“ದುಡಿಯೋಣ ಬಾ ಅಭಿಯಾನ”ದಿಂದ ಬೇಸಿಗೆಯಲ್ಲಿ ನಿರಂತರ ಕೆಲಸ”
“ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಏ.1ರಿಂದ ನರೇಗಾ ಕೂಲಿ ದರ 309 ರೂ.ಗೆ ಹೆಚ್ಚಳ:ಜಿಪಂ ಸಿಇಒ”
ಹೊಸಪೇಟೆ(ವಿಜಯನಗರ),: ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ನಿರಂತರವಾಗಿ ಕೆಲಸ ಒದಗಿಸುವ ಉದ್ದೇಶದಿಂದ ಜೂನ್ ಅಂತ್ಯದವರೆಗೆ “ದುಡಿಯೋಣ ಬಾ ಅಭಿಯಾನ” ವನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿಜಯನಗರ ಜಿಪಂ ಸಿಇಒ ಬೊಯರ್ ಹರ್ಷಲ್ ನಾರಯಣರಾವ್ ಅವರು ತಿಳಿಸಿದ್ದಾರೆ.

ಬೇಸಿಗೆಯಲ್ಲಿ ಜಮೀನಿನಲ್ಲಿ ಕೆಲಸ ಇಲ್ಲದೆ ಜನರು ವಲಸೆ ಹೋಗುವುದನ್ನು ತಪ್ಪಿಸಲೆಂದು ಕೇಂದ್ರ ಸರಕಾರವು ಮಹಾತ್ಮಗಾಂದಿ ನರೇಗಾ ಯೋಜನೆಯಡಿಯಲ್ಲಿ ದುಡಿಯೋಣ ಬಾ ಅಭಿಯಾನ ಅನುಷ್ಠಾನದಿಂದ ಸ್ಥಳೀಯ ಕೂಲಿ ಕಾರ್ಮಿಕರ ಕೈಗೆ ಕೆಲಸ ನೀಡುವುದಲ್ಲದೆ, ಕೂಲಿಯ ದರದಲ್ಲೂ ಹೆಚ್ಚಳಗೊಳಿಸಿ ಸರಕಾರ ಆದೇಶಿಸಿದೆ.
ಜೂ.15ರವರೆಗೆ ದುಡಿಯೋಣ ಬಾ ಅಭಿಯಾನ, ಜಲಶಕ್ತಿ ಅಭಿಯಾನ ಚಾಲ್ತಿಯಲ್ಲಿದ್ದು ಬೇಸಿಗೆಯ ಅವಧಿಯಲ್ಲಿ ಆಯಾ ಊರುಗಳಲ್ಲೇ ಚೆಕ್ ಡ್ಯಾಂ, ಕೆರೆ ಹೊಳೆತ್ತುವುದು, ಕ್ಷೇತ್ರ ಬದು ನಿರ್ಮಾಣ, ಎರೆ ಹುಳು ತೊಟ್ಟಿ, ದನದ ಕೊಟ್ಟಿಗೆ, ಕುರಿ ಕೋಳಿ ಶೇಡ್ ನಿರ್ಮಾಣ, ಶಾಲಾ ಕಂಪೌಡ್, ನಾಲಾ ಹೊಳೆತ್ತುವುದು ಅರಣ್ಯೀಕರಣ ಸೇರಿದಂತೆ ನಾನಾ ಕೆಲಸಗಳನ್ನು ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಮಾಡಲು ಅವಕಾಶವಿದ್ದು ವಿಜಯನಗರ ಜಿಲ್ಲೆಯ ಗ್ರಾಮೀಣ ಭಾಗದ ಜನರು ಹೆಚ್ಚಾಗಿ ಇದರ ಲಾಭ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.
ಏಪ್ರಿಲ್ 1ರಿಂದ ಕೂಲಿದರವನ್ನು 289 ರೂ.ಗಳಿಂದ 309 ರೂ.ಗೆ ಹೆಚ್ಚಿಸಿ ಕೇಂದ್ರ ಸರಕಾರ ಅದೇಶ ಹೊರಡಿಸಿದೆ.
ದುಡಿಯಲು ಇಚ್ಚಿಸುವವರು ಉದ್ಯೋಗ ಚೀಟಿಗಾಗಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿ ಜಾಬ್ ಕಾರ್ಡ್ ಪಡೆದು ತಮ್ಮ ಗ್ರಾಮದಲ್ಲಿ ಕೆಲಸ ಪಡೆಯಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ….

ವರದಿ. ಗಣೇಶ್ ಹೊಸಪೇಟೆ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
