;

ನಂದಿಬೇವೂರು ಮಹಿಳಾ ಹಾಲು ಉತ್ಪಾದಕ ಸಹಕಾರ ಸಂಘದಿಂದ 25ನೇ ವರ್ಷದ ವಾರ್ಷಿಕ ಸಮಾರಂಭ ಆಚರಿಸಲಾಯಿತು…!!!

ನಂದಿಬೇವೂರು ಮಹಿಳಾ ಹಾಲು ಉತ್ಪಾದಕ ಸಹಕಾರ ಸಂಘದಿಂದ 25ನೇ ವರ್ಷದ ವಾರ್ಷಿಕ ಸಮಾರಂಭ ಆಚರಿಸಲಾಯಿತು…….

ಹರಪನಹಳ್ಳಿ ತಾಲೂಕನ ನಂದಿಬೇವೂರು ಗ್ರಾಮದಲ್ಲಿ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ 25ನೇ ವರ್ಷದ ವಾರ್ಷಿಕೋತ್ಸವ ಸಮಾರಂಭವನ್ನು ನಡೆಸಲಾಯಿತು ಈ ಸಮಾರಂಭದಲ್ಲಿ ಹಾಲು ಉತ್ಪಾದಕ ಮಹಿಳಾ ಸಂಘದ ಕಚೇರಿಯ ಹರಪನಹಳ್ಳಿಯ ಮ್ಯಾನೇಜರ್ ಆದ ಪರಮೇಶಪ್ಪ ಟಿ ಎನ್ ಹಾಗೂ ನಂದಿಬೇವೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಅಧ್ಯಕ್ಷರಾದ ರತ್ನಮ್ಮ ಉಪಾಧ್ಯಕ್ಷರಾದ ಸುಪುತ್ರಮ್ಮ ಹಾಗೂ ಸದಸ್ಯರಾದ ಪಾರ್ವತಮ್ಮ ಭೋವಿ ಸಿದ್ದಮ್ಮ ದಾಸರ ಜ್ಯೋತಿ ಪವಿತ್ರ ಸಹ ಇತರ ಸದಸ್ಯರು ಹಾಜರಿದ್ದರು ಕಾರ್ಯಕ್ರಮವನ್ನುದ್ದೇಶಿಸಿ ಸಂಘದ ಕಾರ್ಯದರ್ಶಿಯಾದ ಮೋಹನ್ ಕುಮಾರ್ ಅವರು ಆಗಮಿಸಿದ ಎಲ್ಲಾ ಗಣ್ಯರಿಗೂ ಸ್ವಾಗತವನ್ನು ಕೋರಿದರು ನಂತರದಲ್ಲಿ ಉತ್ಪಾದಕರ ಸಂಘದ ಮ್ಯಾನೇಜರ್ ಆದ ಪರಮೇಶಪ್ಪ ಟಿ ಎಂ ಅವರು 25 ಕೆಜಿ ಕೇಕನ್ನು ಕತ್ತರಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು ನಂತರ ಸಮಾರಂಭವನ್ನು ಕುರಿತು ಮಾತನ್ನು ಪ್ರಾರಂಭಿಸಿದರು ಸದಸ್ಯರೆಲ್ಲರಿಗೂ ಹಾಲಿನ ಗುಣಮಟ್ಟ ಶುಚಿತ್ವ ಹಾಗೂ ಸರ್ಕಾರದಿಂದ ಬರುವಂತಹ ಪ್ರೋತ್ಸಾಹಧನದ ಕುರಿತು ಮಾಹಿತಿಯನ್ನು ತಿಳಿಸಿದರು ಈ ಕಾರ್ಯಕ್ರಮದಲ್ಲಿ ಗ್ರಾಮದ ಗಣ್ಯರು ಹಿರಿಯರು ಬುದ್ಧಿಜೀವಿಗಳು ಭಾಗವಹಿಸಿದ್ದರು ಹಾಲನ್ನು ಪೂರೈಸುವ ಎಲ್ಲಾ ಸದಸ್ಯರಿಗೂ ಉಚಿತವಾಗಿ ಹಾಲಿನ ಕ್ಯಾನ್ ಗಳನ್ನು ವಿತರಣೆ ಮಾಡಲಾಯಿತು…

ವರದಿ.ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;