ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಗುಂಡುಮುಣುಗು ಗ್ರಾಮ ಪಂಚಾಯಿತಿ.
ಶಾಲೆಯ ಹಿಂಭಾಗದಲ್ಲಿ ಹಾಕಿರುವ ತಿಪ್ಪ ಗಳನ್ನು ತೆರವುಗೊಳಿಸುವಂತೆ ಮನವಿ
ಗುಂಡುಮುಣುಗು ಗ್ರಾಮ ಪಂಚಾಯಿತಿಗೆ ಸೇರಿದ ಸಿದ್ದಾಪುರ ಗ್ರಾಮದ ಸಾ ಹಿ ಪ್ರಾ ಶಾಲೆ ಕಾಂಪೌಂಡ್ ಹಿಂಭಾಗದಲ್ಲಿ ಹಾಗೂ ಸಾರ್ವಜನಿಕರು ಓಡಾಡುವ ರಸ್ತೆಯ ಪಕ್ಕದಲ್ಲಿ ಕಸದ ತಿಪ್ಪೆ ಗಳನ್ನು ಹಾಕುತ್ತಿದ್ದಾರೆ, ಸುಮಾರು ತಿಂಗಳುಗಳಿಂದ ಕಸವನ್ನು ಹಾಕುತ್ತಾ ಬಂದಿದ್ದಾರೆ, ಈ ಕಸವು ಗಾಳಿಗೆ ಬಂದು ದಾರಿಯಲ್ಲಿ ಬಿದ್ದು, ಕಸದ ಜೊತೆಯಲ್ಲಿ ಕೆಟ್ಟ ಹುಳು ವಿಷ ಜಂತುಗಳು ದಾರಿಯಲ್ಲಿ ಬರುತ್ತವೆ. ವಿಷದಜಂತುಗಳು ಕಣ್ಣಿಗೆ ಕಾಣುವುದಿಲ್ಲ, ಶಾಲೆಯ ಕಾಂಪೌಂಡ್ ಪಕ್ಕದಲ್ಲಿ ವಾಸಿಸುವ ಕುಟುಂಬಗಳಿದ್ದು ಈ ಕಸವನ್ನು ಹಾಕುವುದರಿಂದ ಅವರ ಆರೋಗ್ಯಕ್ಕೆ ತೊಂದರೆ ಆಗುವುದು ಖಚಿತ,, ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಗಳಲ್ಲಿ ಮನೆಮನೆಗೆಬಕ್ಕೆಟ್ ವಿತರಣೆ ಮಾಡಿ ಘನತ್ಯಾಜ್ಯ ವಿಲೇವಾರಿ ಘಟಕವನ್ನು ಮಾಡಿ, ಕಸವನ್ನು ವಿಲೇವಾರಿ ಘಟಕಕ್ಕೆ ಹಾಕಲುವ್ಯವಸ್ಥೆ ಕಲ್ಪಿಸಲಾಗಿತ್ತು, ಗ್ರಾಮ ಪಂಚಾಯಿತಿ ಕಸವಿಲೇವಾರಿ ಘಟಕ ವಾಹನದ ವ್ಯವಸ್ಥೆಯಿದೆ ಈ ವಾಹನವು ಇದ್ದು ಇಲ್ಲದಂತಾಗಿದೆ, ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ತಮ್ಮ ಗ್ರಾಮಪಂಚಾಯಿತಿ ವಾಹನದ ಧ್ವನಿವರ್ಧಕದ ಮೂಲಕ ಪ್ರತಿಯೊಂದು ಹಳ್ಳಿಗಳಲ್ಲಿ ಸಂಚರಿಸಿ ಸ್ವಚ್ಛತೆಯ ಬಗ್ಗೆ ಜನರಿಗೆ ಜಾಗೃತಿ ಮೂಡಿಸಿ ಸಾರ್ವಜನಿಕ ಸ್ಥಳಗಳಲ್ಲಿ ದೇವಸ್ಥಾನಗಳ ಪಕ್ಕದಲ್ಲಿ, ಕುಡಿಯುವ ನೀರಿನ ಪಕ್ಕದಲ್ಲಿ, ಕಸದ ರಾಶಿಗಳನ್ನು ಮತ್ತು ತಾಜ್ಯ ವಸ್ತುಗಳನ್ನು ಹಾಕದಂತೆ ಜಾಗೃತಿ ಮೂಡಿಸಿ, ಈಗ ಹಾಲಿ ಹಾಕಿರುವ ಕಸದ ರಾಶಿಗಳನ್ನು ತೆರವುಗೊಳಿಸುವಂತೆ ಸಿದ್ದಾಪುರ ಗ್ರಾಮಸ್ಥರು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
