;

ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಮುಂದಿನ ಶಾಸಕ ಆಗಲೆಂದು ಹರಕೆ ಹೊತ್ತ ಬಿ.ಮುರಳಿ ಕೃಷ್ಣ ಅಭಿಮಾನಿಗಳು…!!!

ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಮುಂದಿನ ಶಾಸಕ ಆಗಲೆಂದು ಹರಕೆ ಹೊತ್ತ ಬಿ.ಮುರಳಿ ಕೃಷ್ಣ ಅಭಿಮಾನಿಗಳು…

ಹೂವಣ್ಣಿನ ಮೇಲೆ ಮುಂದಿನ ಶಾಸಕರು ಬಿ. ಮುರಳಿ ಕೃಷ್ಣ ಎಂದು ಬರೆದು ಅಭಿಮಾನಿಗಳು ದೇವರಿಗೆ ಹರೆಕೆ ಹೊತ್ತ ಪ್ರಸಂಗ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ತೆಕ್ಕಲಕೊಟ್ಟೆ ಪಟ್ಟಣದ ಶ್ರೀ ಕಾಡಸಿದ್ದೇಶ್ವರ ರಥೋತ್ಸವದಲ್ಲಿ ನಡೆದಿದೆ. ಹೌದು ಸಿರುಗುಪ್ಪ ತಾಲೂಕಿನ ತೆಕ್ಕಲಕೊಟ್ಟೆ ಪಟ್ಟಣದ ಶ್ರೀ ಕಾಡಸಿದ್ದೇಶ್ವರ ರಥೋತ್ಸವ ಏಪ್ರಿಲ್ 2ರಂದು ನಡೆದಿದೆ.

ಈ ರಥೋತ್ಸವದಲ್ಲಿ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಹೂವು ಹಣ್ಣು ಎಸೆಯುವುದು ಪುರಾತನ ಕಾಲದಿಂದಲೂ ವಾಡಿಕೆಯಾಗಿ ಬಂದಿರುವುದು ನಮ್ಮೆಲ್ಲರಿಗೆ ತಿಳಿದಿರುವ ವಿಷಯವೇ ಸರಿ. ಹೀಗಾಗಿ ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ನೆಚ್ಚಿನ ನಾಯಕರಾದ ಬಿ. ಮುರಳಿ ಕೃಷ್ಣ ಮುಂದಿನ ಶಾಸಕ ಯಾಗಲಿ ಎಂದು ಹಣ್ಣಿನ ಮೇಲೆ ಮುಂದಿನ ಶಾಸಕ ಬಿ. ಮುರಳಿ ಕೃಷ್ಣ ಎಂದು ಬರೆದು ತೇರಿಗೆ ಎಸೆಯುವ ಮೂಲಕ ಹರಕೆ ಹೊತ್ತಿದ್ದಾರೆ.

ಈಗಾಗಲೇ ಬಿ. ಮುರಳಿ ಕೃಷ್ಣ ನವರನ್ನು ಸಿರುಗುಪ್ಪ ಕ್ಷೇತ್ರ ದಲ್ಲಿ ಕೊಡಗೈ ದಾನಿ ಎಂದು ಕರೆಯುತ್ತಾರೆ.
ಶಾಸಕರಾದರೆ ಇನ್ನಷ್ಟು ಅಭಿವೃದ್ಧಿ ಕಾಣುತ್ತೇವೆ ಎನ್ನುವಲ್ಲಿ ಅನುಮಾನವೇ ಇಲ್ಲ. ಹೀಗಾಗಿ ಈ ಎಲ್ಲ ಆಸೆಗಳು ಈಡೇರಲಿ ಎಂದು ಹರಕೆ ಹೊತ್ತಿದ್ದೇವೆ ಎಂದು ಬಿ. ಮುರಳಿ ಕೃಷ್ಣ ನವರ ಅಭಿಮಾನಿಗಳು ತಿಳಿಸಿದ್ದಾರೆ…

ವರದಿ. ವಿರೇಶ್, ಎಚ್, ಸಿರಿಗುಪ್ಪ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;