ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವುದು ನಮ್ಮ ಗುರಿ – ಡಿ.ಕೆ. ಶಿವಕುಮಾರ
ಸಿಂಧನೂರು : ಬಸನಗೌಡ ಬಾದರ್ಲಿ ತಾಲೂಕಿನಲ್ಲಿ ಅನ್ನದಾಸೋಹ ದಂತ ಇನ್ನಿತರ ಸಮಾಜಸೇವೆ ಮಾಡುತ್ತಾ ಬಂದಿದ್ದಾರೆ. ಅವರಿಗೆ ಮತ್ತು ಸಹಾಯ ಸಹಕಾರ ನೀಡಿದ ಕಾರ್ಯಕರ್ತರಿಗೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸಮಾಜ ಸೇವೆ ಮಾಡುವ ಶಕ್ತಿ ಆ ಭಗವಂತ ಕರುಣಿಸಲಿ ಎಂದು ವ್ಯಯಕ್ತಿಕವಾಗಿ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸಿದರು.ಮುಖ್ಯಮಂತ್ರಿಯಾರಾಗಬೇಕೆಂಬುದು ಸೋನಿಯಾಗಾಂಧಿ ರಾಹುಲ್ ಗಾಂಧಿ ಪಕ್ಷದ ಶಾಸಕರು ತೀರ್ಮಾನಿಸುತ್ತಾರೆ. ನಮ್ಮ ಗುರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರುವುದು ಮಾತ್ರ ಎಂದು ಕೆಪಿಸಿಸಿ ಅಧ್ಯಕ್ಷರಾದ ಡಿ. ಕೆ. ಶಿವಕುಮಾರ ಹೇಳಿದರು.
ಬಸನಗೌಡ ಬಾದರ್ಲಿ ಪೌಂಡೇಷನ ವತಿಯಿಂದ ತಾಲೂಕಿನ ಬನ್ನಿಗನೂರು ಗ್ರಾಮದಲ್ಲಿ ಹಮ್ಮಿಕೊಂಡಿರುವ ಶ್ರೀಶೈಲ ಮಲ್ಲಿಕಾರ್ಜುನ ಪಾದಯಾತ್ರಿಗಳಿಗೆ 16 ನೇ ವರ್ಷದ ದಾಸೋಹ ಕಾರ್ಯಕ್ರಮದ 5 ನೇ ದಿನದ ಸೇವೆಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ತುಳಸಿ ಗಿಡಕ್ಕೆ ನಿರೇರಿಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಬಸನಗೌಡ ಬಾದರ್ಲಿ ಮಾತನಾಡಿ ಡಿಕೆ ಶಿವಕುಮಾರವರು ಯುವಕರಿಗೆ ಹೆಚ್ಚು ಸ್ಪೂರ್ತಿ ತುಂಬುತ್ತಿದ್ದಾರೆ. ಅವರು ನನಗೆ ಅಣ್ಣನ ಸ್ಥಾನದಲ್ಲಿದ್ದು ನನ್ನ ಎಲ್ಲಾ ಕೆಲಸಗಳಿಗೆ ಬೆನ್ನುತಟ್ಟಿ ಪ್ರೋತ್ಸಾಹಿಸಿದ್ದಾರೆ. 2023 ರ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸುತ್ತಾರೆ ಎಂದು ಹೇಳಿದರು.

ಈ ಕಾರ್ಯಕ್ರಮದ ನೇತೃತ್ವವನ್ನು ತಾಲೂಕಿನ ವಿವಿಧ ಮಠದ ಶ್ರೀ ಮ.ನಿ.ಪ್ರ ಮಹಾಲಿಂಗಮಹಾಸ್ವಾಮಿಗಳು, ಶ್ರೀ ಷ.ಬ್ರ.ಸೋಮನಾಥ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಮ.ನಿ.ಪ್ರ ಸಿದ್ದಬಸವ ಮಹಾಸ್ವಾಮಿಗಳು, ಶ್ರೀ ಗುರು ಶಂಭುಲಿಂಗ ಮಹಾಸ್ವಾಮಿಗಳು, ಶ್ರೀ ಮ.ನಿ.ಪ್ರ ಬಸವಭೂಷಣ ಮಹಾಸ್ವಾಮಿಗಳು, ಶ್ರೀ ಷ.ಬ್ರ. ಮಹಾಂತ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ಷ.ಬ್ರ. ರಾಚೋಟಿ ಶಿವಾಚಾರ್ಯ ಮಹಾಸ್ವಾಮಿಗಳು, ಶ್ರೀ ವೇ.ಮೂ.ಸಿದ್ದರಾಮ ಶರಣರು, ಶ್ರೀ ಮಾದಯ್ಯಸ್ವಾಮಿಗಳು, ಶ್ರೀ ಕುಮಾರಸ್ವಾಮಿ ತಾತನವರು, ಶ್ರೀ ಗಫೂರ ತಾತನವರ ದಿವ್ಯ ಸಾನಿಧ್ಯದಲ್ಲಿ ವಹಿಸಿಕೊಂಡಿದ್ದರು.
ಎನ್ ಎಸ್ ಭೋಸರಾಜ, ಶರಣಪ್ಪ ಮಟ್ಟೂರು, ಸೂರಜ್ ಹೆಗಡೆ, ಶಿವಕುಮಾರ ಜವಳಿ, ಅರ್.ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಅಮರೇಶ ಗಿರಿಜಾಲಿ, ಖಾಜಾಹುಸೇನ ರೌಡಕುಂದಾ, ಹಬೀಬಖಾಜಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು…
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
