫಿಯ ಕೊಡುಗೆದಾರರು ಪಿ.ವಿಜಯ್ ಕುಮಾರ್.ಜಿಲ್ಲಾ ಉಪಾಧ್ಯಕ್ಷರು, ಭಾರತೀಯ ಜನತಾ ಪಾರ್ಟಿ ಇವರು. ಪಿ.ಆರ್.ಕೆಟ್ರೋಫಿ ಪ್ರಥಮ ಬಹುಮಾನ 30000/-ಟ್ರೋಫಿ. ದ್ವಿತೀಯ ಬಹುಮಾನ 15000/-ಟ್ರೋಫಿಯನ್ನು ವಿಜಯ ತಂಡಗಳಿಗೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಬಿ,ಸಿದ್ದಪ್ಪ,&ಗ್ರಾಮ ಪ ಸದಸ್ಯರು,ಹಾಗೂ ಕುಂಚೂರ್ ಸತೀಶ್ ಅವರು ವಿಜಯ ತಂಡಗಳಿಗೆ ಬಹುಮಾನವನ್ನು ವಿತರಿಸಿದರು.ಈ ಕಾರ್ಯಕ್ರಮದಲ್ಲಿ ಬಿಂದಾಸ್ ಕ್ರಿಕೆಟ್ ನ ಯುವಕರು, ಹಾಗೂ ಇಟ್ಟಿಗಿ ಗ್ರಾಮದ ಕ್ರೀಡಾಭಿಮಾನಿಗಳು ನೆರೆದಿದ್ದರು.

ವರದಿ-ಪ್ರಕಾಶ್ ಆಚಾರ್.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;