;

ಸಮೀರವಾಡಿ ಅಕ್ರಮ ಮನೆಗಳ ತೆರವು ಶಾಸಕ ಸಿದ್ದು ಸವದಿ ವಿರುದ್ಧ ಗುಡುಗಿದ ಮಾಜಿ ಶಾಸಕಿ ಶ್ರೀಮತಿ ಉಮಾಶ್ರೀ…!!!

ಸಮೀರವಾಡಿ ಅಕ್ರಮ ಮನೆಗಳ ತೆರವು ಶಾಸಕ ಸಿದ್ದು ಸವದಿ ವಿರುದ್ಧ ಗುಡುಗಿದ ಮಾಜಿ ಶಾಸಕಿ ಶ್ರೀಮತಿ ಉಮಾಶ್ರೀ.

ರಬಕವಿ ಬನಹಟ್ಟಿ ತಾಲ್ಲೂಕಿನ ಸೈದಾಪುರ – ಸಮೀರವಾಡಿ ಗ್ರಾಮದಲ್ಲಿ ನೀರಾವರಿ ಇಲಾಖೆಯ ಘಟಪ್ರಭಾ ಎಡದಂಡೆ ಕಾಲುವೆ ಹಾದು ಹೋಗಿದ್ದು ಕಾಲವೆಯ ರಸ್ತೆಗಳ ಮೇಲೆ ಅಕ್ಕ ಪಕ್ಕ ಸುಮಾರು ಮೂವತ್ತು ವರ್ಷಗಳಿಂದ ಕಡು ಬಡಕುಟುಂಬಗಳು ವಾಸ ಮಾಡುತ್ತಿದ್ದವು ಆದರೆ ಕೋರ್ಟ್ ನೀರಾವರಿ ಇಲಾಖೆಯ JLBC ಕಾಲುವೆಗಳನ್ನು ಅಕ್ರಮವಾಗಿ ಯಾರೆ ಅತಿಕ್ರಮಣ ಮಾಡಿದ್ದರು ಅವುಗಳನ್ನು ತೆರವು ಗೊಳಿಸಿ ತಮ್ಮ ಇಲಾಖೆಯ ಜಾಗೆಗಳನ್ನು ಉಳಿಸಿಕೊಳ್ಳುಬೇಕೆ ಎಂದು ಆದೇಶ ಹೊರಡಿಸಿದ್ದರ ಅನ್ವಯ ಮಂಗಳವಾರ ಬೆಳಗ್ಗೆ ನೀರಾವರಿ ಇಲಾಖೆ ತಾಲ್ಲೂಕಾ ಆಡಳಿತ ಮತ್ತು ಪೋಲಿಸ್ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಸುಮಾರು ನೂರಾ ಎಂಬತ್ತಕ್ಕು ಹೆಚ್ಚು ಮನೆಗಳನ್ನು ಮತ್ತು ಅಂಗಡಿಗಳನ್ನು ತೆರವು ಗೋಳಸಿದ್ದರು ಇದರಲ್ಲಿ ಹಲವಾರು ಕುಟುಂಬಗಳು ಬಿದಿಗೆ ಬಿದ್ದು ಅತಂತ್ರ ಸ್ಥಿತಿ ಉಂಟಾಗಿದ್ದು ಇದರಲ್ಲಿ ಶಾಸಕ ಸಿದ್ದು ಸವದಿ ಅವರು ಎರಡು ವರ್ಷಗಳ ಹಿಂದೆನೆ ತೆರವು ಸೂಚನೆ ಕೊಟ್ಟು ಸತ್ಯಾಗ್ರಹ ಕುಳಿತು ಹೋರಾಟ ನಡೆಸಿದ್ದ ನಿವಾಸಿಗಳು ಇದಕ್ಕೆ ಶಾಸಕರು ಸಹ ಆರು ತಿಂಗಳಲ್ಲಿ ಶಾಶ್ವತ ಜಾಗ ಕೊಡುವುದಾಗಿ ಭರವಸೆ ನೀಡಿದ್ದರು ಆದರೆ ಅದನ್ನೆಲ್ಲ ಮರೆತು ಈಗ ಅಧಿಕಾರಿಗಳ ಮೇಲೆ ಗೂಬೆ ಕುಡಿಸುವ ದೊಂದ್ವ ನಿಲುವು ಮಾಡುತ್ತಿದ್ದಾರೆ ಇದು ಕೋರ್ಟ್ ಆದೇಶ ಇದೆ ಎಲ್ಲರೂ ಅದನ್ನು ಪಾಲಿಸಬೇಕು ಎಂದು ಸಮರ್ಥನೆ ಮಾಡಿಕೊಂಡು ಬಡವರ ಮೇಲೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಸ್ಥಳೀಯ JLBC ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿ ಕರೆದು ಮಾಜಿ ಸಚಿವೆ ಹಾಗೂ ತೇರದಾಳ ಮತ ಕ್ಷೇತ್ರದ ಮಾಜಿ ಶಾಸಕಿ ಶ್ರೀಮತಿ ಉಮಾಶ್ರೀ ಮಾತನಾಡಿದರು. ಅಲ್ಲಿನ ಸರಿಯಾದ ಬಡ ಕುಟುಂಬಗಳ ಬಗ್ಗೆ ಅಧ್ಯಯನ ಮಾಡಿ ಅವರಿಗೆ ಸೂರು ಕಲ್ಪಸುವ ಕೆಲಸ ಮಾಡಬೇಕು ಇಲ್ಲದಿದ್ದರೆ ವಿರೋಧ ಪಕ್ಷದ ನಾಯಕರ ಗಮನಕ್ಕೆ ತಂದು ಮನವಿ ಸಲ್ಲಿಸಿ ವಿಧಾನ ಸಭೆಯಲ್ಲಿ ಚರ್ಚಿಸುವುದಾಗಿ ಹೇಳಿದರು ಇದೇ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ನಿರಾಶ್ರಿತರಿಗೆ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿದರು. ಉಪಸ್ಥತಿಯಲ್ಲಿ ರಂಗಣ್ಣಗೌಡ ಪಾಟೀಲ, ಎಸ್ ಎಂ ಉಳ್ಳಾಗಡ್ಡಿ,ಮಲ್ಲಪ್ಪಾ ಸಿಂಗಾಡಿ, ಶ್ರೀಪಾದ ಗೂಂಡಾ, ಲಕ್ಷ್ಮಣ ಮಾಂಗ, ಶಂಕರ ಸೊನ್ನದ,ಪಿಯೂಷ್ ಓಸ್ವಾಲ,ವಿಠ್ಠಲ ಹೊಸಮನಿ,ಸಿದ್ದಪ್ಪಾ ಬೆನ್ನೂರ್,ಬಸವರಾಜ ಪೂಜಾರಿ, ಸತ್ಯಪ್ಪ ಹುದ್ದಾರ್, ಈಶ್ವರ ಚಮಕೇರಿ, ನಾನಾ ಜೋಷಿ, ಸಿದ್ದು ಭೋಸನ್ನವರ, ವಿಠ್ಠಲ ಸಂಶಿ, ಜ್ಯೋತ್ಯಪ್ಪಾ ಕರಿಗಾರ,.

 

ವರದಿ.ಬಸವರಾಜ ನಂದೆಪ್ಪನವರ
ಮಹಾಲಿಂಗಪುರ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;